WhatsApp Image 2024-02-13 at 1.08.59 PM

ಕಾನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದಲಿತರ ಕುಂದು ಕೊರತೆಗಳ ಸಭೆ

ಕರುನಾಡ ಬೆಳಗು ಸುದ್ದಿ

ವಿಜಯನಗರ,13- ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಭಾನುವಾರ ಪಿಎಸ್ಐ ಎರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ದಲಿತರ ಕುಂದು ಕೊರತೆಗಳ ಸಭೆ ನಡೆಸಿದರು.

ಈ ಸಭೆಯನ್ನು ಉದ್ದೇಶಿಸಿ ನಿವೃತ್ತ ತಹಸಿಲ್ದಾರ್ ಭೀಮಸಮುದ್ರ ಓಬಪ್ಪಮಾತನಾಡಿ ಇನ್ನು ಗ್ರಾಮಗಳಲ್ಲಿ ಇಸ್ಪೀಟ್, ಬ್ರಾಂಡಿ ಮಾರಾಟ ಮಾಡುವುದು ನಿಂತಿಲ್ಲ ಇದರಿಂದ ಯುವಕರು ಬಹಳ ಹಾಳಾಗುತ್ತಿದ್ದಾರೆ, ಗ್ರಾಮದ ದಲಿತ ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಉಪಯೋಗಿಸಿದ ನೀರು ರಸ್ತೆಯ ಮೇಲೆ ಹರಿದು ಮುಂದಕ್ಕೆ ಹೋಗದೆ ನಿಂತು ಸಾರ್ವಜನಿಕರು ಹಾಗೂ ವಾಹನ ಸವಾರರು ಓಡಾಡಲು ತುಂಬಾ ಸಮಸ್ಯೆಯಾಗಿದೆ. ಕಾರಣ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅವರಿಗೆ ತಿಳಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡಬೇಕು ಹಾಗೂ ಗ್ರಾಮಗಳಿಗೆ ಬೀಟ್ ಪೊಲೀಸರನ್ನು ನೇಮಿಸಬೇಕು ಎಂದು ಸಭೆಯಲ್ಲಿ ಪೊಲೀಸ್ ಠಾಣೆ ಅಧಿಕಾರಿಗಳಿಗೆ ತಿಳಿಸಿದರು.

ತುಂಬರಗುದ್ದಿ ಗ್ರಾಮದಲ್ಲಿ ಹಾಗೂ ಇನ್ನೂ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ತುಂಬಾ ಹಳೆಯದ್ದಾಗಿದ್ದು ಮುರಿದು ಬೀಳುವ ವೆ ಸ್ಥಿತಿಯಲ್ಲಿ ಇವೆ. ವಿದ್ಯುತ್ ತಂತಿಗಳು ಜೊತು ಬಿದ್ದಿರುತ್ತವೆ ಹೊಸ ಕಂಬಗಳನ್ನು ಹಾಗೂ ಜೋತು ಬಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕೆಂದು ಸಂಬಂಧಪಟ್ಟ ಕೆಇಬಿ ಅಧಿಕಾರಿಗೆ ತಿಳಿಸಬೇಕೆಂದು ದಲಿತ ಮುಖಂಡ ತುಂಬರಗುದ್ದಿ ದುರುಗೇಶ್ ತಿಳಿಸಿದರು.

ಸಭೆಯಲ್ಲಿ ದಲಿತ ಮುಖಂಡರುಗಳಾದ ಡಿಎಂ ಈಶ್ವರಪ್ಪ, ಟಿ ಗಂಗಾಧರ, ಕರಿಬಸಪ್ಪ ಪಕೀರಪ್ಪ ಓಬಳೇಶ, ಚಂದ್ರು ಇನ್ನು ಹಲವಾರು ದಲಿತ ಮುಖಂಡರು ಈ ಸಭೆಯಲ್ಲಿ ಮಾತನಾಡಿದರು.

