22gvt2

ಕೋಟ್ಟೂರು ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ,22- ನಗರದಲ್ಲಿ ನೂತನವಾಗಿ ನಿರ್ಮಾಣವಾದ ಕೋಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಬೇಳಗಿನ ಜಾವ 4ಗಂಟೆಗೆ ಬಸವೇಶ(ನಂದಿ) ಮೂರ್ತಿಯನ್ನು ಹೆಬ್ಬಾಳದ ನಾಗಭೂಷಣ ಶಿವಾಚಾರ್ಯರು ಪ್ರತಿಷ್ಠಾಪಿಸಿದರು.

ಹೆಬ್ಬಾಳದ ನಾಗಭೂಷಣ ಶಿವಾಚಾರ್ಯರು ಮಾತನಾಡಿ ಪೂರ್ವಕಾಲದಿಂದಲೂ ಕೊಟ್ಟೂರು ಬಸವೇಶ ಮೂರ್ತಿ(ನಂದಿ) ಇತ್ತು. ಸಮಿತಿಯವರು ಎಲ್ಲರೂ ಸೇರಿ ವಿಶಿಷ್ಠ ರೀತಿಯಲ್ಲಿ ಕಲ್ಲು ಕೆತ್ತನೆಯಿಂದ ಸುಂದರವಾದ ಭವ್ಯ ಮಂದಿರ ನಿರ್ಮಿಸಿದ್ದಾರೆ. ಬಸವೇಶ ಮೂರ್ತಿ(ನಂದಿ) ಮೂರ್ತಿಯು ಅದ್ಬೂತ ರೀತಿ ಬರುವ ಸರ್ವ ಭಕ್ತರಿಗೂ ಅನುಗ್ರಹಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ,ಕೋಟ್ಟೂರು ಬಸವೇಶ್ವರ ಸಮಿತಿಯ ಅಧ್ಯಕ್ಷ ರಾಜಶೇಖರಪ್ಪ ಗುಂಜಳ್ಳಿ, ಸಮಿತಿಯ ಹೋಸಳ್ಳಿ ಶಂಕರಗೌಡ, ವಿ.ಎಸ್ಎ.ಸ್ ಎನ ಅಧ್ಯಕ್ಷ ಅರಳಿ ಶೇಖರಪ್ಪ, ಕಲ್ಮೇಶ ವಕೀಲ, ಮಂಜುನಾಥ ವಕೀಲ, ಜಗದೀಶಸ್ವಾಮಿ ಮುದೇನೂರ, ಬಸವರಾಜ ಬೆಣಕಲ್, ಸುರೇಶ ಸಿಂಗನಾಳ, ಬಸವರಾಜ ಸಿದ್ದಾಪೂರ, ಶಿವಾನಂದ, ಅರುಣ ಅರಳಿ ವಕೀಲ, ಚಂದ್ರಶೇಖರ ಅಕ್ಕಿ ಮುಂತಾದವರು ಉಪಸ್ಥೀತರಿದ್ದರು.

Leave a Reply

Your email address will not be published. Required fields are marked *

error: Content is protected !!