IMG-20240112-WA0026

ಅಧಿಕಾರದ ಮೇಲೆ ಆಸಕ್ತಿಯಿಂದ ನಾನು ರಾಜಕೀಯ ಮಾಡುವನಲ್ಲ : ವಿ. ಎಸ್ ಉಗ್ರಪ್ಪ 

ಕರುನಾಡ ಬೆಳಗು ಸುದ್ದಿ 

ಬಳ್ಳಾರಿ,12- ಅಧಿಕಾರದ ಮೇಲೆ ಆಸಕ್ತಿಯಿಂದ ನಾನು ರಾಜಕೀಯ ಮಾಡುತ್ತಿಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸಲು, ಜನಸೇವೆ ಮಾಡಲು ನಾನು ಮುಂದೆ ಇರುತ್ತೇನೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಲೋಕಸಭಾ ಸದಸ್ಯರು, ವಿ ಎಸ್ ಉಗ್ರಪ್ಪ ಹೇಳಿದರು. ಇಂದು ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಅವರಿದ್ದಾರೆ. ರಾಮ ಮಂದಿರವನ್ನು ಇಟ್ಟುಕೊಂಡು ಬಿಜೆಪಿ ಅಧಿಕಾರ ಹಿಡಿಯಲು ಮುಂದಾದರೆ, ದೇಶದ ಜನ ಹುಚ್ಚರಲ್ಲ ಅವರಿಗೆ ಯಾರಿಗೆ ಮಾತು ಬಂದಿದೆ ಎಂದು ಚೆನ್ನಾಗಿ ಗೊತ್ತಿದೆ. ರಾಮಮಂದಿರ ನಿರ್ಮಾಣದಲ್ಲಿ ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದರು. ಮಾನ್ಯ ಸುಪ್ರೀಂ ಕೋರ್ಟ್ ಆದೇಶದಂತೆ ರಾಮ ಮಂದಿರ ಟ್ರಸ್ಟ್ ರಾಮನಗುಡಿ ಕಟ್ಟಿದರೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲೆ ರಾಜ್ಯದ ಜನ ವಿಶ್ವಾಸವನ್ನು ಇಟ್ಟುಕೊಂಡು ಮತ ನೀಡಲಾಯಿತು, ಚುನಾವಣೆ ಪ್ರಣಾಳಿಕೆಯನ್ನು ಘೋಷಿಸಿದಂತೆ ಜನರಿಗೆ ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸುತ್ತಿರುವದಾಗಿ ಪ್ರಕಟಿಸಲಾಗಿದೆ. ದೇಶ ಪ್ರಜಾನೇ ನರೇಂದ್ರ ಮೋದಿಜಿ 10 ವರ್ಷದಿಂದ ಕೇವಲ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು. ಮುಂದಿರುವ ದಿನಗಳಲ್ಲಿ ದೇಶದ ಜನತೆ ಇಂಥ ಪಕ್ಷಗಳಿಗೆ ತಕ್ಕ ಬುದ್ಧಿ ಕಲಿಸುತ್ತಾರೆ. ಪ್ರಜಾ ಪ್ರಭುತ್ವ ಪಾಲನೆಯಲ್ಲಿ ಸರ್ಕಾರಕ್ಕೆ ಎಲ್ಲ ಸಮಾಜಗಳು ಒಂದೇ ಎಂದು ಸ್ಪಷ್ಟವಾಯಿತು.

ಪಕ್ಷದ ಆದೇಶದಂತೆ ಬಳ್ಳಾರಿಯಿಂದ ಸ್ಪರ್ಧೆ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ, ಪಕ್ಷದ ನಾಯಕರು, ಶಾಸಕರು ಬಳ್ಳಾರಿ ಲೋಕಸಭಾ ಸ್ಥಾನಕ್ಕೆ ಸ್ಪರ್ಧೆ ಮಾಡಲು ಆದೇಶ ನೀಡಿದರೆ, ನಾನು ಬಳ್ಳಾರಿ ಲೋಕಸಭಾ ಸ್ಥಾನಕ್ಕೆ ಎಂದು ಸ್ಪಷ್ಟನೆ ಪ್ರಕಟಿಸಿದೆ. ಭಾರತ ರಾಜ್ಯಾಂಗದ ಬಗ್ಗೆ, ಮತ್ತು ಚುನಾಯಿತ ಪ್ರತಿನಿಧಿಗಳ ಕಾರ್ಯನಿರ್ವಹಣೆಯ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಹೈ ಕೋರ್ಟ್ ನ್ಯಾಯವಾದಿಗಳು ನಮಗೆ ಎಂಪಿಯಾಗಿ ಚುನಾಯಿತ ನಾಗಲು ಅರ್ಹತೆ ಇದೆ ಎಂದು ಭಾವಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ, ಕಾಂಗ್ರೆಸ್ ಪಕ್ಷದ ಮೀಡಿಯಾ ಇನ್ ಚಾರ್ಜ್, ವೆಂಕಟೇಶ್ ಹೆಗಡೆ, ರವಿ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!