2c136fae-be38-4577-97e1-318669006cc9

ಕುಷ್ಟಗಿ : ತೆಗ್ಗಿನ ಓಣಿ ದ್ಯಾಮಮ್ಮನ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷಿದ್ಧ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,10- ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯಲ್ಲಿರುವ ಶ್ರೀ ದ್ಯಾಮಮ್ಮನ ಜಾತ್ರೆಯು ಸುಮಾರು 65 ವರ್ಷಗಳ ನಂತರ ಏಪ್ರಿಲ್ 9 ರಿಂದ 20 ರವರೆಗೆ ನಡೆಯಲಿದೆ.

 ಈ ಸಮಯದಲ್ಲಿ ಕೋಣ, ಟಗರು, ಕುರಿ, ಕೋಳಿಗಳನ್ನು ದೇವಸ್ಥಾನದ ಸುತ್ತಮುತ್ತಲಿನ ಪರಿಸರದಲ್ಲಿ ಬಲಿ ಕೊಡುವುದನ್ನು ಹೈಕೋರ್ಟ್ ನಿರ್ದೇಶನದಂತೆ ನಿಷೇಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಹಾಗೂ ಹೈಕೋರ್ಟ್ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕುಷ್ಟಗಿ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!