ನ್ಯಾಯಬೆಲೆ ಅಂಗಡಿಯ ಸಮಸ್ಯೆಗಳನ್ನು ಉದ್ದೇಶಿಸಿ ಇದೆ ತಿಂಗಳ 16 ಕ್ಕೆ
ದೆಹಲಿಯಲ್ಲಿ ರಾಷ್ಟ್ರಮಟ್ಟದ ಪ್ರತಿಭಟನೆ: ಮೀನಳ್ಳಿ ತಾಯಣ್ಣ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ:ಜ(02)ನಗರದಲ್ಲಿ ಜಿಲ್ಲಾ ಮಟ್ಟದ ನ್ಯಾಯಬೆಲೆ ಅಂಗಡಿಯ ಮಾಲೀಕರಗಳು ಸಂಘದ ವತಿಯಿಂದ ಜಿಲ್ಲಾ ಕಚೇರಿ ಆವರಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು.
ಇದೇ ವೇಳೆಯಲ್ಲಿ ನ್ಯಾಯಬೆಲೆ ಅಂಗಡಿಯ ಮಾಲೀಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಮೀನಳ್ಳಿ ತಾಯಣ್ಣ ರವರು ಮಾತನಾಡಿ ನ್ಯಾಯಬೆಲೆ ಅಂಗಡಿಯ ಸಮಸ್ಯೆಗಳನ್ನು ಉದ್ದೇಶಿಸಿ ಇದೆ ತಿಂಗಳ 16 ರಂದು ದೆಹಲಿಯಲ್ಲಿ ರಾಷ್ಟ್ರಮಟ್ಟದ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಭಾರತ ದೇಶದಲ್ಲಿರುವ ಬೇರೆ ಬೇರೆ ರಾಜ್ಯಗಳಿಂದ ಸುಮಾರು ಎರಡು-ಮೂರು ಲಕ್ಷ ಜನ ಅಂಗಡಿ ಮಾಲೀಕರು ಸೇರುತ್ತಾರೆ ಎಂದು ಹೇಳಿದರು.ತರುವಾಯ ಬೆಂಗಳೂರಿನಲ್ಲಿ ಇದೇ 16ರ ರಂದು ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಾಗೂ ರಾಜ್ಯದ ಸಚಿವರು ಹಾಗೂ ವಿವಿಧ ಪದಾಧಿಕಾರಿಗಳು ಸೇರಿ ನಂತರ ಕರ್ನಾಟಕ ರಾಜ್ಯದ ನ್ಯಾಯಬೆಲೆ ಅಂಗಡಿಯ ಮಾಲೀಕರು ಸಂಘದ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ನ್ಯಾಯಬೆಲೆ ಅಂಗಡಿಯ ಮಾಲೀಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಹುಸೇನಪ್ಪ ರವರು ಮಾತನಾಡಿ, ನಾವು ನಿರಂತರವಾಗಿ ಪ್ರತಿಭಟನೆಗಳು, ಕ್ಯಾಲಿಗಳು ಮತ್ತು ಫೇರಾವುಗಳನ್ನು ನಡೆಸುತ್ತಿದ್ದೇವೆ. ಆದರೆ ಯಾವ ಸರ್ಕಾರವೂ ನಮ್ಮ ಸಮಸ್ಯೆಗಳತ್ತ ಗಮನ ಹರಿಸಿಲ್ಲ.ಗೌರವಧನದ ಜೊತೆಗೆ ಇತರ ಆದಾಯದ ಮೂಲಗಳು ಮಾರಾಟಗಾರರಿಗೆ ಲಭ್ಯವಾಗುವಂತೆ ಮಾಡಬೇಕು. ಆಹಾರ ಧಾನ್ಯಗಳ ಕಮಿಷನ್ ಹೆಚ್ಚಿಸಿ ಹಾಗೂ ಮುಖ್ಯವಾಗಿ ವೃದ್ಧ ಫಲಾನುಭವಿಗಳಿಗೆ ಕೈಯಿಂದ ಪಡಿತರ ನೀಡುವ ವ್ಯವಸ್ಥೆ ಆಗಬೇಕು.
ಎನ್.ಎಫ್.ಎಸ್.ಎ ಕಮಿಷನ್ ಮಾಸಿಕ ಮುಂಗಡ ಪಾವತಿಯನ್ನು ಖಚಿತಪಡಿಸಿಕೊಳ್ಳಬೇಕು. ತದನಂತರ ಆಹಾರ ಧಾನ್ಯಗಳ ಹೊರತಾಗಿ ಬೆಳೆಕಾಳುಗಳು ಎಣ್ಣೆ ಮತ್ತು ಸಕ್ಕರೆಯ ಸಬ್ಸಿಡಿ ದರಗಳು ಕೇಂದ್ರ ಆಹಾರ ಸಚಿವರ ಶಿಫಾರಸಿನಂತೆ ರಿಜಿಸ್ಟರ್ಗಳ ನಿರ್ವಹಣೆ ನಿಲ್ಲಿಸಬೇಕು. ಮತ್ತು
ಕೊರೋನಾದಲ್ಲಿ ಮೃತಪಟ್ಟ ವಿತರಕರ ಅವಲಂಬಿತರಿಗೆ ರಾಜಸ್ಥಾನ ಮಾದರಿಯಲ್ಲಿ ಪರಿಹಾರ ಹಾಗೂ ಅನುಕಂಪದ ಸಮಸ್ಯೆಯನ್ನು ಜಾರಿಯಲ್ಲಿಟ್ಟುಕೊಂಡು ಪರವಾನಿಗೆ ಒದಗಿಸಿ ಆದೇಶ ನೀಡಬೇಕು ಎಂದು ನ್ಯಾಯಬೆಲೆ ಅಂಗಡಿಯ ಮಾಲೀಕರ ಸಮಸ್ಯೆ ಮತ್ತು ಉದ್ದೇಶಗಳ ಕುರಿತು ಸ್ವ ವಿವರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೇಮಣ್ಣ, ಸಿದ್ದಪ್ಪ ಸಿರುಗುಪ್ಪ, ದಾನರೆಡ್ಡಿ,ವರಲಕ್ಷ್ಮಿ, ವೆಂಕಟೇಶ, ಪಾಲಾಕ್ಷಿ ರೆಡ್ಡಿ, ಓಬಳೇಶ, ಶಿವಪ್ಪ, ಗಾದಿಲಿಂಗಪ್ಪ, ಸಂಘದ ಪದಾಧಿಕಾರಿಗಳು ಸದಸ್ಯರು ಇತರರು ಉಪಸ್ಥಿತರಿದ್ದರು.
