WhatsApp Image 2024-04-11 at 2.51.33 PM

ದಮ್ಮೂರ ಶ್ರೀ ಭೀಮಾಂಬಿಕಾ ದೇವಿ ದೇವಸ್ಥಾನದಲ್ಲಿ ಶಿವಾನುಭವ ಗೋಷ್ಠಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 11- ಮಠ ಮಾನ್ಯಗಳಲ್ಲಿ ನಡೆಯುವ ಪುರಾಣ ಪ್ರವಚನ ಶಿವಾನುಭವ ಗೋಷ್ಠಿಯಲ್ಲಿ ಶರಣರ ಪ್ರವಚನ ಕೇಳುವದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು ಉತ್ತಮರ ಸಂಗದಿಂದ ಧರ್ಮದ ಹಾದಿ ಸುಗಮ ಎಂದು ಎಚ್ಚರೇಶ್ವರ ಸ್ವಾಮಿಗಳು ಹೇಳಿದರು.

ತಾಲೂಕಿನ ದಮ್ಮೂರ ಗ್ರಾಮದಲ್ಲಿ ಮಹಾಶಿವಶರಣಿ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಚತುದರ್ಶಿ ಅಂಗವಾಗಿ 350ನೇಯ ಶಿವಾನುಭವ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಶರಣರ ಸಂತರ ಪುರಾಣ ಪ್ರವಚನ ಪ್ರತಿಯೊಬ್ಬರು ಕೇಳಬೇಕು ಉತ್ತಮರ ಸಂಗದಿಂದ ಧರ್ಮದ ಹಾದಿ ಸುಗಮ ಎಂದು ಅಳವಂಡಿಯ ಪುರಾಣ ಪ್ರವಚನಕಾರ ಎಚ್ಚರೇಶ್ವರ ಸ್ವಾಮಿ ಅವರು ಸತ್ಯಂವಧಃ ಧರ್ಮಂ ಚರ ಚಿಂತನ ವಿಷಯ ಕುರಿತು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ 32 ವರ್ಷದಿಂದ ದಮ್ಮೂರ ಗ್ರಾಮದ ಭಕ್ತರು ಹಾಗು ಶಿವಾನುಭವ ಸೇವಾ ಸಮಿತಿಯವರು ಸೇರಿಕೊಂಡು 350 ನೇಯ ಶಿವಾನುಭವ ನೆಡೆಸಿಕೊಂಡು ಬಂದಿರುವುದು ಶ್ಯ್ಲಾಘನೀಯವಾದದು ಎಂದು ಕರಮುಡಿಯ ಡಾ.ಗೌಡಪ್ಪ ಬಲಕುಂದಿ ಅವರು ಮಾತನಾಡಿದರು.

ಸಮುದ್ರದಲ್ಲಿರುವ ಕಪ್ಪೆ ಚಿಪ್ಪಿನ ಗುಣಧರ್ಮ, ಭೂಮಿ ತಾಯಿಯ ಗುಣಧರ್ಮ ಉತ್ತಮ ಗುಣಧರ್ಮಗಳಾಗಿವೆ ಆದರೆ ಮಾನವನ ಗುಣಧರ್ಮ ಕೆಟ್ಟ ಗುಣಧರ್ಮಗಳಾಗಿವೆ ,ಉತ್ತಮ ಗುಣಧರ್ಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದರೆ ಶಿವಾನುಭವ ಆಲಿಸಬೇಕು ಆಗ ಪರಿವರ್ತನೆ ಆಗಲು ಸಾದ್ಯ ಎಂದು ಶ್ರೀ ಭೀಮಾಂಬಿಕಾ ಶಿವಾನುಭವ ಸೇವಾ ಸಮಿತಿಯ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಂತರ ಪ್ರಾಸ್ತಾವಿಕವಾಗಿ ರುದ್ರೇಶ ಹರಿಜನ ,ಸುನೀಲ್ ದೇಸಾಯಿ ಮಾತನಾಡಿದರು.

ಶ್ರೀ ಮಠದ ಒಡಯರಾದ ಹನುಮಂತಪ್ಪಜ್ಜ ಧರ್ಮರ, ಶರಣಯ್ಯ ಹಿರೇಮಠ ಸಾನಿದ್ಯವಹಿಸಿದ್ದರು. ಪ್ರಾರಂಭದಲ್ಲಿ ನವಜೀವನ ಸಮಿತಿ ಸದಸ್ಯರು ಶ್ರೀ ಮಂಜುನಾಥ ಸ್ವಾಮಿಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ , ಭಕ್ತಿಯಿಂದ ಭಜನೆಮಾಡಿ ಪ್ರಾರ್ಥನೆ ಸಲ್ಲಿಸಿದರು.

ದೇವಪ್ಪ ಗುಡಮಿ, ಸಿದ್ದಪ್ಪ ಅಟಮಾಳಗಿ, ಈರಪ್ಪ ರಾವಣಕಿ, ಶರಣೆಗೌಡ ದ್ಯಾಮನಗೌಡ್ರ, ಬಸವರಾಜ ಹಳ್ಳಿಕೇರಿ, ಸಂತೋಷ ಹಿರೇಮಠ ಹಾಗು ಸಂಗೀತ ಬಳಗದ ನೀಲಕಂಠಪ್ಪ ರೋಡ್ಡರ್, ಕಳಕಪ್ಪ ಹಡಪದ , ಯಮನೂರಪ್ಪ ಹಳ್ಳಿಕೇರಿ,ಹನುಮೇಶ ಹಡಪದ ಸೇರಿದಂತೆ ಇತರರು ಭಾಗವಹಿಸಿದ್ದರು.

ನಂತರ ಭಕ್ತರಿಂದ ನಂತರ ಅನ್ನ ಸಂತರ್ಪಣೆ ಜರುಗಿತು.

Leave a Reply

Your email address will not be published. Required fields are marked *

error: Content is protected !!