WhatsApp Image 2024-04-21 at 4.47.09 PM

ತಾಲೂಕು ಪಂಚಾಯಿತಿ ಸಿಬ್ಬಂದಿಯಿಂದ ಭಗವಾನ್ ಮಹಾವೀರ್ ಜಯಂತಿ ಆಚರಣೆ

ಕರುನಾಡ ಬೆಳಗು ಸುದ್ದಿ

ಹೊಸಪೇಟೆ, 21- ನಗರದ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಇಂದು ಅಧಿಕಾರಿಗಳು ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಭಗವಾನ್ ಮಹಾವೀರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಭಗವಾನ್ ಮಹಾವೀರ್ ಭಾವಚಿತ್ರಕ್ಕೆ ಪುಷ್ಪಮಾಲೆಯನ್ನು ಹಾಕಿ ನಮನ ಸಲ್ಲಿಸಲಾಯಿತು. ಈ ಸಂದರ್ಭವಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಆರ್ ಹರೀಶ್ ಮಾತನಾಡುತ್ತಾ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಮಹಾವೀರರು ಒಂದು ನೂತನ ಮಾರ್ಗದ ಜೊತೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಸಮಾಜ ಉದ್ಧಾರಕ್ಕಾಗಿ ಅವರು ಬೋಧಿಸಿದ ವಿಧಾನವು ನಮಗೆ ಆದರ್ಶನಿಯಾ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತಿ ವ್ಯವಸ್ಥಾಪಕರಾದ, ಉಮಾ ಕಾಳೆ, ವಿಷಯ ನಿರ್ವಾಹಕರು, ಸಾವಿತ್ರಿ, ಹೆಚ್ಐಸಿಸಿ ಸಂಯೋಜಕರು ನಾಗರಾಜ್, ಬಿ ಎಂ ಟಿ ಎನ್ ಓ ಮಹೇಶ್ ಹಾಗೂ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!