2c136fae-be38-4577-97e1-318669006cc9

ಅನಾಮಧೇಯ ಮೃತ ದೇಹ : ವಾರಸುದಾರರ ಪತ್ತೆಗೆ ಮನವಿ

ಕರುನಾಡ ಬೆಳಗು ಸುದ್ದಿ

ವಿಜಯನಗರ, 20 ಗಾಳೆಮ್ಮಗುಡಿ ಗ್ರಾಮದ ಡಾ.ದುರುಗಣ್ಣ ಜಮೀನಿನ ಹತ್ತಿರ ಹೆಚ್‌ಎಲ್‌ಸಿ ಕಾಲುವೆಯ ನೀರಿನಲ್ಲಿ ಏಪ್ರೀಲ್ 6ರಂದು ಅಪರಿಚಿತ ಅನಾಮಧೇಯ ಗಂಡಸಿನ ಶವವು ಪತ್ತೆಯಾದ ಬಗ್ಗೆ ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಯು.ಡಿ.ಆರ್ ನಂಬರ್ 07/2024 ಕಲಂ 174 (2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

45-50 ವರ್ಷ ವಯಸ್ಸಿನ ಗಂಡಸು ವ್ಯಕ್ತಿಯು 5.5 ಅಡಿ ಎತ್ತರವಿದ್ದು ಚರ್ಮ ಕೊಳೆಯುವ ಸ್ಥಿತಿಯಲ್ಲಿದೆ. ಮೈಮೇಲೆ ತಿಳಿನೀಲಿ ಗೆರೆವುಳ್ಳ ಕಂದು ಬಣ್ಣದ ರೆಡಿಮೇಡ್ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಸೊಂಟದಲ್ಲಿ ಉಡುದಾರಕ್ಕೆ ಒಂದು ತಾಯತ ಕಟ್ಟಿದ್ದು ಎರಡು ಕಣ್ಣುಗಳು ಮುಚ್ಚಿರುತ್ತವೆ. ಅಲ್ಲಲ್ಲಿ ಜಲ ಚರಗಳು ತಿಂದಂತೆ ಕಂಡು ಬರುತ್ತದೆ. ಮೂಗು ಮತ್ತು ಬಲ ಕಿವಿಯ ಮೇಲೆ ರಕ್ತವು ಹರಿದಿರುತ್ತದೆ.

ಈ ಮೃತ ವ್ಯಕ್ತಿಯ ಬಗ್ಗೆ ಗುರುತು ಹಾಗೂ ವಾರಸುದಾರರ ವಿಳಾಸ ಪತ್ತೆಯಾದಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆ ಕಂಟ್ರೋಲ್ ರೂಮ್ ಮೊ:8480805700, ಹೊಸಪೇಟೆ ಡಿಎಸ್ಪಿ ಕಚೇರಿ ದೂರವಾಣಿ:08394-24204., ಹಂಪಿ ಸಿಪಿಐ ಕಚೇರಿ ದೂ:08394-241530, ಹಂಪಿ ಪ್ರವಾಸಿ ಠಾಣೆ ಸಿಪಿಐ ದೂ.ಸಂಖ್ಯೆ:9480805758 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!