WhatsApp Image 2024-04-26 at 3.40.10 PM

ದೇಶದಲ್ಲಿ ನರೇಂದ್ರ ಮೋದಿ 3 ನೇ ಬಾರಿ ಪ್ರಧಾನಿ ಯಾಗುವದು ಖಚಿತ : ಮಾಜಿ ಸಚಿವ ಹಾಲಪ್ಪ ಆಚಾರ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 26- ದೇಶದಲ್ಲಿ 3 ನೇಯ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗುವದು ಖಚಿತ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಮತ ನೀಡಿ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ತಾಲೂಕಿನ ಹಿರೇಮ್ಯಾಗೇರಿ. ಸಂಕನೂರು ಗ್ರಾಮದಲ್ಲಿ ಬಹಿರಂಗ ಪ್ರಚಾರ ಸಭೆ. ಲೋಕಸಭಾ ಅಭ್ಯರ್ಥಿ ಪರ ಮತಯಾಚನೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ಕಾಂಗ್ರೆಸ್ ನವರಿಗೆ ಅಡ್ರೆಸ್ ಇಲ್ಲದಂತಾಗಿದೆ.ಕಲ್ಲುಇದ್ದಲು ಮತ್ತು ಇನ್ನೂ ಹಲವಾರು ಭ್ರಷ್ಟಾಚಾರ ಮಾಡಿ ದೇಶವನ್ನು ದಿವಾಳಿ ಮಾಡಿದ್ದಾರೆ ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಇನ್ನೂ ಹಲವಾರು ಸೇರಿದಂತೆ ಸಮಗ್ರ ಅಭಿವೃದ್ಧಿ ಕಾಮಗಾರಿ ಮೂಲಕ ಇಡೀ ವಿಶ್ವದಲ್ಲಿಯೇ ನಮ್ಮ ಭಾರತ ದೇಶ ಮುಂಚೂಣಿ ಸ್ಥಾನದಲ್ಲಿದೆ ಹತ್ತು ವರ್ಷಗಳಲ್ಲಿ ಭಾರತವು ಕೈಗಾರಿಕಾ ಉತ್ಪಾದನೆ ಕ್ಷೇತ್ರದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ಮೋದಿಯರು ದೇಶಗೋಸ್ಕರ ಶ್ರಮಿಸಿದ ಮಹಾನಾಯಕ ಬಿಜೆಪಿ ಪಕ್ಷಕ್ಕೆ ಮತ ಹಾಕುವ ಮೂಲಕ ದೇಶದ ಭದ್ರತೆಗಾಗಿ ಬಲಪಡಿಸಲು ಮೋದಿಜೀ ಅವರ ಕೈ ಬಲಪಡಿಸಬೇಕು.

ಬಿಜೆಪಿ ಪಕ್ಷದ ಕಮಲದ ಗುರುತಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ನರೇಂದ್ರ ಮೋದಿಯವರು 10 ವರ್ಷದಲ್ಲಿ ಹೂಸ ರಾಷ್ಟ್ರೀಯ ಹೆದ್ದಾರಿ.ವಿಮಾನ ನಿಲ್ದಾಣ. ಮತ್ತು ರೈಲ್ವೆ ನಿಲ್ದಾಣಗಳನ್ನು 3 ಪಟ್ಟು ಹೆಚ್ಚಿನ ಅಭಿವೃದ್ಧಿ ಮಾಡಿ ನಮ್ಮ ದೇಶದ ಕಿತಿ೯ ಎತ್ತಿ ಹಿಡಿದಿದ್ದಾರೆ ನಮ್ಮ ಬಿಜೆಪಿ ಪಕ್ಷ ಬದ್ಧತೆ
ದೇಶದ ಅಭಿವೃದ್ಧಿ ಗೋಸ್ಕರ ಪ್ರಧಾನಿ ನರೇಂದ್ರ ಮೋದಿಯ ಆಡಳಿತ ದಕ್ಷತೆಯನ್ನು ನೋಡಿ ಅವರ ಕೈ ಬಲಪಡಿಸಲು ಬಿಜೆಪಿ ಪಕ್ಷದ ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರನ್ನು ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಬೇಕು.

ಈ ಹಿಂದೆ ತಾಲೂಕಿನಲ್ಲಿ ಕಾಂಗ್ರೆಸ್ ನವರು 30 ವರ್ಷಗಳ ಆಡಳಿತ ಮಾಡಿದವರು ತಾಲೂಕಿನ ಸಂಕನೂರು.ಗ್ರಾಮದಲ್ಲಿ ಬ್ರಜ್ ಮಾಡುವದಕ್ಕೆ ಇವರ ಕೈಯಲ್ಲಿ ಆಗಲಿಲ್ಲ ಹಿಂದೆ ಮಳೆ ಬಂದು ಈ ಹಳ್ಳದಲ್ಲಿ ನಾಲ್ಕು ಜನ ಹಳ್ಳದಲ್ಲಿ ನೀರು ಪಾಲಾಗಿ ಮೃತಪಟ್ಟದಿರು ಹೀಗಾಗಿ ನಾನು ಶಾಸಕ ನಾದ ಮೇಲೆ ದೊಡ್ಡ ಪ್ರಮಾಣದ ಬ್ರಜ್ ಮಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿದ್ದೇನೆ.ಜನಪ್ರತಿನಿಧಿಯಾದವರು ಬಡವರ ಕಷ್ಟ ಮತ್ತು ಗ್ರಾಮದ ಸಮಸ್ಯೆಗಳ.ಬಗ್ಗೆ ಅಭಿವೃದ್ಧಿ ಕಡೇ ಗಮನಹರಿಸಬೇಕು ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು

ನಂತರ ರತ್ನನ್ ದೇಸಾಯಿ. ಮಲ್ಲನಗೌಡ ಕೋನನಗೌಡ್ರ ವೀರಣ್ಣ ಹುಬ್ಬಳ್ಳಿ ಅವರು ಮಾತನಾಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರ ಕಮಲದ ಗುರುತಿಗೆ ಮತ ಹಾಕುವ ಮೂಲಕ ಕೂಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವಕಾಶ ಮಾಡಿ ಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಸಲಿಂಗಪ್ಪ ಭೋತೆ, ಸಿಎಚ್ ಪೋಲೀಸ್ ಪಾಟೀಲ, ಶರಣಪ್ಪ ಗುಂಗಾಡಿ, ವೀರಣ್ಣ ಹುಬ್ಬಳ್ಳಿ, ಶಿವಕುಮಾರ ನಾಗಲಾಪೂರಮಠ, ಶಿವಶಂಕರರಾವ ದೇಸಾಯಿ, ಸೋಮನಗೌಡ, ಬಸವರಾಜ ಗುಳಗುಳಿ, ಕೆಂಚಪ್ಪ ಹಳ್ಳಿ, ಗುರಪ್ಪ ಮ್ಯಾಗೇರಿ ಸೇರಿದಂತೆ ಮತ್ತು ಹಿರೇಮ್ಯಾಗೇರಿ, ಸಂಕನೂರ, ಗ್ರಾಮದ ಮುಖಂಡರು ಕಾರ್ಯಕತ೯ರು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!