20gvt2

ಕ್ಷೇತ್ರದ ಅಭಿವೃದ್ಧಿಗಾಗಿ- ಅನ್ಸಾರಿಗೆ ಎಂಎಲ್‌ಸಿ ಮಾಡಿ-ಸಚಿವರನ್ನಾಗಿಸಲು-ಮನವಿ
ಗಂಗಾವತಿ ಕ್ಷೇತ್ರ-ಅಭಿವೃದ್ದಿಯಾಗಿದ್ದು-ಅನ್ಸಾರಿಯವರ ಕಾಲದಲ್ಲಿಯೇ

ಕರುನಾಡ ಬೆಳಗು ಸುದ್ದಿ

ಗಂಗಾವತಿ,21- ಗಂಗಾವತಿ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಗಾಗಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರನ್ನು ವಿಧಾನಪರಿಷತ ಸದಸ್ಯರನ್ನು ಮಾಡಿ(ಎಂಎಲ್‌ಸಿ ಸ್ಥಾನ) ಸಚಿವರನ್ನಾಗಿಸಲು ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಕೆ ಶಿವಕುಮಾರ ಹಾಗೂ ಕಾಂಗ್ರೇಸ ಹೈಕಮಾಂಡಗೆ ಮನವಿ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಸ್.ಬಿ.ಖಾದ್ರಿ ,ಗಂಗಾವತಿಬ್ಲಾಕ ಕಾಂಗ್ರೇಸ ಜೂಬೇರ,ಯಮನಪ್ಪ ವಿಠಲಾಪೂರ,ನಗರಸಭೆ ಸದಸ್ಯ ಮನೋಹರ ಸ್ವಾಮಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ ಗಂಗಾವತಿಕ್ಷೇತ್ರದಲ್ಲಿ ಮಾಜಿ ಸಚಿವ ಇಕ್ಬಾಲ ಅನ್ಸಾರಿಯವರಿಂದಲೇ ಕಾಂಗ್ರೇಸ ಪಕ್ಷ ಇರುವುದು. ಕಾಂಗ್ರೇಸಪಕ್ಷದಿಂದ ಎಲ್ಲವನ್ನು ಪಡೆದು ಪಕ್ಷಕ್ಕೆ ಮೋಸ ಮಾಡುವರ ಬಗಗೆ ಹೈಕಮಾಂಡ ನಿರ್ಧರಿಸುತ್ತದೆ.

ಲೊಕಸಭಾ ಚುನಾವಣೆ ಸಮಯದಲ್ಲಿ ಮತ್ತೇ ಗೆಲುವಿನನಗೆ ಬಿರುತ್ತವೆ. ಎಂಎಲ್‌ಸಿ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸಾಕಷ್ಟು ಅನುಕೂಲವಾಗಲಿದೆ ಸಮಯ ಬಂದಂತೆ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುತ್ತೇವೆ. ಇಕ್ಬಾಲ ಅನ್ಸಾರಿಯವರು ಹಿಂದುಳಿದ, ದಲಿತ ಹಾಗು ಎಲ್ಲವರ್ಗದ ಬಡವರನ್ನು ಒಟ್ಟುಗೂಡಿಸಿಕೊಂಡು ಹೋಗುತ್ತಿರುವ ನಾಯಕರಾಗಿದ್ದಾರೆ.

ಗಂಗಾವತಿಯ ಮಿನಿ ವಿಧಾನಸೌಧ ಜನ ಸಾಮಾನ್ಯರಿಂದ ದೂರವಿದ್ದು ಇಲ್ಲಿನ ತಹಶೀಲ್ ಕಚೇರಿ, ಪ್ರವಾಸಿ ಮಂದಿರ ಹಾಗು ತಾಲೂಕಾ ಪಂಚಾಯಿತಿ ಕಟ್ಟಡಗಳನ್ನು ತೆರವುಗೊಳಿಸಿ ಬಹುಮಹಡಿ ಕಟ್ಟಡ ನಿರ್ಮಿಸಿ ಒಂದೇ ಸೂರಿನಡಿ ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸುವಂತೆ ಮಾಡಬೇಕೆನ್ನುವ ಗುರಿಯನ್ನು ಅನ್ಸಾರಿಯವರು ಹೊಂದಿದ್ದರುೆ ಎಂದರು.

ಗಂಗಾವತಿ ಬ್ಲಾಕ್ ಕಾಂಗ್ರೆಸ್ ಬಿ.ಜುಬೇರ್ ಮಾತನಾಡಿ ಮಾಜಿ ಸಚಿವ ಅನ್ಸಾರಿಯವರನ್ನು ಎಂಎಲ್‌ಸಿ ಮಾಡಬೇಕೆನ್ನುವುದು ಜನಸಾಮಾನ್ಯರ ಧ್ವನಿಯಾಗಿದೆ. ಅದರ ಭಾಗವಾಗಿ ನಾವು ಗೋಷ್ಟಿ ಮಾಡುತ್ತಿದ್ದೇವೆ ಈ ಬಗ್ಗೆ ಅನ್ಸಾರಿಯವರಿಗೂ ಮಾಹಿತಿ ಇಲ್ಲ. ಅನ್ಸಾರಿಯವರ ಅಭಿಮಾನಿಗಳು ರಾಜ್ಯದ ಬಹುತೇಕ ಕಡೆಗಳಲ್ಲಿದ್ದು, ಲೋಕಸಭಾ ಚುನಾವಣೆಗೆ ಸಾಕಷ್ಟು ಅನುಕೂಲವಾಗಲಿದೆ. ಅವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಿ ಮಂತ್ರಿ ಮಾಡಿದರೆ ಕ್ಷೇತ್ರ ಅಭಿವೃದ್ಧಿಯ ಜತೆಗೆ ಜಿಲ್ಲೆಯ ಅಭಿವೃದ್ಧಿಗು ಶ್ರಮಿಸಲಿದ್ದಾರೆ.

ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರು ಬಳ್ಳಾರಿ ಜನರಿಂದಲೇ ಡಸ್ಟ್ಬಿನ್‌ಗೆ ಬಿದ್ದಿದ್ದು, ಗಂಗಾವತಿಯಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ.

ಆಯ್ಕೆಯಾಗಿ ಒಂಭತ್ತು ತಿಂಗಳು ಗತಿಸಿದರು ಕೆಲಸ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಗೌಳಿ ಮಹಾದೇವಪ್ಪ ರಸ್ತೆ ಅಗಲೀಕರಣ ಹಾಗು ಕಾಮಗಾರಿ ನಿರ್ವಹಣೆಗೆ ಸಂಬಂಧಿಸಿದಂತೆ ಹೈ ಕೋರ್ಟ್ ನಿಂದ ತಡೆಯಾಜ್ಞೆ ಬಂದಿದ್ದು, ರಸ್ತೆಯ ಅಕ್ಕಪಕ್ಕದ ಬಡ ನಿವಾಸಿಗಳೇ ಕೋರ್ಟ್ ಮೊರೆ ಹೋಗಿದ್ದಾರೆ ಅಭಿವೃದ್ಧಿಗೆ ಅಡ್ಡಿಪಡಿಸುವ ಉದ್ದೇಶ ನಮ್ಮದಲ್ಲ, ರೆಡ್ಡಿಯವರು ಸುಳ್ಳು ಮಾಹಿತಿ ನೀಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮರೇಶ್ ಗೋನಾಳ್ ಮಾತನಾಡಿ, ರೆಡ್ಡಿಯವರು ಅನ್ಸಾರಿಯವರನ್ನು ಟೀಕಿಸುವ ನೈತಿಕತೆ ಹೊಂದಿಲ್ಲ, ಸ್ವಂತ ಪಕ್ಷ ಕಟ್ಟಿದ ಅವರು, ತಾವು ಮಾತ್ರ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಅಭಿವೃದ್ಧಿಯ ಹರಿಕಾರ ಅನ್ಸಾರಿಯವರನ್ನು ಟೀಕಿಸುವುದು ಸರಿಯಲ್ಲ ಎಂದರು.

ಶ್ರೀ ಕನಕದಾಸ ಕುರುಬರ ಸಂಘ ಗಂಗಾವತಿ ತಾಲೂಕಾ ಅಧ್ಯಕ್ಷ ಯಮನಪ್ಪ ವಿಠಲಾಪುರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಅನ್ಸಾರಿಯವರನ್ನು ಎಂಎಲ್‌ಸಿ ಮಾಡುವಂತೆ ಮನವಿ ಸಲ್ಲಿಸಿದ್ದು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಶಾಸಕರಾದ ರಾಘವೇಂದ್ರ ಹಿಟ್ನಾಳ್, ಬಸವರಾಜ್ ರಾಯರೆಡ್ಡಿ ಸೇರಿ ಸಿಎಂಗೆ ನಿಕಟವರ್ತಿಗಳನ್ನು ಸಂಪರ್ಕಿಸಿ ಸಹಕರಿಸುವಂತೆ ಮನವಿ ಮಾಡಿದ್ದೇವೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದರು.

ನಗರಸಭೆ ಸದಸ್ಯರುಗಳಾದ ಮನೋರಸ್ವಾಮಿಮುದೆನೂರ, ಎಫ್.ರಾಘವೇಂದ್ರ,ನಗರಸಭೆ ಮಾಜಿ ಸದಸ್ಯ ಹಂಚಿನಾಳ್ ಹುಸೇನಪ್ಪ ವಕೀಲರು ಮಾತನಾಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ನಗರ ಅಲ್ಪ ಸಂಖ್ಯಾತ ಘಟಕದ ತಾಲೂಕಾ ಅಧ್ಯಕ್ಷ ಸನ್ನಿಕ್ ಭಾಷಾ, ರಾಮು ಕಿರಕಿರಿ,ಜವಳಗೇರಾ ಹುಸನೇಪಿರಾ ಎನ್‌ಎಸ್‌ಯುವ ಐ ಮಾಜಿ ಅಧ್ಯಕ್ಷ ಅಯೂಬ್ ಖಾನ್, ಯುವ ಮುಖಂಡರಾದ ಸೈಯ್ಯದ್ ಇಲಿಯಾಸ್ ಖಾದ್ರಿ, ಆಸೀಫ್ ಆಹ್ಮದ್, ಚಂದ್ರಶೇಖರ್ ಉಪಸ್ಥೀತರಿದ್ದರು.

Leave a Reply

Your email address will not be published. Required fields are marked *

error: Content is protected !!