ದೇವಿ ಸತೀಶ್ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ದೇವಿ ಸತೀಶ ಆಯ್ಕೆ
ಕರುನಾಡ ಬೆಳಗು ಸುದ್ದಿ
ವಿಜಯನಗರ,14- ಕರ್ನಾಟಕ ರಾಜ್ಯದಲ್ಲಿ, “ಮಹಿಳಾ ಅಭಿರುದ್ದಿ ಕ್ಷೇತ್ರದಲ್ಲಿನ “ಸಾಧನೆಗೆ ನೀಡುವ, “ಕಿತ್ತೂರು ರಾಣಿ ಚೆನ್ನಮ್ಮ” ಪ್ರಶಸ್ತಿ ಯನ್ನು 2024 ನೇ ಸಾಲಿನ ಸಂಗೀತ ಕ್ಷೆತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿದಂತ, ಸ್ಥಳೀಯ ಎಂ.ಜೆ.ನಗರದ ನಿವಾಸಿ ಶ್ರೀ ಮತಿ ದೇವಿಸತೀಶ್ ಅಲಿಯಾಸ್ ದೇವೀರಮ್ಮ ಚೌಕಿಮಠ ಇವರನ್ನು ವಿಜಯನಗರ ಜಿಲ್ಲೆಯಿಂದ ಆಯ್ಕೆ ಮಾಡಿ ಗುರುತಿಸಿ ಪ್ರಶಸ್ತಿ ಯನ್ನು ನೀಡಿ ಗೌರವಿಸಿರುತ್ತಾರೆ.
ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಇಲಾಖೆ ಬೆಂಗಳೂರು ಇವರು ಬೆಂಗಳೂರಿನ ಬಾಲ ಭವನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರಧಾನ ಮಾಡಿದರು.
