3

      ಮಕ್ಕಳಿಗೆ ನೀತಿ ಶಿಕ್ಷಣ ಅಗತ್ಯ

 ಸಮಾಜ ಸುಧಾರಣೆಗೆ ಪಾಲಕರು ಕಾರಣಿಕರ್ತರಾಗಬೇಕು

ನಿವೃತ್ತ ಮುಖ್ಯೋಪಾಧ್ಯಾಯ ಪ್ರಾಣೇಶ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,09- ತಂದೆ ತಾಯಿಗಳು ಮನೆಯಲ್ಲಿ ಮಕ್ಕಳಿಗೆ ನೀತಿ ಶಿಕ್ಷಣ ಹೇಳಿ ಮಕ್ಕಳು ಸರಿಯಾದ ಹಾದಿಯಲ್ಲಿ ಸಾಗುವಂತೆ ಸಮಾಜ ಸುಧಾರಣೆಗೆ ಕಾರಣಿಕರ್ತರಾಗಬೇಕು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಪ್ರಾಣೇಶ ಹೇಳಿದರು.

ಅವರು ರವಿವಾರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ( ಎಂಹೆಚ್ ಪಿಎಸ್) ಯಲ್ಲಿ ಜರುಗಿದ 1990- 91ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳಿಂದ ಜರುಗಿದ ಗುರುವಂದನೆ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲೆಗಳಲ್ಲಿ ಈಗ ನೀತಿ ಶಿಕ್ಷಣದ ತರಗತಿಗಳು ಇಲ್ಲ. ಇಂದಿನ ಮಕ್ಕಳು ಸರಿಯಾದ ಹಾದಿಯಲ್ಲಿ ಸಾಗುವಂತೆ ಆಗಬೇಕು ತಂದೆ ತಾಯಿಗಳೆ ಶ್ರಮಿಸಬೇಕು. ನಾವು ನಮ್ಮದು ನಮ್ಮ ದೇಶ ಎಂಬ ಅಭಿಮಾನ ಹೆಚ್ಚಿಸಬೇಕು.

ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು 35 ವರ್ಷಗಳ ನಂತರ ಶಾಲೆಯ ಸಮವಸ್ತ್ರದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಜಾತಿ ಧರ್ಮ ಭಾಷೆ ಎಲ್ಲವನ್ನ ಬದಿಗಿಟ್ಟು ನಾವೆಲ್ಲ ಒಂದೆ ಎಂಬ ಭಾವನೆಯಿಂದ ಒಗ್ಗೂಡಿರುವುದು ನಿಮ್ಮ ಐಕ್ಯತೆಯ ನಮಗೆ ಸಂತೋಷ ತಂದಿದೆ ಎಂದರು.

ನಿವೃತ್ತ ಶಿಕ್ಷಕಿಯರಾದ ಅಕ್ಕಮಹಾದೇವಿ, ಅಸ್ಮತ್ ಬೇಗಂ, ನಾಗಮ್ಮ ಮಾತನಾಡಿದರು. ಅಜ್ಜಪ್ಪ ಏಳುಬಾವಿ, ವಿರುಪಾಕ್ಷಪ್ಪ ಮೇಟಿ, ಪರಿಮಳ, ಉಷಾ ಬಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಅಂದಪ್ಪ ಬೋಳರಡ್ಡಿ ಅಧ್ಯಕ್ಷತೆ ವಹಿಸಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಅನೇಕ ಭಾಗದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಮಾತನಾಡಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಸೇರಿ ಶಾಲೆಯ ಸಮಗ್ರ ಅಭಿವೃದ್ದಿಗೆ ಸರ್ವರೂ ಸಹಕರಿಸುವಂತೆ ಕರೆ ನೀಡಿದರು.

ವೇಣುಗೋಪಾಲ ಜೋಷಿ ಪ್ರಾರ್ಥಿಸಿದರು ಗಿರಿಜಾ ಸ್ವಾಗತಿಸಿದರು ಪ್ರಾಸ್ತಾವಿಕವಾಗಿ ಸಂಗೀತಾ ಕಲ್ಲೇಶ ಮಾತನಾಡಿದರು ಗೀತಾ ನಿರೂಪಿಸಿದರು ಡಾ. ನೀಲಾಂಬಿಕಾ ವಂದಿಸಿದರು.

ಪೂರ್ಣಿಮಾ ತುಪ್ಪದ, ದೇವಮ್ಮ ಬಾರಕೇರ ವೆಂಕಟೇಶ ಕವಲೂರು ಶ್ರೀದೇವಿ ಕಂಪ್ಲಿ ಅನಂತ ಜಾಗಿರದಾರ ಲಕ್ಷ್ಮಿಕಾಂತ ಪ್ರತಿಮಾ ಪಟ್ಟಣಶೆಟ್ಟಿ ಪ್ರಶಾಂತ ಶಿಗಿನಹಳ್ಳಿ ಸುನಿತಾ ಮೈತ್ರಿ ವೇಣುಗೋಪಾಲ ರಾಜೇಶ್ವರಿ ಕಟ್ಟಿಮನಿ ಶಾಲೆಯ ನೆನಪುಗಳನ್ನು ಹಂಚಿಕೊಂಡರು

Leave a Reply

Your email address will not be published. Required fields are marked *

error: Content is protected !!