WhatsApp Image 2024-03-15 at 6.43.15 PM

ಕೈ ತಪ್ಪಿದ ಹುಡಾ ಅಧ್ಯಕ್ಷ ಸ್ಥಾನ : ನಿಯಾಜಿ ಅಸಮದಾನ

ಕರುನಾಡ ಬೆಳಗು ಸುದ್ದಿ

ವಿಜಯನಗರ,15- ಕರ್ನಾಟಕ ರಾಜ್ಯ ಸರ್ಕಾರ ಜಿಲ್ಲೆಯ ಹೊಸಪೇಟೆಯ ನಗರಾಭಿವೃದ್ಧಿ ಪ್ರಾಧಿಕಾರದ ಹೂಡಾ ಅಧ್ಯಕ್ಷ ಸ್ಥಾನಕ್ಕೆ ಸ್ಥಳೀಯ ಕಾಂಗ್ರೇಸ್ ಮುಖಂಡರಾದ ಇಮಾಮ್ ನಿಯಾಜಿ ಇವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ, ಆದೇಶ ಹೊರಡಿಸಲಾಗಿತ್ತು. ನಂತರ ಕೆಲವೇ ಕ್ಷಣಗಳಲ್ಲಿ ಆದೇಶ ಹಿಂಪಡೆದಿದ್ದರಿಂದ ಅವರಲ್ಲಿ ಮತ್ತು ಅವರ ಕಾಂಗ್ರೇಸ್ ಅಭಿಮಾನಿಗಳಲ್ಲಿ ಗೊಂದಲಮಯ ವಾತಾವರಣ ಮೂಡಿತ್ತು.

ಅಲ್ಪಸಂಖ್ಯಾತ ಮತದಾರರನ್ನು ಗಮನದಲ್ಲಿಟ್ಟುಕೊಂಡು ಬದಲಾದ ವಿದ್ಯಮಾನಗಳಲ್ಲಿ ಕಾಂಗ್ರೇಸ್ ರಾಜಕೀಯ ಪಕ್ಷದ ಹೂಡಾ ಅಧ್ಯಕ್ಷ ಸ್ಥಾನ ಪ್ರಭಲ ಆಕಾಂಕ್ಷಿ ಯಾಗಿದ್ದ ಇಮಾಮ್ ನಿಯಾಜಿ ಕಾಂಗ್ರೇಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಉನ್ನತ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿ ಮುಸ್ಲಿಂ ಸಮುದಾಯದ ಸ್ಥಳೀಯ ಅಂಜುಮಾನ್ ಕಮಿಟಿಯ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಮತದಾರರಿಗೆ ಮೂಲಭೂತ ಸೌಕರ್ಯ್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಏಕಾಏಕಿ ಅಧ್ಯಕ್ಷ ಸ್ಥಾನದ ಆದೇಶ ಹಿಂಪಡೆದಿದ್ದರಿಂದ ಅಸಮದಾನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!