WhatsApp Image 2024-06-15 at 6.10.09 PM

ಗಾಯತ್ರಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್‌ ತೃತೀಯ ವಾರ್ಷಿಕ ಸಭೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 15- ನಗರದ ಕಿನ್ನಾಳ ರಸ್ತೆಯಲ್ಲಿರುವ ಗಾಯತ್ರಿ ಕೊಪ್ಪಳ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದಲ್ಲಿ ತೃತೀಯ ವಾರ್ಷಿಕ ಸಾಮಾನ್ಯ ಸಭೆ ಜರುಗಿತು.

ಈ ಸಭೆಯಲ್ಲಿ ಸಹಕಾರಿಯ ಸಿಬ್ಬಂದಿಯವರಿಗೆ, ಅಧ್ಯಕ್ಷರಿಗೆ, ಉತ್ತಮ ಗ್ರಾಹಕರಿಗೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಎಲ್ಲಿ ಸದರಿ ವರ್ಷದಲ್ಲಿ 90 / ಅಂಕ ಪ್ರತಿಶತ ಪಡೆದ ವಿದ್ಯಾರ್ಥಿಗಳಿಗೆ ಪದವಿಯಲ್ಲಿ 85/ ಅಂಕ ಪ್ರತಿಶತ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಶ್ರೀ ಮಲ್ಲಾರ್ ಭಟ್ ಜೋಷಿ, ಅಧ್ಯಕ್ಷರಾದ ಶ್ರೀ ರೇಣುಕಾ ಪ್ರಸಾದ್ ಇಟಗಿ, ಉಪಾಧ್ಯಕ್ಷರಾದ ಶ್ರೀ ವೇಣುಗೋಪಾಲ ಆಚಾರ ಜಹಾಗೀರದಾರ್ ಕೊಪ್ಪಳ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಚನ್ನಪ್ಪ ಕಡ್ಡಿಪುಡಿಯವರು ಉಪಸ್ಥಿತರಿದ್ದರು. ನಿರ್ದೇಶಕರಾದ ಎಂ ಗೋವಿಂದರಾಜ್, ಶ್ರೀ ಶರಣಪ್ಪ ಸಿಂದೋಗಿಯವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!