ಕಾಂಗ್ರೆಸ್ ತೊರೆದ ಗ್ರಾಪಂ ಸದಸ್ಯರು ಸಿದ್ದೇಶ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 15- ಜಿಲ್ಲೆಯ ಸಂಡೂರು ತಾಲೂಕಿನ ಹೊಸದರೋಜಿ ಗ್ರಾಪಂ ಸದಸ್ಯರು ಕಾಂಗ್ರೆಸ್ ಪಕ್ಷ ತೊರೆದು ಸೋಮವಾರ ಬಿಜೆಪಿ ಸೇರಿದರು.
ಸಂಡೂರು ತಾಲೂಕಿನ ಹೊಸದರೋಜಿ ಗ್ರಾಮ ಪಂಚಾಯಿತಿಯ ಯು.ತಿಮ್ಮಪ್ಪ, ವಿ.ಶಣ್ಮುಖ, ಯು.ನಾಗರಾಜ, ಯು.ಸ್ವಾಮಿ ಮತ್ತು ನಾಗಮೂರ್ತಿ, ನಾಗರಾಜ, ಗೋವಿಂದ, ಯು.ರಾಜ, ಈರಣ್ಣ ಸೇರಿ ಹಲವರು ನಗರದ ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಸಮ್ಮುಖದಲ್ಲಿ, ಬಿಜೆಪಿ ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಊಳೂರು ಸಿದ್ದೇಶ್ ನೇತೃತ್ವದಲ್ಲಿ ಬಿಜೆಪಿ ಸೇರಿದರು.
ಈ ಸಂದರ್ಭದಲ್ಲಿ ಹನುಮೇಶ್, ಗೋವಿಂದಪ್ಪ, ಮಧುಕುಮಾರ್, ಮಾಯಣ್ಣ, ಗಣೇಶ್, ಸುಂಕಪ್ಪ ಸೇರಿ ಹಲವರು ಇದ್ದರು.
