IMG-20250308-WA0026

ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಪ್ರಕರಣ

ಕಾಲುವೆಗೆ ದೂಡಲ್ಪಟ್ಟಿದ್ದ ಒಡಿಶಾದ-ವ್ಯಕ್ತಿ ಶವವಾಗಿ ಪತ್ತೆ

ಹಣಕ್ಕಾಗಿ ಡಿಮ್ಯಾಂಡ ಮಾಡಿ-ಅತ್ಯಾಚಾರ ವೆಸಗಿದರು
ಆರೋಪಿಗಳ ಹೆಡಮುರುಗಿ ಕಟ್ಟಿದ ಪೋಲಿಸರು

ಪ್ರಸನ್ನಕುಮಾರ ದೇಸಾಯಿ

ಗಂಗಾವತಿ,ಮಾ೦೮- ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಇರ್ವರ ಆರೋಪಿಗಳ ಬಂಧನವಾಗಿ ಇನ್ನೊಬ್ಬನಿಗಾಗಿ ಹುಡುಕಾಟ-ದಲ್ಲಿ ಪೋಲಿಸ ತಂಡ ಕಾರ್ಯಾಚರಣೆ ಮಾಡುತ್ತಿದೆ.

ತಾಲೂಕಿನ ಸಣಾಪುರದ ಬಳಿ ನಡೆದಿದ್ದ ಇಬ್ಬರು ಮಹಿಳೆಯರ (ಇಸ್ರೇಲ್ ದೇಶದ ಒಬ್ಬರು, ಸ್ಥಳೀಯ ಒಬ್ಬರು) ಅತ್ಯಾಚಾರ ಹಾಗೂ ಒಬ್ಬನ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿರುವುದಾಗಿ ಜಿಲ್ಲಾ ಎಸ್ಪಿ ರಾಮ್. ಎಲ್ ಅರಸಿದ್ಧಿ ತಿಳಿಸಿದ್ದಾರೆ.

ಗಂಗಾವತಿ ಸಾಯಿನಗರದ ಗೌಂಡಿ ಕೆಲಸ ಮಾಡುವ ಮಲ್ಲೇಶ ಅಲಿಯಾಸ್ ಹಂದಿ ಮಲ್ಲೇಶ ಅಯ್ಯಪ್ಪ ದಾಸರ (೨೨) ಹಾಗೂ ಮಿಷನ್ ಕೆಲಸ ಮಾಡುವ ಚೇತನಸಾಯಿ ಕಾಮೇಶ್ವರ ರಾವ್ (೨೧) ಎಂಬ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದರು
ಇನ್ನೊಬ್ಬ ಯುವಕ ತಲೆಮರೆಸಿಕೊಂಡಿದ್ದು, ಆತನ ಸುಳಿವು ಸಿಕ್ಕಿದೆ. ಶೀಘ್ರದಲ್ಲಿ ಬಂಧಿಸಲಾಗುವುದು.

ಶವ ಪತ್ತೆ- ತುಂಗಭದ್ರಾ ಎಡದಂಡೆ ಕಾಲುವೆಗೆ ಆರೋಪಿಗಳಿಂದ ತಳ್ಳಲ್ಪಟ್ಟ ಮೂವರು ಪ್ರವಾಸಿಗರಲ್ಲಿ ಅಮೆರಿಕದ ಡೇನಿಯಲ್ ಹಾಗೂ ಮಹಾರಾಷ್ಟ್ರದ ಪಂಕಜ್ ಎಂಬವರು ಈಜಿ ದಡ ಸೇರಿದ್ದರು.
ಆದರೆ ಒಡಿಶಾದ ಬಿಬಾಸ್ (೪೨) ಅಲಿಯಾಸ ಡಿ ಬಾಸ ಎಂಬವರು ಕಾಲುವೆಯಲ್ಲಿ ಕೊಚ್ಚಿಹೋಗಿದ್ದು, ಶನಿವಾರ ಬೆಳಗ್ಗೆ ಶವ ಪತ್ತೆಯಾಗಿತ್ತು.
ಶವಪರಿಕ್ಷೆಯನ್ನು ಗಂಗಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಗಿಸಿ
ಅವರ ಮನೆಯವರೆಗೆ ಒಪ್ಪಿಸಲಾಗಿದೆ.
ಓಡಿಸ್ಸಾಕ್ಕೆ ಶವ ಒಯಲಾಗುವುದು ಎಂದು ಕುಟುಂಬಸ್ಥರ ಪರವಾಗಿ ತಿಳಿಸಿದರು.

ಆರೋಪಿಗಳ ಹಿನ್ನೆಲೆ- ಆರೋಪಿಗಳು ಸಮೀಪದ ಬಾರ್ ಒಂದರಲ್ಲಿ ಮದ್ಯ ಸೇವಿಸಿದ್ದಾರೆ. ಬಳಿಕ ಸುತ್ತಾಡುವ ಉದ್ದೇಶದಿಂದ ಬೈಕ್ನಲ್ಲಿ ತೆರಳಿದ್ದು, ಇಬ್ಬರು ವಿದೇಶಿಗರು, ಇಬ್ಬರು ಹೊರ ರಾಜ್ಯದ ಪ್ರವಾಸಿಗರು ಸೇರಿದಂತೆ ಸ್ಥಳೀಯ ಒಬ್ಬ ಮಹಿಳೆಯರನ್ನೊಳಗೊಂಡ ತಂಡ ಸಿಕ್ಕಿದೆ.
ಅವರಿಗೆ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ.