ಈ ವಿಷಯಗಳಿಗೆ ಸಂಬಂಧಿಸಿದಂತೆ ಪಿಎಸ್ಐ ಎರಿಯಪ್ಪನವರು ಮಾತನಾಡಿ ನಮ್ಮ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕೆಲವು ಹಳ್ಳಿಗಳಲ್ಲಿ ಅಕ್ರಮವಾಗಿ ಮಧ್ಯ ಹೋರಾಟ ಮಾಡುವವರ ವಿರುದ್ಧ ಸುಮಾರು 50 ಪ್ರಕರಣಗಳನ್ನು ದಾಖಲಿಸಿದ್ದೇವೆ ಹಾಗೂ ಸ್ಟೇಟ್ ಓಸಿ ಇತರೆ ಕಾನೂನು ಬಾಹಿರ ಚೆಟುವತಿಕೆಗಳನ್ನು ಮಾಡು ವವರ ವಿರುದ್ಧ ಕೂಡ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗಿದೆ ಪೊಲೀಸ್ ಠಾಣೆ ವ್ಯಾಪ್ತಿಯು ದೊಡ್ಡದಾಗಿರುವುದರಿಂದ ಸಿಬ್ಬಂದಿ ಕೊರತೆ ಇದ್ದು ಸಕಾಲಕ್ಕೆ ಸರಿಯಾಗಿ ಬೀಟ್ ಪೊಲೀಸರು ಗ್ರಾಮಗಳಿಗೆ ಭೇಟಿ ಕೊಡಲು ಆಗುತ್ತಿಲ್ಲ ಆದರೂ ಬೀಟ್ ಪೊಲೀಸರನ್ನು ನೇಮಕ ಮಾಡಲಾಗಿದೆ. ಆಗಿಂದಾಗೆ ಗ್ರಾಮಗಳಿಗೆ ಅವರು ಕೂಡ ಭೇಟಿ ನೀಡುತ್ತಿದ್ದಾರೆ.

ಕೆಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಹಳೆಯದಾಗಿದ್ದು ಬೀಳುವ ಸ್ಥಿತಿಯಲ್ಲಿವೆ ಹಾಗೂ ವಿದ್ಯುತ್ ತಂತಿಗಳು ಜೂತು ಬಿದ್ದಿವೆ ಎಂದು ತಿಳಿಸಿದ್ದೀರಿ ಸಂಬಂಧಪಟ್ಟ ಕೆಇಬಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ತಿಳಿಸಲಾಗುವುದು, ಇನ್ನೂ ಕೆಲವು ಗ್ರಾಮಗಳಲ್ಲಿ ಚರಂಡಿ ಹಾಗೂ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೊತೆ ಚರ್ಚಿಸಿ ಮಾತನಾಡಿ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಪೊಲೀಸ್ ಇಲಾಖೆಯಿಂದ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ತಿಳಿಸುತ್ತೇವೆ ಎಂದು ಹೇಳಿದರು.

ಪೊಲೀಸ್ ಇಲಾಖೆ ವತಿಯಿಂದ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಗಳಲ್ಲಿ ಕುಂದು ಕೊರತೆಗಳ ಸಭೆಗಳನ್ನು ಮಾಡಲಾಗುವುದು ಎಂದು ದಲಿತ ಮುಖಂಡರಿಗೆ ತಿಳಿಸಿದರು.

ಪಿ ಎಸ್ ಐ ಹೆಚ್ ನಾಗರತ್ನಮ್ಮ, ಕಾನ ಮಡಗು ದುರ್ಗೇಶ್,ತಿಪ್ಪೆಹಳ್ಳಿ ರುದ್ರಮುನಿ, ಕೇಶವ, ಬೋವಿ ಸಮಾಜದ ಮುಖಂಡ ಹನುಮಂತಪ್ಪ, ಕೆ ಎಮ್ ಹಳ್ಳಿ ಓಬಳೇಶ, ಊಟೆಪ್ಪ ತಾಯಕನಹಳ್ಳಿ ಬಸವರಾಜ, ಅಶೋಕ,ಮಾರುತಿ ಸೇರಿದಂತೆ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಗ್ರಾಮಗಳ ದಲಿತ ಮುಖಂಡರು ಪೋಲಿಸ್ ಸಿಬ್ಬಂದಿ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!