WhatsApp Image 2024-02-21 at 6.17.37 PM

ಕನಕದಾಸರ ಮೂರ್ತಿ ಅದ್ದೂರಿ ಮೆರವಣಿಗೆ

ಕರುನಾಡ ಬೆಳಗು ಸುದ್ದಿ

ಕುಕನೂರು,21- ತಾಲೂಕಿನ ದ್ಯಾoಪೂರು ಗ್ರಾಮದಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆಯ ಪ್ರಯುಕ್ತ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ಬುಧವಾರ ಜರುಗಿದೆ.

ಗ್ರಾಮದಲ್ಲಿ ಭಕ್ತ ಶ್ರೀ ಕನಕದಾಸ ಗ್ರಾಮೀಣಾಭಿವೃದ್ಧಿ ಯುವಕ ಸಂಘದ ನೇತೃತ್ವದಲ್ಲಿ ದಾಸ ಶ್ರೇಷ್ಠ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಇಂದು ಫೆ.22, ಗುರುವಾರ ಗ್ರಾಮದಲ್ಲಿ ಜರುಗಲಿದೆ.

ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಪಟ್ಟಣದ ಭೀಮಾoಭಿಕೆ ದೇವಸ್ಥಾನದಿಂದ ದ್ಯಾoಪೂರು ಗ್ರಾಮದವರೆಗೆ ಡೊಳ್ಳು ವಾದ್ಯ, ಪೂರ್ಣ ಕುಂಭ ಮೇಳದೊಂದಿಗೆ ಕನಕ ದಾಸರ ಭವ್ಯ ಮೂರ್ತಿಯ ಮೆರವಣಿಗೆ ನಡೆಯಿತು.

ಹಾಲವರ್ತಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿಗಳು ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿದರು.

ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಎಪಿಎಂಸಿ ಮಾಜಿ ಸದಸ್ಯ ಹಂಚ್ಯಾಳಪ್ಪ ತಳವಾರ್, ಶೇಖಪ್ಪ ಕಂಬಳಿ, ತಾಪಂ ಮಾಜಿ ಸದಸ್ಯ ಬಸವರಾಜ ಮಾಸೂರು, ಸಂಗಪ್ಪ ನೋಟಗಾರ, ದೇವಪ್ಪ ಮರಡಿ, ಗಗನ್ ನೋಟಗಾರ್, ಹೊನ್ನಪ್ಪ ಮರಡಿ, ಯಲ್ಲಪ್ಪ ನೋಟಗಾರ್, ಹನುಮಪ್ಪ ಸದರಿ, ಈರಪ್ಪ ಕೊರಗಲ್, ಅಂದಪ್ಪ ಸಂಗೀತಾಳ, ಭೀಮರೆಡ್ಡಿ ಬೀಡಿನಾಳ, ಪ್ರಮುಖರು,ಹಾಲುಮತ ಸಮಾಜದ ಬಾಂಧವರು ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!