WhatsApp Image 2024-05-19 at 6.35.04 PM

ಆರ್‌ಸಿಬಿ ಅಭಿಮಾನಿಗಳಿಂದ ಗುಲಾಬಿ ವಿತರಿಸಿ ಸಂಭ್ರಮಾಚರಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 19- 2024ರ ಐಪಿಎಲ್ ಪಂದ್ಯಾವಳಿಯ ಶನಿವಾರದ ಆರ್‌ಸಿಬಿ-ಸಿಎಸ್‌ಕೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಪವಾಡ ಎನ್ನುವ ರೀತಿಯಲ್ಲಿ ಚೆನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಕ್ವಾಲಿಫೈ ಹಂತ ತಲುಪಿದ್ದಕ್ಕೆ ಕೊಪ್ಪಳದ ಆರ್‌ಸಿಬಿ ಅಭಿಮಾನಿಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಗುಲಾಬಿ ಹೂ ನೀಡುವ ಮೂಲಕ ದ್ವೇಷ ಬಿಡಿ, ಪ್ರೀತಿ ಕೊಡಿ ಎಂದು ಸಂಭ್ರಮಿಸಿದರು.

ಸಾಮಾನ್ಯವಾಗಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸುವವರ ನಡುವೆ ಕೊಪ್ಪಳದ ಕ್ರೀಡಾಸಕ್ತ ಆರ್‌ಸಿಬಿ ಅಭಿಮಾನಿಗಳು ಹೂ ನೀಡಿ, ಚಹಾ-ಬಿಸ್ಕತ್ತು ವಿತರಿಸುವ ಮೂಲಕ ವಿಭಿನ್ನತೆ ಮೆರೆದರು.

Leave a Reply

Your email address will not be published. Required fields are marked *

error: Content is protected !!