ಡಾ.ಬಸವರಾಜ್ ಕ್ಯಾವಟರ್ ಗೆಲುವಿಗೆ, ಜೆಡಿಎಸ್ ಪಕ್ಷದ ಮುಖಂಡರ ಸಂಕಲ್ಪ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 10 ರಾಜ್ಯದ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆ ಗುಂಗಿನಲ್ಲಿಯಿದ್ದಾರೆ ಆದರೆ ದೇಶದಲ್ಲಿ ನರೇಂದ್ರ ಮೋದಿಯವರ ಅಲೆ ಪ್ರಾರಂಭವಾಗಿದೆ ಮತ್ತೋಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಇದಕ್ಕೆ ಎಲ್ಲರೂ ಕೈಜೋಡಿಸಿ ಎಂದು ಜೆಡಿಎಸ್ ಪಕ್ಷದ ಜಿಲ್ಲಾ ವಕ್ತಾರ್ ಮಲ್ಲನಗೌಡ ಕೋನನಗೌಡ್ರ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನೆಡಿಸಿ ಪತ್ರಕರ್ತರೂಂದಿಗೆ ಮಾತನಾಡಿದ ಅವರು ನರೇಂದ್ರ ಮೋದಿಯವರು ಪ್ರಧಾನಿಯಾಗಿ 10 ವರ್ಷದ ಅವಧಿಯಲ್ಲಿ ಜನಪರ ಯೋಜನೆಗಳನ್ನು ಜಾರಿಗೊಳಿಸಿ ರೈತರ ಬಡವರ ಬಗ್ಗೆ ಕಾಳಜಿ ವಹಿಸಿ ಪ್ರಮಾಣಿಕ ದಕ್ಷ ಆಡಳಿತ ನೀಡಿ ಜನ ಮೆಚ್ಚಿದ ನಾಯಕರಾಗಿದ್ದಾರೆ ಈ ಸಲ ಬಿಜೆಪಿಯ ಎನ್ಡಿಎ ಮೈತ್ರಿಕೂಟದಲ್ಲಿ ಜೆಡಿಎಸ್ ವಿಲೀನವಾಗಿರುವ ಹಿನ್ನಲೆಯಲ್ಲಿಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಿಜೆಪಿ ಜೆಡಿಎಸ್ ಜಂಟಿಯಾಗಿ ಎದುರಿಸಲು ಎರಡು ಪಕ್ಷಗಳು ಸಿದ್ದವಾಗಿರುವ ಹಿನ್ನಲೆಯಲ್ಲಿ ಕೊಪ್ಪಳ ಲೋಕ ಸಭಾ ಬಿಜೆಪಿ ಜೆಡಿಎಸ್ ಸಮನ್ವಯ ಅಭ್ಯರ್ಥಿ ಡಾ,ಬಸವರಾಜ ಕ್ಯಾವಟರ ರವರಿಗೆ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದಿಂದ ಹೆಚ್ಚಿನ ಬಹುಮತ ನೀಡಲು ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿ ಗೆಲ್ಲಿಸಲು ಮುಂದಾಗುತ್ತೇವೆ ಎಂದರು.
ನಂತರ ಜೆಡಿಎಸ್ ತಾಲೂಕ ಅಧ್ಯಕ್ಷ ಬಸವರಾಜ ಗುಳಗುಳಿ ಮಾತನಾಡಿ ಈ ಬಾರಿಯ ಲೋಕಸಭೆ ಚುನಾವಣೆಯು ಸಾಕಷ್ಟು ಕುತೂಹಲ ಮೂಡಿಸಿದ್ದು, ಶತಾಯಗತಾಯ ಬಿಜೆಪಿಯನ್ನು ಸೊಲಿಸಬೇಕು ಎಂದು ಪ್ರತಿಪಕ್ಷಗಳು ಒಂದಾಗಿವೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ vs ಬಿಜೆಪಿ, ಜೆಡಿಎಸ್ ಆಗಿದೆ ಬಿಜೆಪಿಯ ಎನ್ಡಿಎ ಮೈತ್ರಿಕೂಟದಲ್ಲಿ ಜೆಡಿಎಸ್ ಸೇರಿದ್ದು, ಜಂಟಿಯಾಗಿ ಲೋಕಸಭೆ ಚುನಾವಣೆಯನ್ನು ಎದುರಿಸಬೇಕು.
ಈ ಬಾರಿ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ನೀಡುವದರ ಮೂಲಕ ಬಿಜೆಪಿ ಪಕ್ಷವನ್ನು ಗೆಲ್ಲಿಸಲು ನಾವು ನೀವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ, ಮುಖಂಡರಾದ ಶರಣಪ್ಪ ರಾಂಪೂರು, ಯಮನೂರಪ್ಪ ಬೇವೂರು, ಮಹೇಶ ಮಾಟರಂಗಿ, ಶಿವ ಶಂಕರ ಲಗಳೂರು, ಮೌನೇಶ, ಮಾಟ್ರಂಗಿ, ನಿಂಗಪ್ಪ ಕನಕಗಿರಿ, ವಿಜಯಕುಮಾರ್ ಸೇರಿದಂತೆ ಮತ್ತು ಇತರರು ಸುದ್ದಿಗೊಷ್ಠಿಯಲ್ಲಿ ಭಾಗವಹಿಸಿದ್ದರು.
