ಜಿಲ್ಲಾ ಮಟ್ಟದ ಮುಂಗಾರು ಹಂಗಾಮಿನ, ದ್ವೈವಾರ್ಷಿಕ ಕಾರ್ಯಗಾರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 7- ಜಿಲ್ಲಾ ಕೃಷಿ ಇಲಾಖೆ ವತಿಯಿಂದ, ಜಂಟಿ ಕೃಷಿ ನಿರ್ದೇಶಕದ ಕಚೇರಿ ಸಭಾಂಗಣದಲ್ಲಿ, 2024- 25ನೇ ಸಾಲಿನ ಜಿಲ್ಲಾಮಟ್ಟದ ಮುಂಗಾರು ಹಾಗೂ ದ್ವೈ ಮಾಸಿಕ ಕಾರ್ಯಗಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಂಟಿ ನಿರ್ದೇಶಕರು, ಡಾಕ್ಟರ್ ತಿರುಮಲೇಶ್ ಅವರು, ರೈತರು ಹಾಕುವ ಬೆಳೆಗಳಿಗೆ ಬೆಳೆಯುವ, ಬೇಸಾಯದ ಸಮಸ್ಯೆಗಳು, ಬತ್ತದ ಬೆಳೆಯ ಸಮಗ್ರ ಕೀಟ ನಿರ್ವಹಣೆ, ಬಿಟಿ ಹತ್ತಿಯಲ್ಲಿ ಸಮಗ್ರ ಕೀಟೆ ನಿರ್ವಹಣೆ, ಮೆಕ್ಕೆಜೋಳಕ್ಕೆ ಲಗ್ಗೆ ಇಟ್ಟ ಹೊಸ ಕೀಟ ಸೈನಿಕ ಹುಳು, ಕಬ್ಬಿನಲ್ಲಿ ಗೊಣ್ಣೆ ಹುಳ, ಹಾಗೂ ಬಿಳಿ ಉಣ್ಣೆ ನಿರ್ವಹಣಾ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕರಪತ್ರಗಳನ್ನು ಬಿಡುಗಡೆ ಮಾಡಿ ಅಧಿಕಾರಿಗಳು ನಿರಂತರ ರೈತರ ಸಂಪರ್ಕದಲ್ಲಿದ್ದು ಅವರಿಗೆ ಬೇಕಾದ ಸಲಹಾ ಸೂಚನೆಗಳನ್ನು ನೀಡಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಡಿಡಿಎ ಕೆಂಗೆಗೌಡ,, ಇತರ ಅಧಿಕಾರಿಗಳು ದಯಾನಂದ, ಮಂಜುನಾಥ್ ರೆಡ್ಡಿ, ನಿಸಾರ್ ಅಹಮದ್, ಮತ್ತು ಸಿಬ್ಬಂದಿ ರೈತರು ಉಪಸ್ಥಿತರಿದ್ದರು.
