WhatsApp Image 2024-03-03 at 6.26.27 PM

ಕಷ್ಟಗಳೆ ಪ್ರತಿಭೆ ಅರಳಲು ಪ್ರೇರಣೆ : ಡಾ.ಕರಿಯಪ್ಪ ಮಾಳಗಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,3- ಕಷ್ಟದಲ್ಲಿಯೇ ಬಹುತೇಕ ಪ್ರತಿಭೆ ಅರಳುತ್ತವೆ, ಕಷ್ಟಗಳು ಬದುಕಿನ ಜೀವನದ ಪಕ್ವತೆಗೆ ಕಾರಣವಾಗುತ್ತದೆ ಕಷ್ಟಗಳಿಗೆ ಎದೆಗುಂದಬಾರದೆಂದು ಶಿಕ್ಷಣತಜ್ಞ ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಗಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಉದ್ಯಮಿ ಜೋಳದರಾಶಿ ತಿಮ್ಮಪ್ಪ ಅವರು ತಮ್ಮ ತಂದೆ ಬಿ.ಶ್ರೀ ಎರ್ರಿಸ್ವಾಮಿ ಅವರ ಸ್ಮರಣಾರ್ಥ ನಗರದ ಎಂಬಿ‌ಎಸ್ ಎಲ್ ಮತ್ತು ಮಹಿಳಾ  ಹೈಸ್ಕೂಲ್ ನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷೆ ಪ್ಯಾಡ್ ಮತ್ತು ಪೆನ್ ಗಳನ್ನು ವಿತರಿಸಿ ಮಾಳಗಿ ಅವರು ಮಾತನಾಡಿದರು.

ಕಷ್ಟಗಳನ್ನು ನಾವು ಸಾಧನೆಗೆ ಅಡ್ಡಿ ಆತಂಕಗಳೆಂದು ತಿಳಿಯದೆ ಇವು ಸಾಧನೆಯ ಮೆಟ್ಟಿಲು ಎಂದು ತಿಳಿದಾಗ ಅವುಗಳು ನಮಗೆ ಸಮಸ್ಯೆಯೆಂದು ಕಾಣುವುದಿಲ್ಲ. ಇಂತಹ ಧನಾತ್ಮಕ ಮನೋಭಾವನೆಯನ್ನು ಪ್ರತಿ ಯೊಬ್ಬರು ರೂಢಿಸಿಕೊಳ್ಳಬೇಕೆಂದು ತಿಳಿಸಿದರು.

ಪ್ರತಿಯೊಬ್ಬರಿಗೆ ಜೀವನದಲ್ಲಿ ಹಲವು ಅವಕಾಶಗಳು ಸಿಗುತ್ತವೆ, ಅವುಗಳನ್ನು ಸಮರ್ಥವಾಗಿ ಬಳಸಿಕೊಂಡಾಗ ಏಳಿಗೆ ಸಾಧ್ಯ, ಅಂತಹ ಅವಕಾಶ ಬಳಸಿಕೊಳ್ಳದೆ ಕೈಚೆಲ್ಲಿ ಕೂತರೆ ನಮ್ಮ ಬೆಳವಣಿಗೆಯನ್ನು ನಾವೇ ಚಿವುಟಿ‌ ಹಾಕಿದಂತೆ ಎಂದರು.

ಜೋಳದರಾಶಿ ತಿಮ್ಮಪ್ಪ ಮಾತನಾಡಿ, ಬಡ ಮಕ್ಕಳು ಯಾವುದೇ ವಿಚಾರದಲ್ಲಿ ಕಡಿಮೆ ಇರಬಾರದು, ಪ್ರತಿಯೊಬ್ಬರಿಗೆ ಶೈಕ್ಷಣಿಕ ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಕೊರತೆಯಾಗಬಾರದು. ನಾವು ಪಟ್ಟಂತ ಕಷ್ಟಗಳನ್ನು ನೀವು ಪಡೆಯದೆ, ಶೈಕ್ಷಣಿಕ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಕೆ.ಎಂ.ಮಂಜುನಾಥ್, ಗುತ್ತಿಗೆದಾಗ ಕಿಶೋರ್ ಬಾಬು, ಮುಖ್ಯೋಪಾಧ್ಯಾಯ ಕೆ.ವಿ.ಶ್ರೀನಿವಾಸುಲು, ವಕೀಲರ ಸಂಘದ ಅಧ್ಯಕ್ಷ ಎರ್ರೆಗೌಡ, ಉಪಾಧ್ಯಕ್ಷ ನಾಗರಾಜ ನಾಯಕ್,ದುರುಗಪ್ಪ,ರುದ್ರಪ್ಪ,ಸುಧಾಕರಹೆಡ್ಗೆ,ಜೋಳದರಾಶಿ ಶೇಕ್ಷವಲಿ, ಶಿಕ್ಷಕ ಮರೇಗೌಡ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!