ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಜೆಜೆಎಂ, ನರೇಗಾ ಕಾಮಗಾರಿಗಳ ಪರಿಶಿಲನೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 12- ತಾಲೂಕಿನ ಬೇವೂರ ಗ್ರಾಮದಲ್ಲಿ ಬೇವೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ರಾಹುಲ್ ರತ್ನಮ್ ಪಾಂಡೆಯ ಅವರ ಅದ್ಯಕ್ಷತೆಯಲ್ಲಿ ಜರುಗಿತು.
ಬೇವೂರ ಗ್ರಾಮದ ಒಟ್ಟು ಜನಸಂಖ್ಯೆ, ಮತದಾರರು, ಜೆಜೆಎಂ ಕಾಮಗಾರಿ, ನರೇಗಾ ಯೋಜನೆ, ಗೃಹಲಕ್ಷಿ ಯೋಜನೆ ಫಲಾನುಭವಿಗಳ ಮಾಹಿತಿ, ಪಡಿತರ ಚೀಟಿ ಮಾಹಿತಿ, ಅಂಗನವಾಡಿಗಳ ಕುಡಿಯುವ ನೀರು, ಶೌಚಾಲಯ, ಆಹಾರ ವಿತರಣೆ, ಶಾಲೆಗಳಲ್ಲಿ ಶೌಚಾಲಯ, ಅಡುಗೆ ಕೋಣೆ, ತಡೆಗೋಡೆ ಮುಂತಾದ ಮೂಲಭೂತ ಸೌಕರ್ಯಗಳ ಮಾಹಿತಿ, ಅರಣ್ಯ ಇಲಾಖೆ ಕಾಮಗಾರಿಗಳ ಮಾಹಿತಿ ಪಡೆದರು.
ಗೋಮಾಳ ಕಾಮಗಾರಿ ಆರಂಭಿಸಿ ಬೇವೂರ ಗ್ರಾಮದಲ್ಲಿರುವ ಗೋಮಾಳ ಕಾಮಗಾರಿಗಳನ್ನು ತುರ್ತಾಗಿ ಆರಂಭಿಸಿ ಕಂದಕಗಳನ್ನು ನಿರ್ಮಿಸಬೇಕು. ಮಳೆಗಾಲ ಆರಂಭದಲ್ಲಿ ಸಸಿಗಳನ್ನು ನಾಟಿ ಮಾಡಬೇಕು. ಶಾಲಾಭಿವೃದ್ಧಿ ಕಾಮಗಾರಿಗಳನ್ನು ತುರ್ತಾಗಿ ಮುಗಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಬೇವೂರ ಹಾಗೂ ಹಿರೇಅರಳಿಹಳ್ಳಿಯ ಬೂದು ನೀರು ನಿರ್ವಹಣೆ ಕಾಮಗಾರಿಗಳ ಕ್ರಿಯಾಯೋಜನೆಗಳನ್ನು ಸಿದ್ದಪಡಿಸಿ ತುರ್ತಾಗಿ ಕಾಮಗಾರಿ ಆರಂಭಿಸಲು ಪಿಆರ್ ಇಡಿ ಹಾಗೂ ಆರ್ ಡಬ್ಲೂ ಎಸ್ ಇಲಾಖೆಯವರಿಗೆ ತಿಳಿಸಿದರು. ಪ್ರತಿವಾರ ಕುಡಿಯುವ ನೀರಿನ ಟಾಸ್ಕ್ ಫೊರ್ಸ್ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.
ಬಳಿಕ ನರೇಗಾ ಯೋಜನೆಯಡಿ ಕೈಗೊಂಡ ಶಾಲಾಭಿವೃದ್ಧಿ ಕಾಮಗಾರಿಗಳು ಹಾಗೂ ಅಂಗನವಾಡಿ ಕಾಮಗಾರಿಗಳ ಪರಿಶೀಲಿಸಿದರು.
ಸಭೆಯಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ್ ಬಿರಾದಾರ್, ಸಹಾಯಕ ನಿರ್ದೇಶಕ ಹನಮಂತಗೌಡ ಪೊಲೀಸ್ ಪಾಟೀಲ್, ತೊಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಿಂಗನಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಾಣೇಶ ಹಾದಿಮನಿ, ಆರ್ ಎಫ್ಒರಾದ ಬಸವರಾಜ ಗೋಗೆರಿ, ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ, ಆರ್ ಡಬ್ಲೂಎಸ್ ಎಇಇ ರಿಜ್ವಾನಾ, ಬಿಇಒ ಕೆ.ಟಿ.ನಿಂಗಪ್ಪ, ಬಿಸಿಎಂ ವಸತಿ ನಿಲಯದ ಸಹಾಯಕ ನಿರ್ದೇಶಕ ಶಿವಶಂಕರ್ ಕರಡಕಲ್, ಗ್ರಾಮ ಪಂಚಾಯತಿ ಪಿಡಿಒ ಅಬ್ದುಲ್ ಗಫಾರ್, ಕರವಸೂಲಿಗಾರ ಬಸವರಾಜ, ತಾಪಂ ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ತಾಂತ್ರಿಕ ಸಹಾಯಕರು, ತಾಪಂ ಸಿಬ್ಬಂದಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಇತರರು ಭಾಗವಹಿಸಿದದ್ದರು.
