ತಾವರಗೇರಾ ಹೊಬಳಿಯಲ್ಲಿ ಉತ್ತಮ ಮಳೆ, ಪರದಾಡಿದ ಸಾರ್ವಜನಿಕರು
ಕರುನಾಡ ಬೆಳಗು ಸುದ್ದಿ
ತಾವರಗೇರಾ, 13- ಹಲವು ದಿನಗಳ ಹಿಂದೆ ಅತಿಯಾದ ಬಿಸಿಲಿನಿಂದ ನಲುಗಿ ಹೋದ ಜನತೆಗೆ ಕಳೆದ ಎರಡು ದಿನಗಳಿಂದ ಬಿದ್ದ ಧಾರಾಕಾರ ಮಳೆಯಿಂದ ಸಂತಸಗೊAಡಿದ್ದರೆ.
ಹೋಬಳಿ ಕೇಂದ್ರದಲ್ಲಿ ಮಂಗಳವಾರ ಹಾಗು ಬುಧ ವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು sಸಾಯಂಕಾಲ 4 ಗಂಟೆಯಿAದ ಮಧ್ಯರಾತ್ರಿವರೆಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಮಂಗಳವಾರ 22 ಎಮ್ ಎಮ್ ಹಾಗು ಬುಧುವಾರ 34 ಎಮ್ ಎಮ್ ಮಳೆಯಾಗಿದ್ದು ಮಳೆಮಾಪನ ಕೇಂದ್ರದ ಸಿಬ್ಬಂದಿ ಕನಕಪ್ಪ ತಿಳಿಸಿದ್ದಾರೆ.
ಮಳೆಯ ನೀರು ವೇಗವಾಗಿ ರಸ್ತೆಯ ಮೇಲೆ ಹರಿದ ಕಾರಣ ಸಾರ್ವಜನಿಕರ ಜೀವನ ಅಸ್ಥವ್ಯಸ್ಥಗೊಂಡು ಸಂಚಾರಕ್ಕೆ ಅಡೆ ತಡೆ ಉಂಟಾಯಿತು, ಪಾದಚಾರಿಗಳು ಹಾಗು ವಾಹನ ಚಾಲಕರು ರಸ್ತೆಯಲ್ಲಿ ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು, ಇದೆಲ್ಲದಕ್ಕು ಮುಖ್ಯ ಕಾರಣ ಪಟ್ಟಣದಲ್ಲಿ ನಿರ್ಮಾಣ ಗೊಂಡ ಅವೈಜ್ಞಾನಿಕ ಚರಂಡಿ ವ್ಯವಸ್ಥೆ, ಚೆರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯ ಮೇಲೆ ಹರುಯುವದರಿಂದ ಈ ಸ್ಥಿತಿ ಬಂದಿದೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ, ಚರಂಡಿ ವೆವಸ್ಥೆಯನ್ನು ಸಾರ್ವಜನಿಕರು ಅಗ್ರಹಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