ಕೊಲೆ ಮಾಡುವ, ಸುಲಿಗೆ ಮಾಡುವ ಉದ್ದೇಶ ಈ ಆರೋಪಿಗಳಿಗೆ ಇರಲಿಲ್ಲ. ಹಣಕ್ಕೆ ಡಿಮ್ಯಾಂಡ್ ಇಟ್ಟ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಇಸ್ರೇಲ್ ಹಾಗೂ ಸ್ಥಳೀಯ ಮಹಿಳೆ ಮೇಲೆ ಇಬ್ಬರ ಮೇಲೆ ದುಷ್ಕೃತ್ಯ ಎಸಗಿರುವುದಾಗಿ ಆರೋಪಿಗಳು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದರು.

ಆರೋಪಿಗಳು ಇದಕ್ಕೂ ಮುನ್ನ ಯಾವುದಾದರೂ ಪ್ರಕರಣದಲ್ಲಿ ಭಾಗಿಯಾಗಿದ್ದರೆ? ಎಂಬುವುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಹೆಡಮುರುಗಿ ಕಟ್ಟಿದ ಪೋಲಿಸರ ತಂಡ- ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ನೇತೃತ್ವದ ಆರು ತಂಡಗಳ ಕಾರ್ಯ ಶ್ಯಾಘನಿಯ. ವಿದೇಶಗರ ಹಾಗೂ ಪ್ರವಾಸಿಗರ ಮೇಲೆ ಆದ ಘಟನೆಯ ಬೆನ್ನ ಹತ್ತಿದ ಪೋಲಿಸರು ಇರ್ವರು ಆರೋಪಿಗಳನ್ನು ಬಂದಿಸಿ ಇನ್ನೋರ್ವನ ಶಿಘ್ರದಲ್ಲಿಯೇ ಬಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಶ್ವಾನ ದಳ-ಜಿಲ್ಲಾ ಪೋಲಿಸ ಇಲಾಖೆ ಶ್ವಾನ ದಳದ ಮೂಲಕವು ಆರೋಪಿಗಳ ಸುಳಿವಿಗಾಗಿ ಹುಡುಕಾರ ನಡಸಿದೆ.

ಕಟ್ಟು ನಿಟ್ಟಿನಕ್ರಮಕ್ಕೆ ಆದೇಶಿಸಲು-ಸೂಚನೆ
*ಗೃಹಮಂತ್ರಿ ತಿಳಿಸಿ-ಆನೆಗೊಂದಿಯಲ್ಲಿ ಪೋಲಿಸ ಠಾಣೆ*
ಗಂಗಾವತಿ,ಮಾ೦೮-ಇತ್ತಿಚೆಗೆ ಆನೆಗೊಂದಿ ಭಾಗದಲ್ಲಿ ಹಾಗೂ ಸಾಣಾಪೂರ ಪ್ರವಾಸಿ ತಾಣದಲ್ಲಿ ಹಲ್ಲೆಗಳು ಮಾದಕ ವಸ್ತಗಳ ಸೇವೆನೆ ಬಗ್ಗೆ ನಿಗಾ ಇಡಲು ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸುತ್ತನೆ ಎಂದು ಶಾಸಕ ಗಾಲಿ ಜರ್ನಾಧನ ರೆಡ್ಡಿ ಹೇಳಿದರು.
ಹಿಂದೆ ನಾನು ಪ್ರವಾಸೋದ್ಯಮ ಸಚಿವನಿದ್ದಾಗ ಹಂಪಿ ಹಾಗೂ ಆನೆಗೊಂದಿ ಭಾಗ ಸೆರಿಸಿ ಹಂಪಿಯಲ್ಲಿ ವಿಭಾಗ ಪೋಲಿಸ ಕಚೇರಿ ಮಾಡಿದ್ದೆ ಈಗ ಆ ವ್ಯವಸ್ಥೇ ಬದಲಾಗಿ ತೋರಣಗಲ್‌ಗೆ ಸಿಫ್ಟಾಗಿದೆ.
ಗೃಹಮಂತ್ರಿ ಪರಮೇಶ್ವರರನ್ನು ಭೇಟಿ ಮಾಡಿ ಆನೆಗೊಂದಿ
ಭಾಗದಲ್ಲಿಯೇ ಪೋಲಿಸ ಠಾಣೆ ಮಾಡಿ ವಿದೇಶಿಗರ ಹಾಗೂ ಪ್ರವಾಸಿಗರ ರಕ್ಷಣೆ ಮಾಡಲು ಮುಂದಾಗಲು ತಿಳಿಸುತ್ತನೆ.ಸದನದಲ್ಲೂ ಚರ್ಚಿಸುತ್ತನ ಎಂದರು.

Leave a Reply

Your email address will not be published. Required fields are marked *

error: Content is protected !!