ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾನಸಿಕ ಅರಿವು ನೆರವು ಸಪ್ತಾಹ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆಯ ಅಂಗವಾಗಿ ಇಂಡಿಯನ್ ರಿಜರ್ವ್ ಬೆಟಾಲಿಯನ್ ಮುನಿರಾಬಾದ್ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮೇ 24 ರಂದು ಮಾನಸಿಕ ಅರಿವು ನೆರವು ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಇಂಡಿಯನ್ ರಿಸರ್ವ್ ಬೆಟಾಲಿಯನ್, ಮುನಿರಾಬಾದ್ನ ಕಮಾಂಡೆAಟ್ ಡಾ. ರಾಮಕೃಷ್ಣ ಮುದ್ದೆಪಾಲ್ ಅವರು, ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಸಂಪೂರ್ಣರಾಗಿರುವುದೇ ಆರೋಗ್ಯ. ಮಾನವನಿಗೆ ದೈಹಿಕ ಆರೋಗ್ಯವು ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯವು ಅಷ್ಟೇ ಮುಖ್ಯ. ದೈಹಿಕ ಮತ್ತು ಮಾನಸಿಕ ಆರೋಗ್ಯವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿಸಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳು ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ. ಪ್ರಕಾಶ ಹೆಚ್. ಅವರು ಮಾತನಾಡಿ, ಸ್ಕಿಜೋಫ್ರೇನಿಯಾ ಚಿಕಿತ್ಸೆ ನೀಡಿ ಗುಣಪಡಿಸಬಹುದಾದ ಒಂದು ಮಾನಸಿಕ ರೋಗಕ್ರಮವಾಗಿದ್ದು, ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಸಾಮಾನ್ಯರಂತೆ ಜೀವಿಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮನೋವೈದ್ಯರಾದ ಡಾ. ಲಕ್ಷಿö್ಮÃದೇವಿ ಎ. ಪಾಟೀಲ ಅವರು, ಸ್ಕಿಜೋಫ್ರೇನಿಯಾ ಮಾನಸಿಕ ರೋಗದ ಲಕ್ಷಣಗಳು ಮತ್ತು ಕಾರಣಗಳು ಹಾಗೂ ಚಿಕಿತ್ಸಾ ವಿಧಾನದ ಬಗ್ಗೆ ತಿಳಿಸಿಕೊಟ್ಟರು.
ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಿವಾನಂದ ವಿ ಪೂಜಾರ ಅವರು ಮಾತನಾಡಿ, ದೈನಂದಿನ ಜೀವನದ ಒತ್ತಡ ನಿರ್ವಹಣೆ ಕುರಿತು ತಿಳಿಸಿ ಕೊಟ್ಟರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನಃಶಾಸ್ತçಜ್ಞರಾದ ಪುಷ್ಪಾ ಥೆರೇಸಾ ಅವರು ಮಾನಸಿಕ ಆರೋಗ್ಯ ಎಂದರೇನು? ಮಾನಸಿಕ ಖಾಯಿಲೆಗಳ ಬಗ್ಗೆ ಸಮಾಜದಲ್ಲಿರುವ ಮಿಥ್ಯಗಳ ಕುರಿತು ತಿಳಿಸಿದರು.
ತಾಲೂಕಾ ಆರೋಗ್ಯ ಶಿಕ್ಷಣ ಅಧಿಕಾರಿ ಗಂಗಮ್ಮ ಕಳಸಾಪೂರ ಅವರು ಮಾನಸಿಕ ಆರೋಗ್ಯದಲ್ಲಿ ಕುಟುಂಬ ಹಾಗೂ ಸಮಾಜದ ಪಾತ್ರದ ಬಗ್ಗೆ ತಿಳಿಸಿದರು.
ನಂತರ ಮಾನಸಿಕ ಆರೋಗ್ಯ ಕುರಿತಾದ ಕರಪತ್ರಗಳನ್ನು ವಿತರಿಸುವ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಡೆಪ್ಯೂಟಿ ಕಮಾಡೆಂಟ್ ಜೆ.ರೂಪೇಶ್, ಸಹಾಯಕ ಕಮಾಡೆಂಟ್ ಮಂಜಪ್ಪ ಕೋಟೆಹಾಳ ಹಾಗೂ ಐಆರ್ಬಿ ಮತ್ತು ಕೆಎಸ್ಆರ್ಪಿ ತರಬೇತಿ ಶಾಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿವರ್ಗದವರು ಹಾಗೂ ಆಶಾಕಾರ್ಯಕರ್ತೆಯರು ಭಾಗವಹಿಸಿದ್ದರು.
