ಕನಾ೯ಟಕ ವಿಧಾನ ಪರಿಷತ್ ಚುನಾವಣೆ ಬಿಜೆಪಿಯ ಅಭ್ಯರ್ಥಿ ಅಮರನಾಥ ಪಾಟೀಲ ಪರ ಮತಯಾಚನೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 19 ಕೂಪ್ಪಳ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಪರ ನಮ್ಮಪಕ್ಷದ ಮುಖಂಡರು ಮತ್ತು ಎಲ್ಲಾ ಕಾರ್ಯಕತ೯ರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.
ಪಟ್ಟಣದ ಬಿಜೆಪಿ ಪಕ್ಷದ ಮಂಡಲದ ಕಛೇರಿಯಲ್ಲಿ ಕನಾ೯ಟಕ ವಿಧಾನ ಪರಿಷತ್ ಚುನಾವಣೆ. ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಯಲಬುರ್ಗಾ ಮತ್ತು ಕುಕನೂರು ಈ ಅವಳಿ ತಾಲೂಕಿನಲ್ಲಿ ಒಟ್ಟು 4800 ಪದವೀಧರರ ಮತಗಳಿವೆ ಅವರಿಗೆ ಬಿಜೆಪಿ ಪಕ್ಷದ ಅಭಿವೃದ್ಧಿ ಮತ್ತು ದೇಶದ ಪ್ರಗತಿಯ ಬಗ್ಗೆ ಮನ ಮುಟ್ಟುವಂತೆ ತಿಳಿಸಿ ನಮ್ಮ ಪಕ್ಷದ ಅಭ್ಯರ್ಥಿ ಅಮರನಾಥ ಪಾಟೀಲ ಅವರಿಗೆ ಮತಗಳನ್ನು ಹಾಕಿಸಿ ಅತ್ಯಂತ ಹೆಚ್ಚು ಅಂತರ ದಿಂದ ಗೆಲುವು ಸಾಧಿಸಬೇಕು ಎಂದು ಕಾರ್ಯಕತ೯ರಿಗೆ ಹಾಗೂ ಮುಖಂಡರಿಗೆ ಕರೆ ನೀಡಿದರು. ಅಮರನಾಥ ಪಾಟೀಲ ಅವರು ಈ ಹಿಂದೆ ಎಂಎಲ್ ಸಿಯಾಗಿ ಪದವೀಧರರ. ಮತ್ತು ಶಿಕ್ಷಕರ ಧ್ವನಿಯಾಗಿ ಸಂಘಟನೆ ಬಗ್ಗೆ ಮುನ್ಸೂಚನೆಯ ನಾಯಕ.ಹೈದ್ರಾಬಾದ ಕಲ್ಯಾಣ ಕನಾ೯ಟಕದ ಹೋರಾಟಕ್ಕಾಗಿ ಶ್ರೇಮಿಸಿದ್ದಾರೆ.
ಎಚ್ ಡಿಕೆ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ಭಾಗದ ಮಕ್ಕಳಿಗೆ 371 ಜೆ ಇನ್ನೂ ಹೆಚ್ಚಿನ ರೀತಿಯಲ್ಲಿ ಆದ್ಯತೆ ದೂರಯಬೇಕಂದು ಕನಸು ಇಟ್ಟುಕೊಂಡು ಶಿಕ್ಷಣದ ಏಳಿಗೆಗಾಗಿ. ಪ್ರಗತಿಗಾಗಿ. ಪದವೀಧರರ ಮತ್ತು ಶಿಕ್ಷಕರ ಸಮಸ್ಯಗಾಗಿ ಹಗಲು ಇರುಳು ಶ್ರಮೀಸುವಂತ ವ್ಯಕ್ತಿ. ಎಂದು ಹೇಳಿದರು. ರಾಜ್ಯದ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಶೂನ್ಯ. ಇತ್ತೀಚೆಗೆ ಲೋಕಸಭಾ ಚುನಾವಣೆ ಆಗಿದೆ ದೇಶದಲ್ಲಿ ನಮ್ಮ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವದು ಖಚಿತ ಮತ್ತು ನರೇಂದ್ರ ಮೋದಿಯವರು ಪ್ರಧಾನಿಯಾಗುವದು ಗ್ಯಾರಂಟಿ. ಮೋದಿಯವರು ತಮ್ಮ ಹತ್ತು ವರ್ಷಗಳ ಅಧಿಕಾರದ ಅವಧಿಯಲ್ಲಿ ಡಿಜಿಟಲ್ ಇಂಡಿಯಾ. ಬ್ರಹತ್ ಕೈಗಾರಿಕೆ ಉದ್ದಮೆ ದೇಶಕ್ಕಾಗಿ ದೇಶದಲ್ಲಿ ಇರುವ 140 ಕೋಟಿ ಜನರು ನನ್ನ ಪರಿವಾರ ಎಂದು ಹೇಳುತ್ತಾರ ಮತ್ತು ದೇಶದಲ್ಲಿ ಶಾಂತಿ ನೆಮ್ಮದಿ.ಬಡವರ ಹಿತಕ್ಕಾಗಿ ಕಾಳಜಿ ವಹಿಸಿ ಹಲವಾರು ಯೋಜನೆ ಜಾರಿಗೂಳಿಸಿ ಸಮಗ್ರ ಅಭಿವೃದ್ಧಿ ಮಾಡಿ ನಮ್ಮ ಭಾರತ ದೇಶದ ಕಿತಿ೯ಯನ್ನು ಹಿಮಾಲಯದ ಪರ್ವತ ಎತ್ತರ ಏರಿಸಿದ ಕಿತಿ೯ ನರೇಂದ್ರ ಮೋದಿಯವರಿಗೆ ಸಲುತ್ತದೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ ಅವರಿಗೆ ಅಡ್ರೆಸ್ ಇಲ್ಲದಂತೆ ಆಗಿದೆ ಅವರು ದೇಶದಲ್ಲಿ ಅಧಿಕಾರಕ್ಕೆ ಬರುವುದು ಅಸಾಧ್ಯ ಅವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.
