ಅವಶ್ಯವಿರುವ ಕಾಮಗಾರಿಗಳನ್ನು ಮುಂದುವರೆಸಲು ಅವಕಾಶ : ಎಚ್ ವಿಶ್ವನಾಥ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 3- ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಪಟ್ಟಣ ಪಂಚಾಯತ್ ಆಡಳಿತ ಅಧಿಕಾರಿ ಹಾಗೂ ತಾಲೂಕ ತಹಸಿಲ್ದಾರ್ ವಿಶ್ವನಾಥ ಅವರು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡುತ್ತಾ 2024-25 ನೇ ಸಾಲಿನ ಕರ್ನಾಟಕ ವಿಧಾನ ಮಂಡಳದ ಆಯಾ ವ್ಯಯದ ಅಧಿವೇಶನದಲ್ಲಿ ಮಂಜೂರು ಮಾಡಿದ ಪ್ರಕಾರ ತೆಕ್ಕಲಕೋಟೆ ಪಟ್ಟಣ ಪಂಚಾಯತಿಗೆ 15ನೇ ಹಣಕಾಸು ಆಯೋಗದ ಅನುದಾನ 3 ಕೋಟಿ ರೂ ಹಂಚಿಕೆಯಾಗಿದ್ದು ಸದಸ್ಯರು ತಮ್ಮ ವಾರ್ಡ್ ಗಳಲ್ಲಿ ಅವಶ್ಯವಿರುವ ಕಾಮಗಾರಿಗಳನ್ನು ಮುಂದುವರೆಸಲು ಅವಕಾಶವಿರುತ್ತದೆ ಈ ಬಗ್ಗೆ ಎಲ್ಲಾ ಸದಸ್ಯರು ಸಲಹೆ ಸೂಚನೆ ನೀಡಬೇಕು ಎಂದು ಅವರು ಸಭೆಯಲ್ಲಿ ತಿಳಿಸಿದರು.
10 ನವೆಂಬರ್ 2021 ರ ಮಾರ್ಗಸೂಚಿ ಪ್ರಕಾರ ಹಿಂದಿನ ಸಾಲಿನ ಅನುದಾನದ ಹಂಚಿಕೆಯಲ್ಲಿ ಪರಿಶೀಲಿಸಿ ಸದಸ್ಯರ ಮನವಿಯನ್ನು ಪರಿಗಣಿಸಿ ಅವಶ್ಯವಿರುವ ವಾರ್ಡುಗಳನ್ನು ಆದ್ಯತೆ ಮೇರೆಗೆ ಅವಶ್ಯ ಕತೆ ಇರುವ ಸ್ಥಳಗಳನ್ನು ಗುರುತಿಸಿ ಸದರಿ ಸ್ಥಳಗಳಿಗೆ ಅನುದಾನವನ್ನು ಹಂಚಿಕೆ ಮಾಡಿ ಕ್ರಿಯಾ ಯೋಜನೆ ತಯಾರಿಸಿ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಹಿಂದೆ ವಾರ್ಡ್ ಗಳಿಗೆ ಬಿಡುಗಡೆ ಮಾಡಿದ 5 ವರ್ಷದ ಅನುದಾನದ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗುವುದು ಎಂದು ಆಡಳಿತಾಧಿಕಾರಿ ತಹಸಿಲ್ದಾರ್ ಭರವಸೆ ನೀಡಿದರು ನಮ್ಮ ವಾರ್ಡ್ ಗಳಿಗೆ ಬೇಕಾದ ಅನುದಾನವನ್ನು ನೀವೇ ನಿರ್ಧರಿಸಿ ಹಾಕುವುದಾದರೆ ನಮಗೇನು ಕೆಲಸ ನಾವು ಯಾರು ಸಭೆಯ ಹಾಜರಿ ಪುಸ್ತಕದಲ್ಲಿ ಸಹಿ ಮಾಡುವುದಿಲ್ಲ ವೆಂದು ಬಿಜೆಪಿಯ 11 ಸದಸ್ಯರು ಸಭೆಯಿಂದ ಹೊರ ನಡೆದರು ಆಗ ಕಾಂಗ್ರೆಸ್ ಸದಸ್ಯರು ತಹಸಿಲ್ದಾರರ ಮುಂದೆ ಬಂದು ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯರ ವಾರ್ಡ್ ಗಳಿಗೆ ಎಷ್ಟು ಅನುದಾನ ಹಾಕಿದೆ ನಮ್ಮ ಸರ್ಕಾರದ ಅಧಿಕಾರ ಅವಧಿಯಲ್ಲಿ ಎಷ್ಟು ಅನುದಾನ ಹಾಕಿದೆ ಎನ್ನುವ ವಿವರವನ್ನು ನೀಡುವಂತೆ ಆಡಳಿತ ಅಧಿಕಾರಿಯನ್ನು ಒತ್ತಾಯಿಸಿದರು.
ವಾರ್ಡ್ ಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಎಲ್ಲಾ ವಾರ್ಡ್ ಗಳಿಗೆ ಖುದ್ದು ತೆರಳಿ ಪರಿಶೀಲನೆ ನಡೆಸಿ ಅಗತ್ಯವಿರುವ ಕಾಮಗಾರಿಗಳಿಗೆ ಅನುದಾನ ನಿಗದಿಪಡಿಸಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತ್ ಆಡಳಿತ ಅಧಿಕಾರಿ ವಿಶ್ವನಾಥ್ ಸಭೆಗೆ ಮಾಹಿತಿ ನೀಡಿದರು.
ಮುಖ್ಯ ಅಧಿಕಾರಿ ಪರುಶರಾಮ ಮತ್ತು ಪಟ್ಟಣ ಪಂಚಾಯತ್ ಸಿಬ್ಬಂದಿ ವರ್ಗದವರಿದ್ದರು.
