ದೇಶದಲ್ಲಿ ಬಿಜೆಪಿ ಪಕ್ಷದ ಕೊಡುಗೆ ಶೂನ್ಯ : ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 12 ದೇಶದಲ್ಲಿ ಬಿಜೆಪಿ ಪಕ್ಷದ ಕೊಡುಗೆ ಶೂನ್ಯ ಬಿಜೆಪಿಯವರು ಬರಿ ಹೇಳುವದರಲ್ಲಿ ನಂ1 ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲಾ ಅದಕೋಸ್ಕರ ಈ ಸಾರಿ ಕೊಪ್ಪಳ ಲೋಕಸಭಾ ಚುನಾವಣೆ ನಿಮಿತ್ಯ ಕ್ಷೇತ್ರದ ಎಲ್ಲಾ ಕಾಂಗ್ರೇಸ್ ಮುಖಂಡರು ಕಾರ್ಯಕರ್ತರು ಒಂದಾಗಿ ಒಗಟ್ಟನಿಂದ ಪ್ರತಿ ಮನೆ ಮನೆಗೂ ತೆರಳಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿ ಮತ ಹಾಕಿಸಬೇಕು. ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಹಾಗು ಶಾಸಕರಾದ ಬಸವರಾಜ ರಾಯರೆಡ್ಡಿ ಹೇಳಿದರು.
ತಾಲೂಕಿನ ಚಿಕ್ಕ ವಂಕಲಕುಂಟಾ ಗ್ರಾಮದಲ್ಲಿ ಶುಕ್ರವಾರ ದಿವಸ ಕೂಪ್ಪಳ ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ 10 ವರ್ಷ ಅಧಿಕಾರದ ಅವಧಿಯಲ್ಲಿ ಯಾವ ಅಭಿವೃದ್ಧಿಯನ್ನು ಮಾಡಲಿಲ್ಲ ಕೇವಲ ಮೋದಿ ಅವರು ಹೆಸರಿನಲ್ಲಿ ಬರಿ ಸುಳ್ಳು ಹೇಳುವದು ಇವರ ಸಾಧನೆಯಾಗಿದೆ. ಈ ಸಾರಿ ಕಾಂಗ್ರೆಸ್ ಪಕ್ಷದ ನಮ್ಮ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಅವರಿಗೆ ಗೆಲುವು ಖಚಿತ ಎಂದರು.
ದೇಶದ ಜನತೆ ಪ್ರಜ್ಞಾವಂತರಾಗಿದ್ದಾರೆ ಬಿಜೆಪಿಯವರಿಗೆ 2024ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಈ ಬಾರಿ ಬದಲಾವಣೆ ಗಾಳಿ ಬಿಸಿದೆ ಕಾಂಗ್ರೆಸ್ ಹೆಚ್ಚು ಸ್ಥಾನಗಳ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ದೇಶದಲ್ಲಿ ಕಾಂಗ್ರೇಸ್ ಪಕ್ಷದ ಕೊಡುಗೆ ಅಪಾರವಾಗಿದೆ ಚುನಾವಣೆ ಅಭಿವೃದ್ಧಿ ಮಾನದಂಡದ ಮೇಲೆ ನಿಂತಿದೆ.
