WhatsApp Image 2024-04-27 at 2.54.23 PM

ದೇಶದ ಎಲ್ಲಾ ಸಮುದಾಯಗಳ ಏಳಿಗೆಗಾಗಿ ಶ್ರಮಿಸದ ಪಕ್ಷ ಕಾಂಗ್ರೆಸ್ : ಶಾಸಕ ಬಸವರಾಜ ರಾಯರಡ್ಡಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 27- ದೇಶದ ಎಲ್ಲಾ ಸಮುದಾಯಗಳ ಏಳಿಗೆ ಗಾಗಿ ಶ್ರಮಿಸಿದೆ ಮತ್ತು ಅವರ ಹಿತ ಬಯಸುವ ಪಕ್ಷ ಕಾಂಗ್ರೆಸ್ ಬಿಜೆಪಿಗರು ಬರೀ ಜಾತಿ ಧರ್ಮಗಳ ಹೆಸರಿನಲ್ಲಿ ಒಡೆದಾಳುವ ಮೂಲಕ ಸಣ್ಣತನ ರಾಜಕಾರಣ ಮಾಡುತ್ತಿದ್ದಾರೆ ಅಂತವರಿಗೆ ನಿಮ್ಮ ಅಮೂಲ್ಯ ವಾದ ಮತಕೂಡಬೇಡಿ ಎಂದರು.

ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ ಮಾಡುತ್ತೇವೆ.ಎಂದು ಶಾಸಕ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಸಂಗನಾಳ.ಹುಣಸಿಹಾಳ. ಯಡ್ಡೋಣಿ..ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ಪರ ಮತಯಾಚನೆ ಮತ್ತು ಸಾರ್ವಜನಿಕ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್ ಡೀಸೆಲ್ LPG ಗ್ಯಾಸ ತೈಲಗಳ ಬಂಗಾರ ಬೆಳ್ಳಿ ಬೆಲೆಗಳು ಗಗನಕ್ಕೆ ಏರಿವೆ. ಈ ಲೋಕಸಭಾ ಚುನಾವಣೆ ಸುಳ್ಳು ಮತ್ತು ಸತ್ಯದ ಮೇಲೆ ಚುನಾವಣೆ ನಿಂತಿದೆ ಕರ್ನಾಟಕದಲ್ಲಿ ಬರ ಬಿದ್ದರೂ ಬರಲಿಲ್ಲ, ಪ್ರವಾಹ ಬಂದರೂ ಬಾರದವರು ಚುನಾವಣೆ ಬಂದಾಗ ಮಾತ್ರ ರಾಜ್ಯಕ್ಕೆ ಬಂದು ಮತ ಕೇಳುತ್ತಾರೆ ದೇಶದಲ್ಲಿ ಏನಾದರು ದೊಡ್ಡ ದೊಡ್ಡ ಯೋಜನೆಗಳನ್ನು ಜಾರಿಗೆ ತಂದಿರುವದು ಕಾಂಗ್ರೇಸ್ ಪಕ್ಷದಿಂದ ಸಾಧ್ಯವಾಗಿದೆ.

ನಾವು ಚುನಾವಣೆ ಪೊವ೯ದಲ್ಲಿ ಕೊಟ್ಟ ಮಾತಿನಂತೆ 5 ಗ್ಯಾರಂಟಿ ಯೋಜನೆಗಳನ್ನು ಎಲ್ಲಾ ಜಾತಿ ಧರ್ಮದವರಿಗೆ ಈ ಯೋಜನೆ ತಲುಪುತ್ತದೆ ಮಹಿಳೆಯರು ಉಚಿತ ಬಸ್. ಗ್ರಹಲಷ್ಮಿ 2000 ರೂ. ಪ್ರತಿ ಮನಿಗೆ 200 ಯುನಿಟ್ ವಿದ್ಯುತ್ ಉಚಿತ. ಬಡವರಿಗೆ 10 ಕೇಜಿ ಅಕ್ಕಿ ಉಚಿತ. ಪದವೀಧರ ಯುವಕರಿಗೆ 1500/3000.ರೂ ನೀಡಿದು ಕಾಂಗ್ರೆಸ್ ಸರಕಾರ. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರದ ಮನಮೋಹನ್ ಸಿಂಗ್ ಅವರು ಪ್ರಧಾನಿ ಯಾಗಿದ್ದಾಗ ಆಹಾರ ಭದ್ರತೆ ಕಾಯ್ದೆ ತಂದಿದ್ದು. ಮತ್ತು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿ ಗೂಳಿಸಿದು ನಮ್ಮ ಕಾಂಗ್ರೆಸ್ ಸರಕಾರದು. ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ 30 ರಿಂದ 35 ಸಾವಿರ ಮತಗಳು ಲಿಡ್ ಮತದಾರರು ಕೊಡಬೇಕು ನಮ್ಮ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರಿಗೆ ಮತ ಹಾಕುವ ಮೂಲಕ ಹೆಚ್ಚಿನ ಮತಗಳಿಂದ ಗೆಲಿಸಬೇಕು ಬಿಜೆಪಿಯವರು ಸುಳ್ಳು ಹೇಳ್ಳುವದರಲ್ಲಿ ನಂಬರ 1 ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ ಬಿಜೆಪಿಯವರು ತಾವು ಅಭಿವೃದ್ಧಿ ಮಾಡಿ ಮತ ಕೇಳುವದು ಬಿಟ್ಟು ಅವರು ಹೇಳುವದು ನರೇಂದ್ರ ಮೋದಿಯವರನ್ನು ನೋಡಿ ಮತ ಕೂಡಿ ಅಂತಾ ಹೇಳುತ್ತಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು,10 ವರ್ಷ ಆಯಿತು ಯಾವ ಅಭಿವೃದ್ಧಿಯಾಗಿಲ್ಲ ಅವರು 2 ಕೋಟಿ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದರು ಪ್ರತಿಯೊಬ್ಬರ ಜನಧನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಅಂತಾ ಹೇಳಿದವರು. ಯಾರ ಖಾತೆಗೆ 15 ಲಕ್ಷ ಹಣ ಬಂದಿದೆ ಮತ್ತು ಯಾವ ಯುವಕರಿಗೆ ಉದ್ಯೋಗ ನೀಡಿದ್ದಾರೆ ಬರಿ ಉದ್ರಿ ಭಾಷಣ ಮಾಡಿ ಹೋಗುವವರನ್ನು ನಂಬಬೇಡರಿ ಎಂದರು.

