WhatsApp Image 2024-05-09 at 1.39.17 PM

ಅಂಚೆ ಇಲಾಖೆಯಿಂದ ಪ್ರಾಮಾಣಿಕ ಸೇವೆ : ಮಂಜುನಾಥ ಶೆಟ್ಟಿ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 9- ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವುದು ಸೇರಿದಂತೆ ಹಲವಾರು ಸೇವೆಗಳನ್ನು ಪ್ರಮಾಣಿಕ ಸೇವೆ ನೀಡುತ್ತಿದೆ ಎಂದು ಪೋಸ್ಟ್ ಮಾಸ್ಟರ್ ಮಂಜುನಾಥ ಶೆಟ್ಟಿ ಅವರು ಹೇಳಿದರು.

ಸಿರುಗುಪ್ಪ ನಗರದ ಪ್ರಧಾನ ಮುಖ್ಯ ಅಂಚೆ ಕಚೇರಿಯಲ್ಲಿ ಪೋಸ್ಟ್ ಫೋರಂ ಮೀಟಿಂಗ್ ಸಭೆಯಲ್ಲಿ ಸರ್ವರನ್ನು ಸ್ವಾಗತಿಸುತ್ತಾ ಮಾತನಾಡುತ್ತಿದ್ದರು ಪೋಸ್ಟ್ ಫೋರಂ ಎಂ ಡಿ ಜಿ, ಎಸ್ ಜಿ ಪಿ, ಸದಸ್ಯರಾದ ಎ ಅಬ್ದುಲ್ ನಬಿ ಅವರು ಮಾತನಾಡಿ ದೇಶದ ಎಲ್ಲ ಇಲಾಖೆಗಳಿಗಿಂತ ನಿಸ್ವಾರ್ಥ ಸೇವೆ ಹಾಗೂ ಪ್ರಾಮಾಣಿಕತೆ ಉಳಿದುಕೊಂಡಿರುವ ಏಕೈಕ ಇಲಾಖೆ ಎಂದರೆ ಅದು ಅಂಚೆ ಇಲಾಖೆ ಭಾರತ ದೇಶದ ಅಂಚೆ ಇಲಾಖೆಯ ಸೇವೆಯನ್ನು ಮತ್ತು ಅಂಚೆ ಕಚೇರಿಯನ್ನು ಸ್ವಚ್ಛವಾಗಿ ಅಚ್ಚುಕಟ್ಟಾಗಿ ಇಟ್ಟು ಕೊಂಡಿದ್ದರಿಂದ ಸಿಬ್ಬಂದಿಯವರಿಗೆ ಮತ್ತು ಅವರ ಸೇವೆಗೆ ಶ್ಲಾಘಿಸುತ್ತ ಪಿಂಚಣಿ ದಾರರಿಗೆ ಓ ಎ ಪಿ,ಪಿ ಹೆಚ್ ಪಿ,ಡಿ ಡಬ್ಲ್ಯು ಪಿ ಪಿಂಚಣಿ ಪಾವತಿಗಳು ಮತ್ತು ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್ ಕೆಲಸಕ್ಕಾಗಿ ಶ್ರಮಿಸುತ್ತಾ ಅಂಚೆ ಇಲಾಖೆ ಅತ್ಯಂತ ಹಳೆಯ ಇಲಾಖೆಯಾಗಿದೆ ಪತ್ರಗಳು ಸಂದೇಶಗಳನ್ನು ರವಾನಿಸುವ ಕೆಲಸದಿಂದ ಇಂದು ಡಿಜಿಟಲ್ ಹಣಕಾಸು ವ್ಯವಹಾರ ನಿರ್ವಹಿಸುವಷ್ಟರ ಮಟ್ಟಿಗೆ ಅಭಿವೃದ್ಧಿ ಹೊಂದಿ ಉನ್ನತ ಸೇವೆಗಳನ್ನು ನೀಡುತ್ತಿದೆ ಅಂಚೆ ಇಲಾಖೆಯ ಸಿಬ್ಬಂದಿ ಗ್ರಾಹಕರೊಡನೆ ವ್ಯವಹರಿಸುವಾಗ ತಾಳ್ಮೆಯಿಂದ ಗೌರವದಿಂದ ವರ್ತಿಸುತ್ತಾರೆ ಇದು ಎಲ್ಲಾ ಇಲಾಖೆಗಳಲ್ಲಿಯೂ ಕಾಣ ಸಿಗುವುದಿಲ್ಲ ಅಲ್ಲದೆ ಯಾವುದೇ ಆಸೆ ಗಳಿಲ್ಲದ ಪ್ರಾಮಾಣಿಕ ಸೇವೆಯನ್ನು ಅಂಚೆ ಇಲಾಖೆ ಸಮಾಜಕ್ಕೆ ನೀಡುತ್ತಾ ಬಂದಿದೆ ಬಹುಶ ಪ್ರಾಮಾಣಿಕತೆ ಉಳಿದುಕೊಂಡಿರುವ ಏಕೈಕ ಇಲಾಖೆ ಎಂದರೆ ಅದು ಅಂಚೆ ಇಲಾಖೆ ಪಾಸ್ಪೋರ್ಟ್ ಆಧಾರ್ ನೋಂದಣಿ ತಿದ್ದುಪಡಿ ಪ್ಯಾನ್ ಕಾರ್ಡ್ ವಿತರಣೆ ಉಳಿತಾಯ ಯೋಜನೆಗಳು ಠೇವಣಿ ಸೇವೆಗಳು ಡಿಜಿಟಲ್ ಬ್ಯಾಂಕಿಂಗ್ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವುದು ಸೇರಿದಂತೆ ಹಲವಾರು ಸೇವೆಗಳನ್ನು ನೀಡುತ್ತಿದೆ ಅಂಚೆ ಇಲಾಖೆಯ ಸಿಬ್ಬಂದಿಯವರು ನೀಡುತ್ತಿರುವ ಪ್ರಾಮಾಣಿಕ ಸೇವೆಗೆ ಶ್ಲಾಘಿಸಿದರು.

ಮತ್ತೊಬ್ಬ ಸದಸ್ಯ ಜೈ ಸಿಂಗ್ ಅಲ್ವರಿ ಅವರು ಮಾತನಾಡಿ ಪ್ರತಿ ವಾರ ಶ್ರಮದಾನ ನಡೆಸುವ ಮೂಲಕ ಅಂಚೆ ಕಛೇರಿಯನ್ನು ಸ್ವಚ್ಛವಾಗಿ ಅಚ್ಚುಕಟ್ಟಾಗಿ ಇರಿಸಿಕೊಂಡಿದ್ದಕ್ಕೆ ಸಿಬ್ಬಂದಿಯನ್ನು ಶ್ಲಾಘಿಸಿ ಆಧಾರ್ ಅಪ್ಡೇಟ್ ಕಾರ್ಯ ತುಂಬಾ ಮೆಚ್ಚುಗೆ ಯಾಗಿದೆ ಎಂದರು.

ಎಲ್ಲಾ ಸದಸ್ಯರಿಗೆ ಸಿಬ್ಬಂದಿ ವರ್ಗದವರಿಗೆ ಹನುಮಂತರೆಡ್ಡಿ ಅವರು ವಂದನಾರ್ಪಣೆ ಮಾಡಿದರು ಸಮಾಜ ಸೇವಕ ಮೊಹಮ್ಮದ್ ನೌಶಾದ್ ಅಲಿ ಅಂಚೆ ಕಚೇರಿಯ ಸಿಬ್ಬಂದಿ ವರ್ಗದವರು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!