ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷರಾಗಿ ಕೆ.ಎಸ್.ಬಸವರಾಜ್ ನೇಮಕ
ಕರುನಾಡ ಬೆಳಗು ಸುದ್ದಿ
ವಿಜಯನಗರ, 9- ಹೊಸಪೇಟೆ ಕರುನಾಡ ವಿಜಯ ಸೇನೆ ಜಿಲ್ಲಾ ಘಟಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ರಾಜ್ಯಾಧ್ಯಕ್ಷ H.N.ದೀಪಕ್ ಅವರ ಆದೇಶದ ಮೇರೆಗೆ ಕರುನಾಡ ವಿಜಯ ಸೇನಾ ಸಂಘಟನೆ ವಿಜಯನಗರ ಜಿಲ್ಲಾಧ್ಯಕ್ಷರಾಗಿ ಕೆ.ಎಸ್.ಬಸವರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.ಈ ಸಂದರ್ಭದಲ್ಲಿ ಮಾತನಾಡಿದ , ಕೆ.ಎಸ್.ಬಸವರಾಜ್ ಅವರು ಅಂದಿನ ದಿವಸ ಬೆರಳೆಣಿಕೆಯಷ್ಟು ಕಾರ್ಯಕರ್ತರನ್ನು ಹೊಂದಿದ್ದರೂ ನಮ್ಮೊಳಗಿನ ಕಿಚ್ಚು ಮತ್ತು ಕೆಚ್ಚುಗಳಿಗೇನೂ ಕೊರತೆಯಿರಲಿಲ್ಲ. ಕನ್ನಡನಾಡಿನಲ್ಲಿ ಕನ್ನಡದ ಸಾರ್ವಭೌಮತ್ವವನ್ನು ಮತ್ತೆ ಪ್ರತಿಷ್ಠಾಪಿಸುವ ದಿಟ್ಟವಾದ ಪಣತೊಟ್ಟು ಹೆಜ್ಜೆಹೆಜ್ಜೆಯಾಗಿ ಸಂಘಟನೆ ಬೆಳೆಯತೊಡಗಿತು.
ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಘೋಷ ವಾಕ್ಯದೊಂದಿಗೆ ಮೈದಳೆದ ಕರ್ನಾಟಕ ಕನ್ನಡ ಚಳವಳಿಯೆನ್ನುವುದು ಒಂದು ಗಂಭೀರ ಚಿಂತನೆಯ ದೂರದೃಷ್ಟಿಯ, ನಾಡು ಕಟ್ಟುವ ಪ್ರಾಮಾಣಿಕ ಕಾಯಕ’ ಎಂಬುದಾಗಿ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಸಂಘಟನೆಯ ಪ್ರತಿಯೊಬ್ಬ ಪದಾಧಿಕಾರಿಯೂ ನಾಯಕನಾಗಬೇಕೆಂದು ಬಯಸುವ ರಾಜ್ಯಾಧ್ಯಕ್ಷ ಎಚ್.ಎನ್ .ದೀಪಕ್ ಅವರು ಅಂತಹ ಅವಕಾಶಗಳನ್ನು ಸದಾ ಒದಗಿಸುತ್ತಲೇ ಬಂದಿದ್ದಾರೆ. ನಮ್ಮೆಲ್ಲ ಹೋರಾಟಗಾರರಿಗೂ ಸ್ಪೂರ್ತಿಯ ಚಿಲುಮೆಯಾಗಿರುವ . ರಾಜ್ಯಾಧ್ಯಕ್ಷರಾದ ಎಚ್.ಎನ್. ದೀಪಕ್ ಅವರು ಅಪಾರವಾದ ಅಭಿಮಾನಿ ಬಳಗ ಹೊಂದಿದ್ದು ನಮ್ಮ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರ ಪಾಲಿನ ಹಿರಿಯಣ್ಣನಾಗಿದ್ದಾರೆ. ಇವರು ನಾಡಿನ ನಾಳಿನ ಆಶಾಕಿರಣವಾಗಿದ್ದಾರೆ.
ನಮ್ಮ ಸಂಘಟನೆ ನಿರಂತರವಾಗಿ ಕರ್ನಾಟಕದ ವಿವಿಧ ವಿಷಯಗಳಲ್ಲಿ ತನ್ನನ್ನ ತೊಡಗಿಸಿಕೊಂಡು ನಾಡಪರವಾದ ಹೋರಾಟಗಳನ್ನ ನಡೆಸಿಕೊಂಡು ಬಂದಿದೆ. ನಾಡು-ನುಡಿ, ನೆಲ-ಜಲ ಭಾಷೆಗಾಗಿ ದುಡಿಯುವೆ ಸಾಧ್ಯವಾದಷ್ಟು ಮಟ್ಟಿಗೆ ಹೋರಾಟಗಳನ್ನು ಮಾಡುವ ಮೂಲಕ ಜನರಲ್ಲಿ ಚೇತರಿಕೆ ತರುವೆ ಮುಂದಿನ ನನ್ನ ಸಂಘಟನೆಯ ರೂಪೇರೇಷಗಳನ್ನ ಹಾಗೂ ಕಾರ್ಯವೈಖರಿಯ ಬಗ್ಗೆ ಸ್ಪಷ್ಟ ಚಿತ್ರಣವನ್ನು ಹಾಕಿಕೊಂಡು ಮುನ್ನಡೆಯುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರುನಾಡ ವಿಜಯ ಸೇನೆ ಸಂಘಟನೆ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 2024 -25 ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಂಸ್ಥಾಪಕರ ರಾಜ್ಯಾಧ್ಯಕ್ಷರಾದ ಎಚ್ಎನ್ ದೀಪಕ್ ಅವರ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯ ಶ್ರೀ ಶ್ರೀ ಚಂದ್ರಶೇಖರ್ ಕುಮಾರ್ ಸ್ವಾಮೀಜಿಗಳು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಕೆಂಗೇರಿ ಹಾಗೂ ಪರಮಪೂಜ್ಯ ಶ್ರೀ ಶ್ರೀ ಚನ್ನಬಸವ ಸ್ವಾಮೀಜಿಗಳ ದೇಗುಲ ಮಠ ಕನಕಪುರ ರಾಮನಗರ ಜಿಲ್ಲೆ ಮತ್ತು ಜಯನಗರದ ವಿಧಾನಸಭಾ ಶಾಸಕರಾದ ಸಿ ಕೆ ರಾಮ್ ಮೂರ್ತಿ ಅಧ್ಯಕ್ಷರು ಬೆಂಗಳೂರು ಜಿಲ್ಲೆ ಹಾಗೂ ಸಂಘಟನೆ ಎಲ್ಲಾ ಪದಾಧಿಕಾರಿಗಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