ಮತದಾರರು ಹಣಕ್ಕೆ ಮತದಾನ ಮಾರಿ ಕೊಳ್ಳುವವರಲ್ಲ ಅಭಿವೃದ್ದಿಗೆ ಮಾತ್ರ ಮತ ನೀಡುತ್ತಾರೆ ಸಿದ್ದರಾಮಯ್ಯನವರು ಉತ್ತಮ ಆಡಳಿತ ನಡೆಸುವ ಮೂಲಕ ಬಡವರ ಬಗ್ಗೆ ವಿಶೇಷ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಿದ್ದಾರೆ ಕಳೆದ ಹತ್ತು ವರ್ಷ ದಲ್ಲಿ ಕೇಂದ್ರದ ಬಿಜೆಪಿ ಸರಕಾರ ದೇಶಕ್ಕೆ ಇವರ ಕೊಡುಗೆ ಏನು ಎಂದು ಪ್ರಶ್ನಿ ಸಿದರು.

ಕೇಂದ್ರ ಸರಕಾರದ ಕಿಸಾನ್ ಸಮ್ಮಾನ ಯೋಜನೆಯ ಹಣ ಒಂದು ವರ್ಷಕ್ಕೆ ಆರು ಸಾವಿರ ಮಾತ್ರ ತಲುಪುತ್ತಿದೆ ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜ್ಯ ಸರಕಾರದಿಂದ ತಿಂಗಳಿಗೆ 2000 ರೂಪಾಯಿ ಗೃಹ ಲಕ್ಷ್ಮಿ ಯೋಜನೆ 1 ವರ್ಷಕ್ಕೆ 24 ಸಾವಿರ ಹಣ ಪ್ರತಿ ಮನೆಯ ಯಜಮಾನಿಗೆ ತಲುಪುತ್ತದೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ರಾಜ ಶೇಖರ ಹಿಟ್ನಾಳ ರವರನ್ನು ಅತ್ಯಂತ ಹೆಚ್ಚು ಮತಗಳಿಂದ ಬಹುಮತದಿಂದ ಆರಿಸಿ ತರಲು ಮುಖಂಡರು ಕಾರ್ಯಕರ್ತರು ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಶ್ರಮಿಸಬೇಕು.ಮತ್ತು ಕಾಂಗ್ರೇಸ್ ಸರಕಾರದ ಅಭಿವೃದ್ಧಿ ಬಗ್ಗೆ ಮತ್ತು ಗ್ಯಾರಂಟಿ ಯೋಜನಗಳನ್ನು ಪ್ರತಿ ಮನೆ ಮನೆಗೆ ಹೋಗಿ ಜನರಿಗೆ ಮನ ಮುಟ್ಟುವಂತೆ ತಿಳಿಸಿ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಎಂದು ಹೇಳಿದರು.

ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಅವರು ಮಾತನಾಡಿ ರಾಜ್ಯದ ಸಿ ಎಂ ಸಿದ್ದರಾಮಯ್ಯನವರ ನೇತೃತ್ವದ ಸರಕಾರದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ.ಲೋಕಸಭಾ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ಗೆಲುವಿಗ ಶ್ರೀರಕ್ಷಯಾಗಲಿದೆ ನಮ್ಮ ಕ್ಷೇತ್ರದಲ್ಲಿ ರಾಯರಡ್ಡಿ ಅವರ ಸಮಗ್ರ ಅಭಿವೃದ್ಧಿ ಮಾಡಿ ಉತ್ತಮ ಜನ ಮೆಚ್ಚಿದ ನಾಯಕರಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಹನಮಂತಗೌಡ ಪೋಲೀಸ್ ಪಾಟೀಲ್,ವೀರನಗೌಡ್ರ ಪೋಲೀಸ್ ಪಾಟೀಲ, ಬಿ.ಎಂ.ಶಿರೂರು, ಯಂಕಣ್ಣ ಯರಾಶಿ, ಎ.ಜಿ.ಭಾವಿಮನಿ, ಶರಣಪ್ಪ ಗಾಂಜಿ, ಡಾ.ಶಿವನಗೌಡ ದಾನರಡ್ಡಿ, ಸುಧೀರ್ ಕೂಲ೯ಹಳ್ಳಿ, ಹೇಮರೆಡ್ಡಿ ರಡ್ಡೇರ್,
ಮಾಹಂತೇಶ ಗಾಣೀಗೇರ, ಭಾಗೀರಥಿ ಜೋಗಿನ, ಮಂಜುನಾಥ ಕಡೇಮನಿ, ಬಸವರಾಜ ಬಡಗೇರ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!