ಕೊಪ್ಪಳ : ಈದ್ಗಾ ಮೈದಾನದಲ್ಲಿ ಬಕ್ರೀದ್ ನಮಾಝ್ ಸಿದ್ದತೆ ಪರಿಶೀಲನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 16- ನಗರದ ಹಳೆ ಜಿಲ್ಲಾ ಆಸ್ಪತ್ರೆ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಬಕ್ರೀದ್ ನಮಾಝ್ ನಿರ್ವಹಿಸಲು ನಡೆದ ಸಿದ್ಧತೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಪೀರಾ ಹುಸೇನ್ ಹೊಸಳ್ಳಿ ಪರಿಶೀಲಿಸಿದರು.
ನಮಾಝ್ ಸಂದರ್ಭದಲ್ಲಿ ಬಳಸುವ ಮೈಕ್ಸೆಟ್ ಶಬ್ದಗಳು ಒಡೆದು ಕರ್ಕಶದಿಂದ ಕೂಡಿದ್ದರಿಂದ ಈದ್ಗಾದಲ್ಲಿ ದೂರದಲ್ಲಿರುವ ಜನರಿಗೆ ಸ್ಪಷ್ಟವಾಗಿ ಏನು ಕೇಳಿಸದೆ ಸರಿಯಾಗಿ ಪಾಲನೆ ಮಾಡಲು ಸಾಧ್ಯವಾಗದೆ ಪರದಾಡಿದ್ದಾರೆ. ಈ ವರ್ಷದ ಬಕ್ರೀದ್ ಹಬ್ಬದ ನಮಾಝ್ ನಿರ್ವಹಿಸುವಾಗ ಬಳಸುವ ಮೈಕ್ ಸೆಟ್ ಒಳ್ಳೆ ಗುಣಮಟ್ಟದಿಂದ ಕೂಡಿರುವಂತೆ ಕ್ರಮವಹಿಸಬೇಕು ಎಂದು ಸಂಘಟನೆಗಳ ಮುಖಂಡ ಎಸ್.ಎ.ಗಫಾರ್ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಪೀರಾ ಹುಸೇನ್ ಹೊಸಳ್ಳಿ ಅವರಲ್ಲಿ ಕೋರಿದರು.
ನಗರದ ನಗರ ಸಭೆ ವಾಣಿಜ್ಯ ಕಟ್ಟಡ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಹಾಗೂ ಹುಲ್ಲಿ ಕೇರೆ ಬಳಿಯ ಈದ್ಗಾ ಮೈದಾನಗಳಲ್ಲಿ ನಗರ ಸಭೆ ಪೌರಾಯುಕ್ತರು.ಸಿಬ್ಬಂದಿಗಳು ಸ್ವಚ್ಛತೆ ಮಾಡಿಸಿ ನೈರ್ಮಲ್ಯ ಕಾಪಾಡಬೇಕು.
ಪೊಲೀಸ್ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ವಾಹನಗಳ ಸಂಚಾರ ವ್ಯವಸ್ಥೆ ಮಾಡಿ. ನಮಾಝ್ ನಿರ್ವಹಿಸಲು ಬರುವ ಜನರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. ಬಕ್ರೀದ್ ಹಬ್ಬದ ನಮಾಝ್ ಬಳಿಕ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಳ್ಳಲು ಬರುವ ಸರ್ವಜನಾಂಗದ ನಾಯಕರಿಗೆ ಅಧಿಕಾರಿಗಳಿಗೆ ಶಾಮಿಯಾನದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಮುದಾಯದ ಮುಖಂಡ ಮಾನ್ವಿ ಪಾಶಾ ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಕ್ರೀದ್ ಹಬ್ಬದ ಪ್ರಯುಕ್ತ ನಡೆಯುವ ಸಾಮೂಹಿಕ ನಮಾಝ್ ಪ್ರಾರ್ಥನೆ ನಡೆಸಲು ನಗರದ ಹಳೆ ಜಿಲ್ಲಾ ಆಸ್ಪತ್ರೆ ಪಕ್ಕದ ಈದ್ಗಾ ಹಾಗೂ ಹುಲ್ಲಿ ಕೇರೆ ಹತ್ತಿರದ ಈದ್ಗಾ ಮೈದಾನಗಳಲ್ಲಿ ಸಮರ್ಪಕ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಪೀರಾ ಹುಸೇನ್ ಹೊಸಳ್ಳಿ ಸೂಚಿಸಿದರು.
