ಮೆಟ್ರಿಕ್ ಪೂರ್ವ ಮತ್ತು ನಂತರದ ಹಾಸ್ಟೇಲ್ ಗಳಿಗೆ ಅರ್ಜಿ ಕರೆಯಲು ಹಾಗೂ
ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಒತ್ತಾಯಿಸಿ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬ0ಬ0ಧಿಸಿದ0ತೆ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್.ಎಫ್.ಐ ಸಂಘಟನೆ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಮೂಲಕ ಒತ್ತಾಯಿಸುವುದೇನೆಂದರೇ,
ರಾಜ್ಯದಲ್ಲಿ ಮೇ 29 ರಿಂದ ಶಾಲಾ ಕಾಲೇಜು ಪ್ರಾರಂಭವಾಗಿ ಸುಮಾರು 15 ದಿನಗಳ ಕಾಲ ಆಗಿದೆ ಒಂದಡೆ ಪಿಯುಸಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡುವ ಸಾವಿರಾರು ವಿದ್ಯಾರ್ಥಿಗಳು ಹಾಸ್ಟೇಲ್ ಗೆ ಅರ್ಜಿ ಹಾಕಲು ಕಾಯುತ್ತಿದ್ದಾರೆ.ಆದರೆ ಸಮಾಜ ಕಲ್ಯಾಣ ಇಲಾಖೆ ಆನ್ ಲೈನ್ ಜೂನ್ ೧೫ ರಿಂದ ಅರ್ಜಿ ಕರೆಯಲಾಗಿದೆ. ಆದರೆ ಇನ್ನುಳಿದ ಇಲಾಖೆಗಳಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ.&ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರುಗಳು ಇಲ್ಲಿಯವರೆಗೂ ಪ್ರವೇಶಾತಿಯ ಅರ್ಜಿ ಕರೆಯಲು ಮುಂದಾಗದಿರುವುದು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.
ಅಖಂಡ ಗಂಗಾವತಿ ತಾಲೂಕಿನ ವಿದ್ಯಾರ್ಥಿಗಳು ಶಾಲಾ ಕಾಲೇಜು ಆರಂಭವಾಗಿ ದಿನಾಲು ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರುತ್ತಿದ್ದಾರೆ ಆದರೆ ಶೈಕ್ಷಣಿಕ ವರ್ಷ ಆರಂಭವಾದರು ಸರಕಾರ ಇನ್ನು ಹಾಸ್ಟೆಲ್ ಅರ್ಜಿ ಮತ್ತು ಬಸ್ ಪಾಸ್ ಅರ್ಜಿ ಆಹ್ವಾನ ಮಾಡಿದ್ದು.ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಅರ್ಜಿ ಹಾಕಲು ಹೋದರೆ ತಾಂತ್ರಿಕ ದೋಷ ಕಂಡುಬರುತ್ತಿದೆ ಆದ್ದರಿಂದ ಅನೇಕ ವಿದ್ಯಾರ್ಥಿಗಳು ಹಣ ಕೊಟ್ಟು ಕಾಲೇಜಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಸ್ಟೇಲ್ ಅರ್ಜಿ ಕರೆಯುವಲ್ಲಿ ಸರಕಾರ ಕಾಲ ಹರಣ ಮಾಡುತ್ತಿದೆ.
ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿರುವ ಸರಕಾರ ಹಿಂದುಳಿದ ಬಡ ದಲಿತ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಮೀನಾಮೇಷ ತೋರುತ್ತಿರುವುದು ಸರಿಯಾದ ಕ್ರಮವಲ್ಲ ಆದ್ದರಿಂದ ೨೦೨೪-೨೫ ನೇ ಶೈಕ್ಷಣಿಕ ವರ್ಷ ಆರಂಭವಾಗಿದ್ದು ಈ ವರ್ಷವಾದರು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಮುಂದಾಗಬೇಕೆ0ದು ಎಸ್ ಎಫ್ ಐ ಆಗ್ರಹಿಸುತ್ತದೆ. ಸಮಾಜ ಕಲ್ಯಾಣ ಇಲಾಖೆಯು ಆನ್ ಲೈನ್ ಅರ್ಜಿ ಹಾಕಿದ ಎಲ್ಲಾರಿಗೂ ಹಾಸ್ಟೆಲ್ ಕಲ್ಪಿಸಬೇಕೆಂದು ಹಾಗೂ ಶೈಕ್ಷಣಿಕ ಹಿತ ದೃಷ್ಠಿಯಿಂದ ಉತ್ತಮ ಗುಣಮಟ್ಟದ ಶೈಕ್ಷಣಿಕ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಅವಶ್ಯಕವಾಗಿದ್ದು ಹೊಸ ಪ್ರವೇಶಕ್ಕಾಗಿ ಅರ್ಜಿ ಕರೆಯಲು ಭಾರತ ವಿದ್ಯಾರ್ಥಿಪೆಡರೇಷನ್ (ಎಸ್ ಎಫ್ ಐ) ಈ ಮೂಲಕ ಒತ್ತಾಯಿಸುತ್ತದೆ
