ಆದಿ ದೈವ ಶಂಭುಲಿಂಗೇಶ್ವರ ಸ್ವಾಮಿ ಜಾತ್ರೆ ಮಹಾ ರಥೋತ್ಸವ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 25- ನಗರದ ತುಂಗಾಭದ್ರ ನದಿ ದಡದಲ್ಲಿರುವ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ ಜಾತ್ರೆ ಮಂಗಳವಾರ ಅದ್ದೂರಿಯಿಂದ ಜರುಗಿತು.
ಬೆಳಗಿನ ಜಾವ ಡೊಳ್ಳು ಕಳಸ ವಾದ್ಯ ಮೇಳ ಹಾಗೂ ವೀರಗಾಸೆ ಕಲಾವಿದರೊಂದಿಗೆ ಗಂಗೆ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿ ಡೊಳ್ಳು ಭಜನ ಮೇಳ ಸಹಸ್ರಾರು ಭಕ್ತರ ಜಯ ಘೋಷಗಳೊಂದಿಗೆ ವಿಜೃಂಭಣೆಯಿಂದ ಜಾತ್ರೆ ಅದ್ದೂರಿಯಾಗಿ ಜರುಗಿತು.
ಸಿರುಗುಪ್ಪ ದೇಶನೂರು ಬಾಗೇವಾಡಿ ಇಬ್ರಾಹಿಂಪುರ್ ಕರ್ಚಿಗನೂರು ಚಾಣಕನೂರು ಸೇರಿ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು ದೇವರ ದರ್ಶನ ಪಡೆದರು ಹರಕೆ ಅರ್ಪಿಸಿದರು ನಗರಸಭಾ ಮಾಜಿ ಸದಸ್ಯರಾದ ಉಂತಗಲ್ ವೀರೇಶಪ್ಪ ನಗರ ಸಭೆ ಮಾಜಿ ಅಧ್ಯಕ್ಷರಾದ ಉಂತಗಲ್ ಅಮರೇಶಪ್ಪ ಮತ್ತಿತರ ಗಣ್ಯರು ಇದ್ದರು.
