ಕೊಪ್ಪಳ : ಇಂಕ್ ಸ್ಲಿಂಗರ್ಸ್ ಕ್ಲಬ್ ಉದ್ಘಾಟನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 10- ವಿದ್ಯಾರ್ಥಿಗಳ ಸೃಜನಾತ್ಮಕತೆ, ಬರವಣಿಗೆ ಸಾಮರ್ಥ್ಯವನ್ನು ಬೆಳೆಸಲು ಮತ್ತು ಸಾಹಿತ್ಯ ಲೋಕದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ಇಂತಹ ಕ್ಲಬ್ಗಳು ಸಹಾಯಕಾರಿ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಬಸವರಾಜ್ ಟಿ. ಎಚ್. ‘ಇಂಕ್ ಸ್ಲಿಂಗರ್ಸ್ ಕ್ಲಬ್’ ನ್ನು ಉದ್ಘಾಟಿಸಿ ಮಾತನಾಡಿದರು.
ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದಿಂದ ‘ಅಲೈಸ್ ಇನ್ ವಂಡರ್ಲ್ಯಾಂಡ್ ಡೇ’ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ಪಡೆದ ಲೀವಿಸ್ ಕ್ಯಾರೋಲ್ ರವರ ಅಲೈಸ್ ಅಡ್ವೆಂಚರ್ಸ್ ಇನ್ ವಂಡರ್ಲ್ಯಾAಡ್ ಕಥೆಯ ಹಲವು ಅಂಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ‘ಹ್ಯಾಂಡ್ಸ್ ಆನ್ ಟ್ರೈನಿಂಗ್ ಇನ್ ಇಂಗ್ಲಿಷ್ ಕಮ್ಯುನಿಕೇಷನ್’ ಸಂವಹನ ತರಬೇತಿಯನ್ನು ಪ್ರಾರಂಭಿಸಲಾಯಿತು. ಈ ತರಬೇತಿ ವಿದ್ಯಾರ್ಥಿಗಳಿಗೆ ಭಾಷಾ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹಾಗೂ ದಿನನಿತ್ಯದ ಜೀವನದಲ್ಲಿ ಸುಗಮವಾಗಿ ವ್ಯವಹರಿಸಲು ಅಗತ್ಯವಿರುವ ಕೌಶಲ್ಯಗಳನ್ನು ಕಲಿಸಲಿದೆ ಅಲ್ಲದೇ ತರಬೇತಿಯು ಭಾಷೆಯ ಸ್ವಾಭಾವಿಕ ಬಳಕೆ, ಬೋಧನಾ ವಿಧಾನಗಳು, ಚರ್ಚೆಗಳು ಮತ್ತು ಪ್ರಾಯೋಗಿಕ ಚಟುವಟಿಕೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಸಂವಹನ ಸಾಮರ್ಥ್ಯ ಹೆಚ್ಚಿಸಲಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಚನ್ನಬಸವ ಅವರು ಮಾತನಾಡುತ್ತಾ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸೃಜನಾತ್ಮಕತೆ ಮತ್ತು ಭಾಷಾ ಸಾಮರ್ಥ್ಯವನ್ನು ಉತ್ತೇಜಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸಲಿವೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಕ್ಲಬ್ನ ಅಧ್ಯಕ್ಷರಾದ ಕು. ಸುರೇಶ್, ಬಿ.ಎ. ೬ನೇ ಸೆಮ್ ಹಾಗೂ ಸದಸ್ಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಾಧ್ಯಾಪಕ ಪ್ರವೀಣ್ ಹಾದಿಮನಿ ಸ್ವಾಗತಿಸಿದರು, ಡಾ. ಅರುಣ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು, ಶ್ರೀಮತಿ ಸ್ವಾತಿ ಹಿರೇಮಠ್ ವಂದಿಸಿದರು. ಕು. ಕವಿತಾ ಪ್ರಾರ್ಥಿಸಿದರೆ ಕು. ಕೀರ್ತಿ ಕಾರ್ಯಕ್ರಮ ನಿರೂಪಿಸಿದರು.
