ಲಾರಿ ಮಾಲಿಕನ ಸಂಪತ್ತು ಲಾರಿ ಚಾಲಕ : ಜಿಲ್ಲಾಧ್ಯಕ್ಷರಾದ ಸದಾಶಿವ
ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ, 14- ಪಟ್ಟಣದ ಎ.ಕೆ.ಕಾಲೋನಿಯ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಆವರಣದಲ್ಲಿ ಜೈಭೀಮ್ ಲಾರಿ ಚಾಲಕರ ಸಂಘವನ್ನು ನೂತನವಾಗಿ ಉದ್ಘಾಟನೆ ಮಾಡಲಾಯಿತು.
ಜೈ ಭೀಮ್ ಲಾರಿ ಚಾಲಕರ ಸಂಘವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಲಾರಿ ಮಾಲಕರ ಸಂಘದ ಜಿಲ್ಲಾಧ್ಯಕ್ಷರಾದ ಸದಾಶಿವ ನೂತನ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಶುಭಕೋರಿ ಇಂದು ಲಾರಿ ಮಾಲಿಕನ ಸಂಪತ್ತು ಲಾರಿ ಚಾಲಕರಾಗಿದ್ದಾರೆ, ಹಾಗಾಗಿ ಈ ಸಂಘವನ್ನು ಆಸ್ತಿತ್ವಕ್ಕೆ ತಂದ ಎಲ್ಲಾ ಲಾರಿ ಚಾಲಕರಿಗೆ ದೇವರು ಆರೋಗ್ಯ ಸಂಪತ್ತು ದಯಪಾಲಿಸಿ ಅವರನ್ನು ಮತ್ತು ಅವರ ಕುಟುಂಬವನ್ನು ಕಾಪಾಡಲಿ ಎಂದು ಆಶಿಸುತ್ತಾ, ಇಂದು ಲಾರಿ ಮಾಲೀಕರು ಶ್ರೀಮಂತರಾಗಿದ್ದಾರೆ ಎಂದರೆ ಅದಕ್ಕೆ ಲಾರಿ ಚಾಲಕರೇ ಕಾರಣ ಚಾಲಕರು ಚಾಲನೆ ಮಾಡುವಾಗ ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸಿಕೊಂಡು, ಹೆಚ್ಚರಿಕೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಚಾಲನೆ ಮಾಡಬೇಕು. ಚಾಲಕರು ವೃತ್ತಿಯೊಳಗೆ ಲಾರಿ ಚಾಲಕರಾಗಿ ಉಳಿಯದೆ ಲಾರಿ ಮಾಲಿಕರಾಗಬೇಕೆಂಬುದು ಚಲವಿಟ್ಟುಕೊಳ್ಳಬೇಕು.
ಇನ್ನೊರ್ವ ಅತಿಥಿ ಸಂಡೂರು ಲಾರಿ ಮಾಲಿಕ ಸಂಘದ ಅಧ್ಯಕ್ಷ ಬಾಬು ನಾಯಕ್ ಮಾತನಾಡಿ ಸಂಘ ಎಂದರೆ ಕೇವಲ ಹೆಸರಿಗೆ ಮಾತ್ರ ಕಟ್ಟುವುದಲ್ಲ ಸಂಘ ಜೀವಿಯಾಗಿ ಮಾನವೀಯತೆ ಇಟ್ಟುಕೊಂಡು ನಿಧಾನವಾಗು ಜಗರುಕತೆಯಿಂದ ವಾಹನ ಚಾಲನೆ ಮಾಡಬೇಕು. ಅಪಘಾತ ಸಂಭವಿಸಿ ಕಣ್ಣೆದುರಿಗೆ ಬಿದ್ದು ನರಳಾಡುತ್ತಿದ್ದವರನ್ನು ಕಂಡರೆ ಅವರಿಗೆ ಪ್ರತಿಕ್ರಿಯಿಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಬೇಕು.
ಟ್ರಿಪ್ ಹೊಡೆಯುವಾಗ ಅತೀ ವೇಗವಾಗಿ ಚಾಲನೆ ಮಾಡುತ್ತೀರಿ ಮತ್ತು ಆನ್ ಲೋಡ್ ಮಾಡಿ ಬರುವಾಗಲೂ ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಗಾಡಿ ಬಿಟ್ಟು ಮನೆಗೆ ಹೋಗುತ್ತೀರಿ ಮನೆಗೆ ಬರುವಾಗ ಅತಿ ವೇಗದಿಂದ ಚಾಲನೆ ಮಾಡಿಕೊಂಡು ಬರುವ ಅಗತ್ಯವಿರುವುದಿಲ್ಲ ಇಂತಹ ಸಂಧರ್ಭದಲ್ಲಿ ಅಪಘಾತಗಳು ಸಂಭಾವಿಸುವುದು ಹೆಚ್ಚಿರುತ್ತದೆ ಹಾಗಾಗಿ ನಿಧಾನವಾಗಿ ಚಾಲನೆ ಮಾಡಿ ಸುರಕ್ಷಿತವಾಗಿ ಮನೆಗೆ ಸೇರಿ ನಿಮಗಾಗಿ ನಿಮ್ಮ ಕುಟುಂಬದ ಸದಸ್ಯರು ಕಾಯುತ್ತಿರುತ್ತಾರೆ ಎಂದು ಕಿವಿ ಮಾತು ಹೇಳಿದರು.
ಜೈ ಭೀಮ್ ಲಾರಿ ಚಾಲಕರ ಸಂಘದ ಜಿಲ್ಲಾಧ್ಯಕ್ಷ ರಾಘು, ನಾನಿಕೇರಿ ಲಾರಿಮಾಲೀಕರ ಸಂಘದ ಅಧ್ಯಕ್ಷರ ಹೊನ್ನೂರ್ ವಲಿ, ಮೂರ್ತೆಪ್ಪ, ತಾಲೂಕು ಅಧ್ಯಕ್ಷ ಎಂ. ಮಂಜುನಾಥ, ಹಿರಿಯ ಮುಖಂಡರಾದ ರೆಡ್ಡಿ ಹನುಮಂತಪ್ಪ ಪಟ್ಟಣ ಪೊಲೀಸ್ ಠಾಣೆಯ ಎ ಎಸ್ ಐ ವಿರೂಪಾಕ್ಷಪ್ಪ, ಪತ್ರಕರ್ತರಾದ ಎಲ್. ಮಂಜುನಾಥ, ಕಲ್ಲಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ವಸಂತ, ಮಹಮ್ಮದ್, ಎಲ್. ಸುರೇಶ, ಉದಯ್ ಕುಮಾರ್, ವಿರೂಪಾಕ್ಷ, ಸದ್ದಮ್, ಬಸವರಾಜ, ಸ್ವಾಮಿ, ಮೈಲಾರಿ, ಮಾಂತೇಶ, ಮರಿಸ್ವಾಮಿ, ಮೈಲಾರಿ ಇತರರಿದ್ದರು.

