ಗೃಹರಕ್ಷಕ ದಳದ ಶಿಬಿರಾರ್ಥಿಗಳಿಗೆ ಮತದಾನ ಜಾಗೃತಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 13- ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಗೃಹರಕ್ಷಕ ದಳ ಹಾಗೂ ಹೊಸಪೇಟೆ ತಾಲೂಕು ಸ್ವೀಪ್ ಸಮಿತಿ ಮತ್ತು ನಗರಸಭೆಯಿಂದ ಏಪ್ರೀಲ್ 13ರಂದು ಮತದಾನ ಜಾಗೃತಿ ನಡೆಯಿತು.
ಹೊಸಪೇಟೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ ಅವರು ಚಾಲನೆ ನೀಡಿ ಮಾತನಾಡಿ, ತಪ್ಪದೇ ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಎಂದು ಭಾವಿಸಿ ತಪ್ಪದೇ ಮತದಾನ ಮಾಡಬೇಕು.
ಮತದಾನ ದಿನದಂದು ಎಂತಹದ್ದೇ ಕಾರ್ಯವಿದ್ದರೂ ಅದರ ಮಧ್ಯೆ ಬಿಡುವು ಮಾಡಿಕೊಂಡು ಮತಗಟ್ಟೆಗೆ ತೆರಳಿ ಮತದಾನ ಮಾಡುವುದನ್ನು ಯಾರು ಸಹ ಮರೆಯಬಾರದು ಎಂದು ತಿಳಿಸಿದರು. ವಿಜಯನಗರ ಜಿಲ್ಲೆಯು ಮತದಾನದ ಶೇಕಡವಾರು ಪ್ರಮಾಣದಲ್ಲಿ ಉತ್ತಮ ಸ್ಥಾನ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅರ್ಹವಿರುವ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಲೀಂ ಪಾಷಾ ಅವರು ಮಾತನಾಡಿ, ನಾನು ಮತದಾನ ದಿನದಂದು ಕಡ್ಡಾಯ ಮತದಾನ ಮಾಡುತ್ತೇನೆ ಎನ್ನುವ ಸಂಕಲ್ಪ ಹೊಂದಿ ಪ್ರತಿಯೊಬ್ಬರು ಮತದಾನ ಮಾಡುವುದನ್ನು ಮರೆಯಬಾರದು ಎಂದು ತಿಳಿಸಿದರು.
ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರು ಹಾಗೂ ಮಾಜಿ ಸೈನಿಕರಾದ ಬಸವರಾಜ್ ಅಗಸರ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಜಿಲ್ಲಾ ಬೋಧಕರಾದ ಪ್ರಶಾಂತ್, ತಾಲೂಕು ಪಂಚಾಯಿತಿ ಹೊಸಪೇಟೆಯ ಐಇಸಿ ಸಂಯೋಜಕರಾದ ಹೆಚ್.ನಾಗರಾಜ್, ಘಟಕ ಅಧಿಕಾರಿ ಎಸ್ ಎಂ. ಗಿರೀಶ್, ಪ್ಲಾಟೂನ್ ಕಮಾಂಡರ್ ಎಲ್ .ವಾಲ್ಯಾ ನಾಯ್ಕ ಹಾಗೂ ಗೃಹ ರಕ್ಷಕದಳದ ಶಿಭಿರಾರ್ಥಿಗಳು ಉಪಸ್ಥಿತರಿದ್ದರು.
