WhatsApp Image 2024-05-21 at 4.04.07 PM

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ದ ಚುನಾವಣೆ ಪೂರ್ವಭಾವಿ ಸಭೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 21- ನಗರದ ಬಳ್ಳಾರಿ ರಸ್ತೆ ಗೌಸಿ ಷಾ ಸಾಹೇಬ್ ಜಿ ಎಸ್ ಲಾಡ್ಜ್ ಸಭಾಭವನದಲ್ಲಿ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ದ ಚುನಾವಣೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ ಚಂದ್ರಶೇಖರ ಜಿ ಪಾಟೀಲ್ ಅವರ ಪರ ಸಿರುಗುಪ್ಪ ಘಟಕ ಕಾಂಗ್ರೆಸ್ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.

ಜೂನ್ 3 ರಂದು ನಡೆಯುವ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆ ಸಿರುಗುಪ್ಪ ತಾಲೂಕಿನಲ್ಲಿ 3,323 ಅರ್ಹ ಮತದಾರರು ಇದ್ದಾರೆ ಹಚ್ಚೋಳ್ಳಿ 380 ಸಿರುಗುಪ್ಪ 1,144 ತೆಕ್ಕಲಕೋಟೆ 774 ಕರೂರು 1,025 ಒಟ್ಟು3,323 ಅರ್ಹ ಮತದಾರರು ಇದ್ದಾರೆ ಎಂದು ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಹೇಳಿದರು.

ಸಿರುಗುಪ್ಪ ಕ್ಷೇತ್ರದಲ್ಲಿ ನಿರುದ್ಯೋಗಿ ಪದವೀಧರರನ್ನು ಗುರುತಿಸಿ ನಿರುದ್ಯೋಗಿ ಬಂಧುಗಳ ಶೈಕ್ಷಣಿಕ ವಿದ್ಯಾರ್ಹತೆ ಆಧರಿಸಿ ನೋಂದಣಿ ಮಾಡಿಕೊಳ್ಳಲಾಗುವುದು ಜೊತೆಗೆ ಅವರಲ್ಲಿ ಜಾಗೃತಿ ಮೂಡಿಸಿ ಅಗತ್ಯ ಮಾರ್ಗದರ್ಶನ ಆತ್ಮವಿಶ್ವಾಸ ತುಂಬಲಾಗುವುದು ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಒದಗಿಸುವುದು ಪದವೀಧರರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದು ಪದವೀಧರರು ಹಾಗೂ ನಿರುದ್ಯೋಗಿಗಳ ಕಷ್ಟವನ್ನು ಚಂದ್ರಶೇಖರ ಜಿ ಪಾಟೀಲ್ ಅವರು ಚೆನ್ನಾಗಿ ಅರಿತು ಕೊಂಡವರು ನೀವೆಲ್ಲ ಬುದ್ಧಿ ಜೀವಿಗಳು ನಿಮ್ಮ ಮತವನ್ನು ಚಂದ್ರಶೇಖರ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿ ಗೆ ನೀಡಬೇಕು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಅವರನ್ನು ಬೆಂಬಲಿಸಿ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಮನವಿ ಮಾಡಿದರು.

ಸಿರುಗುಪ್ಪ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಉಪಾಧ್ಯಕ್ಷರು ಎನ್ ಕರಿಬಸಪ್ಪ ಕಾಂಗ್ರೆಸ್ ಮುಖಂಡರು ಮಾಜಿ ನಗರಸಭಾ ಅಧ್ಯಕ್ಷರು ಬಿ ಎಂ ಸತೀಶ್ ಮಾಜಿ ಶಾಸಕರು ಎಂ ದೊಡ್ಡನಗೌಡ ಅವರ ಸುಪುತ್ರ ಎಂ ಡಿ ಮರಿರಾಜ ಗೌಡ ಡಾ ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಕೊಡ್ಲೆ ಮಲ್ಲಿಕಾರ್ಜುನ ಹಿರಿಯ ಬುದ್ಧಿ ಜೀವಿಗಳು ಹಾಜಿ ಅಬ್ದುಲ್ ನಬಿ ನಗರಸಭೆ ಮಾಜಿ ಸದಸ್ಯ ಮಿಂತಿ ಟಿ ಮೊಹಮ್ಮದ್ ಶಫಿ ವಕೀಲರಾದ ಬಿ ವೆಂಕಟೇಶ ಹಾಗೂ ಹಿರಿಯ ವಕೀಲರ ತಂಡದ ವೆಂಕಟೇಶ್ ನಾಯಕ್ ವಕೀಲರಾದ ಯಶವಂತ ರೈತ ಸಂಘದ ಕಾಂಗ್ರೆಸ್ ಮುಖಂಡ ವಾ ಹುಲುಗಯ್ಯ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಹಿತೈಷಿಗಳು ಅಭಿಮಾನಿಗಳು ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಜಿ ಪಾಟೀಲ್ ಅವರಿಗೆ ಮತ ನೀಡಿ ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಸರ್ವರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ನಗರಸಭಾ ಸದಸ್ಯರಾದ ಹೆಚ್ ಗಣೇಶ್ ಗೊರವರ ಶ್ರೀನಿವಾಸ ಪವನ್ ದೇಸಾಯಿ ಮಹಿಳಾ ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *

error: Content is protected !!