ಕೊಪ್ಪಳ : ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 2- 2024-25ನೇ ಸಾಲಿನ ಕೊಪ್ಪಳ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಮೆಟ್ರಿಕ್ ಪೂರ್ವ/ನಂತರ ಬಾಲಕ/ಬಾಲಕಿಯರ ವಸತಿ ನಿಲಯಗಳಿಗೆ ಪ್ರವೇಶಕ್ಕಾಗಿ ಮ್ಯಾನುವಲ್ ಮೂಲಕ ದಾಖಲಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿಯ ಮೆಟ್ರಿಕ್ ಪೂರ್ವ ಬಾಲಕರ ವಸತಿನಿಲಯ ಕೊಪ್ಪಳ, ಕವಲೂರು, ಬೂದಗುಂಪ , ಗೊಂಡಬಾಳ, ಗಿಣಗೇರಾ, ಬಿಸರಹಳ್ಳಿ, ಚಿಲಕಮುಖಿ, ಕೊಪ್ಪಳ-1 (ಎಸ್ಸಿ), ಕೊಪ್ಪಳ-2 (ಎಸ್ಸಿ), ಕೊಪ್ಪಳ-3 (ಎಸ್ಸಿ), ಕೊಪ್ಪಳ-4 (ಎಸ್ಸಿ) ಹಾಗೂ ಮೆಟ್ರಿಕ ನಂತರದ ವೃತ್ತಿಪರ ಬಾಲಕರ ವಸತಿನಿಲಯ ಕೊಪ್ಪಳ, ಮೆಟ್ರಿಕ ಪೂರ್ವ ಬಾಲಕಿಯರ ವಸತಿ ನಿಲಯ ಕೊಪ್ಪಳ, ಕೊಪ್ಪಳ-1 (ಎಸ್ಸಿ), ಕೊಪ್ಪಳ-2 (ಎಸ್ಸಿ), ಕೊಪ್ಪಳ-3 (ಎಸ್ಸಿ) ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ ನಂತರದ ಬಾಲಕರ ವಸತಿನಿಲಯ ಕೊಪ್ಪಳ (ಎಸ್ಟಿ), ಕೂಕನಪಳ್ಳಿ (ಎಸ್ಟಿ), ಕೊಪ್ಪಳ (ಪಿ.ಯು.ಸಿ) (ಎಸ್ಟಿ), ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕೊಪ್ಪಳ(ಎಸ್ಟಿ) ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಬಹುದು.
ಮ್ಯಾನುವಲ್ ಮೂಲಕ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಿಂದಿನ ತರಗತಿಯ ಅಂಕಪಟ್ಟಿ, ಪೋಷಕರ ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ 4 ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಗ್ರೇಡ್-1 ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
