20240523_111503

ಇಂದು ಗಂಗಾವತಿಗೆ ಪ್ರಲ್ಹಾದ ಜೋಶಿ ಆಗಮನ    

 
ಕರುನಾಡ ಬೆಳಗು ಸುದ್ದಿ
ಗಂಗಾವತಿ, 23- ಈಶಾನ್ಯ ಪದವಿಧರ ವಿಧಾನ ಪರಿಷತ್ ಚುನಾವಣೆ ಜೂ.೩ರಂದು ನಡೆಯಲಿದ್ದು, ಈ ನಿಮಿತ್ಯ  ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಮೇ.24 ರಂದು ಸಂಜೆ 4 ಗಂಟೆಗೆ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್‌ಪರ ಚುನಾವಣೆ ಪ್ರಚಾರ ಸಭೆ ಆಯೋಜಿಸಿದ್ದು, ಈ ಸಭೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಶಾಸಕ ಗಾಲಿ ಗಾಲಿ ಜನಾರ್ಧನರೆಡ್ಡಿ, ಬಿಜೆಪಿ ಲೋಕಸಭೆ ಚುನಾವಣೆ ಅಭ್ಯರ್ಥಿ ಡಾ|| ಬಸವರಾಜ ಸೇರಿದಂತೆ ಪಕ್ಷದ ಮುಖಂಡರು, ಮಾಜಿ ಸಂಸದರು, ಶಾಸಕರು ಆಗಮಿಸಲಿದ್ದಾರೆ.  ಈ ಸಭೆಯಲ್ಲಿ ಪದವಿಧರ ಮತದಾರರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಆಗಮಿಸಬೇಕು ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ  ಕಳೆದ ಹಲವು ವರ್ಷಗಳಿಂದ ಈಶಾನ್ಯ ಪದವಿಧರ ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿಯ ಭದ್ರಕೋಟಿಯಾಗಿದೆ.  ಆದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಾಗಿತ್ತು.  ಆದರೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಎಂಎಲ್‌ಸಿ ಚಂದ್ರಶೇಖರ ಪಾಟೀಲ್ ಆರು ವರ್ಷದಲ್ಲಿ ಒಮ್ಮೆಯೂ ಕ್ಷೇತ್ರಕ್ಕೆ ಭೇಟಿ ನೀಡಿ ಪದವಿಧರ ಸಮಸ್ಯೆಗೆ ಸ್ಪಂದಿಸಿಲ್ಲ.  ಚುನಾವಣೆಯಲ್ಲಿ ಗೆದ್ದ ನಂತರ ಇತ್ತಕಡೆ ಮುಖ ಕೂಡಾ ಮಾಡದ ಕಾಂಗ್ರೆಸ್ ಅಭ್ಯರ್ಥಿಯನ್ನು ಈ ಭಾರಿ ಮತದಾರರು ತಿರಸ್ಕಿರಿಸಲಿದ್ದಾರೆ.
ಮತ್ತೊಮ್ಮೆ ಬಿಜೆಪಿ ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್‌ಗೆ ಅವಕಾಶ ನೀಡಿದೆ.  ಹೈಕಮಾಂಡ್ ತಿರ್ಮಾನದಂತೆ ಬಿಜೆಪಿಯ ಮುಖಂಡರು, ಕಾರ್ಯಕರ್ತರು ನಮ್ಮ ಅಭ್ಯರ್ಥಿಯ ಗೆಲುವಿಗೆ ಈಗಾಗಲೇ ಸಜ್ಜಾಗಿದ್ದಾರೆ.
ಮತದಾರರು ಕೂಡಾ ಈ ಭಾರಿ ಬಿಜೆಪಿಗೆ ಅವಕಾಶ ನೀಡಲು ಮುಂದಾಗಿದ್ದಾರೆ.  ಈ ಹಿನ್ನೆಲೆಯಲ್ಲಿ ನಾಳೆ ಮೇ.೨೪ ರಂದು ಚುನಾವಣೆ ನಿಮಿತ್ಯ ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಸಭೆ ಆಯೋಜಿಸಿದೆ.  ಈ ಭಾಗದ ಸರ್ವ ಮತದಾರರು ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು.  ಪಕ್ಷದ ಎಲ್ಲಾ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಆಗಮಿಸಿ ಸಭೆ ಯಶಸ್ವಿಗೊಳಿಸುವುದರ ಜೊತೆಗೆ ಚುನಾವಣೆಯಲ್ಲಿ  ಪಕ್ಷದ ಅಭ್ಯರ್ಥಿಯ ಗೆಲುವಿಗೆ  ಶ್ರಮಿಸಬೇಕು ಎಂದರು.
ಈಸಂದರ್ಭದಲ್ಲಿ   ಮುಖಂಡರಾದ ವಿರುಪಾಕ್ಷಪ್ಪ ಸಿಂಗನಾಳ,ಗಿರೆಗೌಡ,ಶ್ರೀ ಧರ ಕೆಸರಹಟ್ಟಿ,ಬಿಜೆಪಿ ಗ್ರಾಮಿಣ ಅಧ್ಯಕ್ಷ ಚನ್ನಪ್ಪ ಮಳಗಿ,ಮನೋಹರಗೌಡ ಹೆರೂರ,  ಬಿಜೆಪಿ ನಗರ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ಅಮರಜ್ಯೋತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಅರಿಕೇರಿ, ನರಸಿಂಗರಾವ್ ಕುಲಕರ್ಣಿ, ಮುಖಂಡ ಹೆಚ್.ಸಿ.ಯಾದವ,  ನವೀನ್ ಪಾಟೀಲ್, ವಿರೇಶ ಬಲಕುಂದಿ, ಅಕ್ಕಿ ಚಂದ್ರು, ಅರ್ಜುನ ರಾಯ್ಕರ್, ವಿರೇಶ ಸುಳೇಕಲ್, ರಮೇಶ ನಾಯಕ ಹೊಸಮಲಿ, ಮಲ್ಲಿಕಾರ್ಜುನ ನಂದಾಪುರ, ಶಿವಪ್ಪ ಪೂಜಾರ, ಶ್ರೀನಿವಾಸ ಧೂಳ, ಸಂಗಯ್ಯಸ್ವಾಮಿ ಸಂಶಿಮಠ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!