ನಂತರ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ. ಕೊಪ್ಪಳ ಜಿಲ್ಲಾಧ್ಯಕ್ಷ ನವೀನಕುಮಾರ ಗುಳ್ಶಗಣ್ಣನವರು. ಲೋಕಸಭಾ ಅಭ್ಯರ್ಥಿ ಬಸವರಾಜ ಕ್ಯಾವಟರ್ ಕೆ. ಎನ್. ಮಹೇಶ್ವರಸ್ವಾಮಿ. ಅರುಣ ಶ್ಯಾಹಪೂರ.ಸಿ.ಎಚ್ ಪೊಲೀಸ್ ಪಾಟೀಲ ಅವರು ಕಾರ್ಯಕ್ರಮ ಕುರಿತು ಮಾತನಾಡಿ ನಮ್ಮ ಬಿಜೆಪಿ ಪಕ್ಷದ ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಅಮರನಾಥ ಪಾಟೀಲ ಅವರ ಪರ ಮತಯಾಚನೆ ಮಾಡಿ ಅವರ ಗೆಲುವುವಿಗಾಗಿ ಸಂಕಲ್ಪ ಮಾಡಿ ಹೆಚ್ಚು ಮತಗಳ ಅಂತರದಿಂದ ಗೆಲಿಸುತ್ತೇವೆ ಎಂದರು.
ನಂತರ ಅಭ್ಯರ್ಥಿ ಅಮರನಾಥ ಪಾಟೀಲ ಮಾತನಾಡಿ ನನ್ನಗೆ ಎರಡನೇ ಅವದಿಯಲ್ಲಿ ಆಯ್ಕೆ ಮಾಡಿ ನಿಮ್ಮಲರ ಧ್ವನಿಯಾಗಿ ಕೆಲಸ ಮಾಡಲು ಅವಕಾಶ ನಾಡಿಕೂಡಬೇಕು.
ಈ ಸಂದರ್ಭದಲ್ಲಿ ಆರ್ ಡಿಸಿಸಿ ಬ್ಯಾಂಕ್ ನಿದ೯ಶಕ ಬಸವರಾಜ ಗೌರಾ, ಬಸಲಿಂಗಪ್ಪ ಭೋತೆ, ಚಂದ್ರಶೇಖರ ಪಾಟೀಲ, ಶರಣಪ್ಪ ಈಳಗೇರ, ಜೆಡಿಎಸ್ ಪಕ್ಷದ ಜಿಲ್ಲಾ ವಕ್ತಾರ ಮಲ್ಲನಗೌಡ ಕೂನನ್ನಗೌಡ್ರ, ಅಯ್ಯನಗೌಡ ಕೆಂಚಮ್ಮನವರು, ಶಿವಶಂಕರರಾವ ದೇಸಾಯಿ, ವೀರಣ್ಣ ಹುಬ್ಬಳ್ಳಿ, ಅಮರೇಶ ಹುಬ್ಬಳ್ಳಿ, ಅಶೋಕ ಅರಕೇರಿ, ಕಳಕಪ್ಪ ತಳವಾರ, ಮಂಡಲದ ಅಧ್ಯಕ್ಷ ಮಾರುತಿ ಗೌವರಾಳ, ವಿಶ್ವನಾಥ್ ಮರಿಬಸಪ್ಪನವರು ಮತ್ತು ಪಕ್ಷದ ಕಾರ್ಯಕರ್ತರು ಮುಖಂಡರು ಮತ್ತು ಇತರರು ಭಾಗವಹಿಸಿದ್ದರು.
