ಶಿವಪ್ಪ ಈಬೇರಿ ಶಿಕ್ಷಕರಿಂದ ಉಚಿತ ಶಿಕ್ಷಣ ಸೇವೆ
ಕರುನಾಡ ಬೆಳಗು ಸುದ್ದಿ
ಕುಕನೂರ,18- ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ 8ನೇ ವಾರ್ಡಿನಲ್ಲಿ ಇರುವ ಶಾಲೆಯ ಶಿಕ್ಷಕರಾದ ಶಿವಪ್ಪ ಈಬೇರಿ ಅವರು ಶಾಲೆಯ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 5:30 ರಿಂದ 7:30ರವರೆಗೆ ಮತ್ತು ಸಾಯಂಕಾಲ 4:30 ರಿಂದ 6:30ವರೆಗೆ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯೂಷನ್ ಹೇಳಿ ಶಿಕ್ಷಣದ ಸೇವೆ ನೀಡುತ್ತಿದ್ದಾರೆ.
ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೂ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸುಮಾರು 70 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳಿಗೆ ಮಗ್ಗಿಗಳು 30 ರಿಂದ 40 ರವರೆಗೂ ಮಗ್ಗಿಗಳನ್ನು ಹೇಳುತ್ತಾರೆ. ಮತ್ತು ಕನ್ನಡ,ಇಂಗ್ಲಿಷ್, ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ವಿಷಯಗಳು ಎಲ್ಲ ವಿಷಯಗಳ ಬಗ್ಗೆ ಹೆಚ್ಚಿನ ಸಮಯ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣದ ಬಗ್ಗೆ ಹೇಳಿಕೊಡುತ್ತೇನೆ. ಇದಕ್ಕೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರ ಸಹಕಾರ ಇದೆ ಎಂದು ಶಿಕ್ಷಕರಾದ ಶಿವಪ್ಪ ಈಬೇರಿ ಶಿಕ್ಷಕರು ಹೇಳಿದರು. ಈ ಶಿಕ್ಷಕರ ಸೇವೆ ನಿಜಕ್ಕೂ ಅದ್ಭುತ ಇಂತಹ ಶಿಕ್ಷಕರ ಅಭ್ಯಾಸದ ಆಸಕ್ತಿ ಈ ಸರಕಾರಿ ಶಾಲೆಯ ಗೌರವವನ್ನೇ ಹೆಚ್ಚು ಮಾಡುತ್ತದೆ. ಈ . ಇಷ್ಟೊಂದು ಕಾಳಜಿಯಿಂದ ಬೆಳಿಗ್ಗೆ ಮತ್ತು ಸಾಯಂಕಾಲ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಲು ಏನು ಕಾರಣ ಸರ್ ಎಂದು ಕೇಳಿದಾಗ ಈ ಹಿಂದೆ ಚಿಕ್ಕೇನಕೊಪ್ಪ , ಅರಿಕೇರಿ, ಶಾಲೆಯಲ್ಲಿ ಕೂಡ ನಾನು ಇದೇ ರೀತಿ ಟ್ಯೂಷನ್ ಹೇಳುತ್ತಾ ಇದ್ದೆ ಅದು ನನಗೆ ಅಭ್ಯಾಸವಾಗಿದೆ ಮತ್ತು ವಿದ್ಯಾರ್ಥಿಗಳ ಮನೆಯಲ್ಲಿ ಕೆಲವು ಪಾಲಕರಿಗೆ ಶಾಲೆಯಲ್ಲಿ ಶಿಕ್ಷಕರು ಏನು ಹೇಳಿದ್ದಾರೆ. ಎಂದು ಕೇಳುವ ಸಮಯ ಕೂಡ ಇರುವುದಿಲ್ಲ ಅದಕ್ಕಾಗಿ ನಾನು ವಿದ್ಯಾರ್ಥಿಗಳಿಗೆ ಮೊರಾರ್ಜಿ ಮತ್ತು ಆದರ್ಶ ಶಾಲೆಯಗೆ ಆಯ್ಕೆಯಾಗುವ ವಿದ್ಯಾಭ್ಯಾಸದ ಬಗ್ಗೆಯೂ ಕೂಡ ಟ್ಯೂಷನ್ ನಲ್ಲಿ ಹೇಳಿಕೊಡುತ್ತೇನೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಶಿಕ್ಷಣ ಕೊಡುವುದರಿಂದ ಅವರಲ್ಲಿ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಬರುತ್ತದೆ ಎಂಬುವುದು ಶಿಕ್ಷಕರ ನಂಬಿಕೆ. ಬೆಳಿಗ್ಗೆ ಮತ್ತು ಸಾಯಂಕಾಲ ಟ್ಯೂಷನ್ ಗೆ ಬರಬೇಕಾದರೆ ಇದರಲ್ಲಿ ಪಾಲಕರ ಸಾಕಾರವೂ ತುಂಬಾ ಇದೆ.
