ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಾರ್ಷಿಕ ಸಾಮಾನ್ಯ ಸಭೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,11- ತಾಲೂಕಿನ ಕವಲೂರಿನ ಶ್ರೀ ಕಲ್ಪವೃಕ್ಷ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟ (ರಿ) ದ ವಾರ್ಷಿಕ ಸಾಮಾನ್ಯ ಸಭೆಯನ್ನು ನಿವೃತ್ತ ಯೋಧರಾದ ಶ್ರೀ ನಾಗಬಸಯ್ಯ, ಶ್ರೀ ರವಿ ರವರಿಂದ ಹಾಗೂ ಒಕ್ಕೂಟ ಅಧ್ಯಕ್ಷರಾದ ಗಂಗಮ್ಮ ರವರಿಂದ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು.
ಸದರಿ ಸಭೆಯನ್ನು ಉದ್ದೇಶಿಸಿ, ತಾಲೂಕು ಪಂಚಾಯತನ ಸಂಜೀವಿನಿ ಯೋಜನೆಯ ವಲಯ ಮೇಲ್ವಿಚಾರಕರಾದ ಶ್ರೀ ವೆಂಕಟೇಶ ಮಾತನಾಡುತ್ತಾ, ಸಂಜೀವಿನಿ ಯೋಜನೆಯು ಪ್ರಾರಂಭದಿಂದ ಇವತ್ತಿನ ದಿನಗಳವರೆಗೆ ನಡೆದ ಬಂದ ದಾರಿ ಹಾಗೂ ಉತ್ತಮ ಬದಲಾವಣೆ ತಿಳಿಸುತ್ತಾ, ಸದರಿ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟದ ಪೂರ್ವದಲ್ಲಿ 45 ಸ್ವಸಹಾಯ ಸಂಘಗಳಿದ್ದವು, ಇಂದು 105 ಸಂಘಗಳು ರಚನೆಗೊಂಡವೆ. ಇದು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸಂಘಗಳ ಒಕ್ಕೂಟ ಎಂದು ಹೆಗ್ಗಳಿಕೆ ಪಡೆದಿದೆ ಎಂದರು.
ಸದರಿ ರಚನೆಗೊಂಡ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ಈ ಯೋಜನೆಯ ಮಾರ್ಗಸೂಚಿಗಳನ್ವಯ ಕಾಲಕಾಲಕ್ಕೆ ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಕೃಷಿ & ಕೃಷಿಯೇತರ ಚಟುವಟಿಕೆಗಳನ್ನು ಕೈಗೊಂಡು ಅರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ.
ಈ ಒಕ್ಕೂಟದಡಿಯ ಸ್ವಸಹಾಯ ಸಂಘಗಳು ಅತೀ ಹೆಚ್ಚು ಸಮುದಾಯ ಬಂಡವಾಳ ನಿಧಿಯನ್ನು ಹಾಗೂ ಬ್ಯಾಂಕ್ ಲಿಂಕೇಜ್ ನ್ನು ಹೊಂದಿ, ಉದ್ಯಮಿಗಳಾಗಲು ಈ ಸಂಜೀವಿನಿ ಯೋಜನೆ ಸಹಕಾರಿಯಾಗಿದೆ. ಹೀಗೆ ಹಲವಾರು ಯೋಜನೆಗಳನ್ನು ಒಕ್ಕೂಟದ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ ಎಂದು ಹೇಳಿದರು.
ಈ ಸಮಯದಲ್ಲಿ ಸಂಜೀವಿನಿ ಯೋಜನೆಯಲ್ಲಿ ಸಮುದಾಯ ಬಂಡವಾಳ ನಿಧಿಯನ್ನು ಪಡೆದು ಕೃಷಿಯೇತರ ಆದಾಯೋತ್ಪನ್ನ ಚಟುವಟಿಕೆ ಆರಂಭಿಸಿ, ಲಕ್ಷ ರೂಪಾಯಿ ಮೇಲ್ಪಟ್ಟ ಆದಾಯ ಗಳಿಸಿ “ಲಖಪತಿ” ಗಳಾದ ಸಂಜೀವಿನಿ ಸಂಘದ ಸದಸ್ಯರುಗಳಿಗೆ ಇಂದು ಘನ ಭಾರತ ಸರ್ಕಾರದ ಮಾನ್ಯ ಪ್ರಧಾನ ಮಂತ್ರಿಗಳರವರು ಯೂಟ್ಯೂಬ್ ಮೂಲಕ ನಡೆಯುತ್ತಿರುವ ಲಖಪತಿ ದೀದಿ ಕಾರ್ಯಕ್ರಮದ ಅಂಗವಾಗಿ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಹಾಗೂ ಒಕ್ಕೂಟದ ವತಿಯಿಂದ ದುರ್ಬಲ ವರ್ಗದವರಿಗೆ VRF ನಿಧಿಯ ಚೆಕ್ ನ್ನು ಇಬ್ಬರಿಗೆ ವಿತರಿಸಲಾಯಿತು.
ಸದರಿ ಸಭೆಯಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀಮತಿ ಸುಮಿತ್ರಾ, ನಿವೃತ್ತ ಯೋಧರಾದ ನಾಗಬಸಯ್ಯ ಹಿರೇಮಠ ಮತ್ತು ಶ್ರೀ ರವಿ ಗಡ್ಡದ, PKGB ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ಅರುಣಕುಮಾರ, ಪತ್ರಕರ್ತರಾದ ಶ್ರೀ ಸುರೇಶ ಸಂಗರೆಡ್ಡಿ, ಸದರಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ, ಕಾರ್ಯದರ್ಶಿಯಾದ ಶ್ರೀಮತಿ ಶೋಭಾ, ಖಜಾಂಚಿಯಾದ ಶ್ರೀಮತಿ ರೇಣುಕಾ ಹಾಗೂ ಸರ್ವ ಪದಾಧಿಕಾರಿಗಳು ಮತ್ತು ಒಕ್ಕೂಟದ ಸಿಬ್ಬಂದಿಗಳಾದ MBK ಶಮೀಮ್ ಭಾನು, LCRP ಗಳಾದ ಶೋಭಾ, ರತ್ನ, ಶೈಲಜಾ, ಪಶು ಸಖಿ ವಿಜಯಲಕ್ಷ್ಮಿ ಹಾಗೂ ಎಲ್ಲಾ ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರು ಹಾಜರಿದ್ದರು.
