ಅಂಬೇಡ್ಕರ್ ಈ ಭೂಮಿಗೆ ದೈವ ರೂಪದಲ್ಲಿ ಬಂದವರು : ವೆಂಕಟೇಶ್
ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ, 14- ಪಟ್ಟಣದ 15ನೇ ವಾರ್ಡಿನಲ್ಲಿರುವ ಎ. ಕೆ. ಕಾಲೋನಿಯ ಸರಕಾರಿ ಪ್ರಥಮಿಖ ಶಾಲೆಯಲ್ಲಿ ಡಾ. ಬಿ. ಆರ್.ಅಂಬೇಡ್ಕರ್ ಅವರ 133ನೇ ಜಯಂತುತ್ಸವವನ್ನು ಆಚರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ವೆಂಕಟೇಶ್ ಮಾತನಾಡಿ ಅಂಬೇಡ್ಕರ್ ಅವರು ಈ ಭೂಮಿಗೆ ದೈವದ ರೂಪದಲ್ಲಿ ಬಂದು 2,600ವರ್ಷಗಳ ಹಿಂದಿನ ವ್ಯವಸ್ಥೆಯ ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ ತಾರತಮ್ಯವನ್ನು ಅನುಭವಿಸುತ್ತಾ ಬಂದಿದ್ದೆವು, ಈ ಮಹಾವ್ಯಕ್ತಿ ಮದ್ದು, ಗುಂಡು, ಚಾಕು, ಚೂರಿ, ಯುದ್ಧಗಳಿಂದ ಸರಿಪಡಿಸದೆ ಇರುವಂತ ಕೆಲಸವನ್ನು ತಮ್ಮ ಜ್ಞಾನದ ಶಕ್ತಿಯಿಂದ ಪೆಣ್ಣಿನೊಂದಿಗೆ ಸಂವಿಧಾನ ರಚಿಸುವ ಮೂಲಖ ಕೇವಲ 40ವರ್ಷಗಳಲ್ಲಿ ಮಾಡಿ ದಾರಿದೀಪವನ್ನಾಗಿ ಮಾಡಿಕೊಟ್ಟಿದ್ದಾರೆ.
ಅವರ ಜೀವಿತ ಅವಧಿಯಲ್ಲಿ 2ಲಕ್ಷ ಪುಸ್ತಕಗಳನ್ನು ಓದಿ ಕಂಠಪಂಟಾ ಮಾಡಿದಂತಹ ಮಹಾನ್ ವ್ಯಕ್ತಿ. ಅವರ ಒಂದು ಓದಿನ ಶಕ್ತಿಯಿಂದ ಭಾರತಕ್ಕೆ ಸಂವಿಧಾನ ರಚಿಸಿದರು.
ಎಸ್ಸಿ ಎಸ್ಟಿ ಗಳಿಗೆ ಮಾತ್ರವಲ್ಲದೆ ಒಬಿಸಿಗೂ ಮಹಿಳೆಯರಿಗೂ ಮೀಸಲಾತಿ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿದ್ದಾರೆ.
ಇಂದು ವಿಶ್ವವೇ ಅವರ ಜನ್ಮದಿನಾಚರಣೆಯನ್ನು ಆಚರಿಸುತ್ತಿದೆ. ಇಂದು ಸಂವಿಧಾನ ಕಟ್ಟುನಿಟ್ಟಿನ ಪಾಲನೆಯಾಗಬೇಕಿದೆ ರಾಜಕೀಯ ನಾಯಕರು ಸಂವಿಧಾನದಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ವಿಷಾದನೀಯ ಸಂವಿಧಾನ ಇದೇಶದಲ್ಲಿ ಉಳಿಯಬೇಕಾಗಿದೆ ಎಂದರು.
ಈ ಸಂಧರ್ಭದಲ್ಲಿ ಶಿಕ್ಷಕರಾದ ರಂಗಪ್ಪ, ಕಸ್ತೂರಿ, ಸೋಮಪ್ಪ, ಎಲ್ ಸುರೇಶ, ಎಸ್ಡಿಎಂ ಸಿ ಅಧ್ಯಕ್ಷ ಹಲಗಿ ನಾಗರಾಜ, ಸುಬ್ರಮಣ್ಯ, ರಾಧಾ, ವಿಜಯಲಕ್ಷ್ಮಿ , ಎಲ್.ಮಂಜುನಾಥ ಇದ್ದರು.
