WhatsApp Image 2024-05-19 at 6.34.38 PM

ಜ್ಞಾನ ವಿಕಾಸ ಸಂಯೋಜಕೀಯರ ಸಭೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 19- ತಾಲೂಕಿನ ಜ್ಞಾನ ಸಂಯೋಜಕೀಯರ ಸಭೆಯ ಜರುಗಿತು.

ಕೊಪ್ಪಳ ಜಿಲ್ಲಾ ನಿರ್ದೇಶಕ ಪ್ರಕಾಶ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜ್ಞಾನ ವಿಕಾಸ ಕಾರ್ಯಕ್ರಮಗಳ ಬಗ್ಗೆ, ಕೇಂದ್ರಗಳ ಗುಣಮಟ್ಟ ಕಾಪಾಡುವಲ್ಲಿ ಸಂಯೋಜಕೀಯರ ಪಾತ್ರ, ಮತ್ತು ಗುಣಮಟ್ಟ ಕಾರ್ಯಕ್ರಮಗಳನ್ನು ಮಾಡುವ ಬಗ್ಗೆ ಮಾಹಿತಿ ಮಾರ್ಗದರ್ಶನ ಮುಖ್ಯ ಎಂದರು.

ಕೊಪ್ಪಳ ಪ್ರಾದೇಶಿಕ ಕಚೇರಿಯ ಜ್ಞಾನ ವಿಕಾಸ ವಿಭಾಗದ ಯೋಜನಾಧಿಕಾರಿ ಶ್ರೀಮತಿ ಸುಧಾ ಗವಾಕರ್, ಕ್ರಿಯಾಯೋಜನೆ ಅನುಷ್ಠಾನದ ಬಗ್ಗೆ, ಕೇಂದ್ರದ ದಾಖಲಾತಿಗಳ ಬಗ್ಗೆ, ಕೇಂದ್ರದ ಆಡಿಟ್, ಗ್ರಂಥಾಲಯ ಬಳಕೆಯ ಬಗ್ಗೆ, ವಾತ್ಸಲ್ಯ ಕಾರ್ಯಕ್ರಮ, ಮೆನ್ಸ್ಟ್ರಾಲ್ ಕಪ್ ಬಳಕೆಯ ಬಗ್ಗೆ, ವಿಶೇಷ ಕಾರ್ಯಕ್ರಮಗಳ ಬಗ್ಗೆ, ಮಾಹಿತಿ ನೀಡಿದರು.

ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ, ಜ್ಞಾನ ವಿಕಾಸ ಕಾರ್ಯಕ್ರಮ ಬೆಳೆದು ಬಂದ ಬಗ್ಗೆ, ತಾಲೂಕಿನಲ್ಲಿ ಗುಣಮಟ್ಟ ಕೇಂದ್ರಗಳನ್ನು ಮಾಡುವ ಬಗ್ಗೆ, ಕಾರ್ಯಕ್ರಮದ ಅನುಷ್ಠಾನ, ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಶಾರದ, ತಾಲೂಕಿನ ಜ್ಞಾನ ವಿಕಾಸ ಸಂಯೋಜಕೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!