ಜನರು ಹಣಕ್ಕಾಗಿ ಮತ ಹಾಕುವುದಿಲ್ಲ ಕಾಂಗ್ರೆಸ್ ಅಭಿವೃದ್ಧಿಯನ್ನು ಗಮನಿಸಿ ಮತ ಹಾಕುತ್ತಾರೆ ಈ ಹಿಂದೆ ದೇಶದಲ್ಲಿ ಕಾಂಗ್ರೆಸ ಸರಕಾರದ ಅಧಿಕಾರ ಅವಧಿಯಲ್ಲಿ 60 ವರ್ಷಗಳ ಕಾಲ ಸಮಗ್ರ ಅಭಿವೃದ್ಧಿ ಮಾಡಿ ಉತ್ತಮ ಆಡಳಿತ ನೀಡಿ ರೈತರ ಬಗ್ಗೆ ಬಡವರ ಬಗ್ಗೆ ಕಾಳಜಿ ವಹಿಸಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿ. ದೇಶದಲ್ಲಿ ಆಣೆಕಟ್ಟು ನದಿ ಸೇತುವೆ. ಸಾಕಷ್ಟು ಡ್ಯಾಮ್ ಗಳು. ರೈಲ್ವೆ ಗಳು ನಿಲ್ದಾಣ ವಿಮಾನ ನಿಲ್ದಾಣ ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡಿದ ಕಿತಿ೯ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತದೆ ಹೀಗಾಗಿ ಜನಸಾಮಾನ್ಯರ ಮನಸ್ಸಿನಲ್ಲಿ ಕಾಂಗ್ರೆಸ್ ಉಳಿದುಕೊಂಡಿದೆ ಆದರೆ ನಂತರ ಬಂದ ಬಿಜೆಪಿಯ ಸರಕಾರದ ನರೇಂದ್ರಮೋದಿ ಅವರು 10 ವರ್ಷಗಳ ಅಧಿಕಾರ ಅವಧಿಯಲ್ಲಿ ಯಾವ ಅಭಿವೃದ್ಧಿಯನ್ನು ಮಾಡಲಿಲ್ಲ ಅಂತವರಿಗೆ ದೇಶ ಜನತೆಯ ಮತ ಹಾಕುವುದಿಲ್ಲ ಬರೀ ಸುಳ್ಳು ಹೇಳುವದು ಅವರ ಕೆಲಸ ಪ್ರಧಾನಮಂತ್ರಿ ಮೋದಿ ಅವರು ಮಾತಿಗೆ ಮರುಳಾಗಿ ಯಾರು ಬಿಜೆಪಿಗೆ ಮತ ಹಾಕಬೇಡಿ ಎಂದರು.
ರಾಜ್ಯದಲ್ಲಿ ಸಿ.ಎಂ.ಸಿದ್ದರಾಮಯ್ಯನವರು ಯಾವ ರಾಜ್ಯದಲ್ಲಿಯೂ ಮಾಡದ 5 ಗ್ಯಾರಂಟಿ ಯೋಜನೆಯನ್ನು ಪ್ರಥಮವಾಗಿ ನಮ್ಮ ರಾಜ್ಯದಲ್ಲಿ ಮಾಡಿ ಉತ್ತಮ ಆಡಳಿತ ಮಾಡುವ ಮೂಲಕ ಹಲವಾರು ಯೋಜನೆಯನ್ವು ಜಾರಿಗೊಳಿಸಿ ಜನರಿಗೆ ಚುನಾವಣಾ ಪೊವ೯ದಲ್ಲಿ ಕೊಟ್ಟ ಮಾತಿನಂತ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಸಿ ಎಂ.ಸಿದ್ದರಾಮಯ್ಯನವರು ನುಡಿದಂತೆ ನೆಡದುಕೊಂಡ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ ಎಂದರು.
ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಹಗಲು ಇರುಳು ಶ್ರಮಿಸುತ್ತೇನೆ ಎಂದು ಹೇಳಿದರು.
ನಮ್ಮ ಕೂಪ್ಪಳ ಲೋಕಸಭಾ ನಿಯೋಜಿತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಅತ್ಯಂತ ಹೆಚ್ಚು ಮತಗಳಿಂದ ಗೆಲಿಸಬೇಕಾಗಿ ಮತದಾರರಲ್ಲಿ ವಿನಂತಿ ಅವರು ಆಯ್ಕೆ ಯಾದರೆ ನಮ್ಮ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ರೀತಿಯ ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದರು ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳಾದ 1 ಮಹಿಳೆಯರಿಗೆ ಉಚಿತ ಬಸ್ ಪಾಸ್ 2 ಉಚಿತ 200 ಯೂನಿಟ್ ವಿದ್ಯುತ್ ಪ್ರೀ.3 ಅಕ್ಕಿಭಾಗ್ಯ4 ಮಹಿಳೆಯರಿಗೆ, ಪ್ರತಿ ತಿಂಗಳಿಗೆ 2000 ರಾಪಾಯಿ ,5 ನಿರುದ್ಯೋಗ ಪದವಿದರರಿಗೆ ಪ್ರತಿ ತಿಂಗಳು 1500 ರಿಂದ 3000ರೂಪಾಯಿ ನೀಡುವುದು ಕಾಂಗ್ರೇಸ್ ಸರಕಾರ ಹೀಗಾಗಿ 5 ವರ್ಷ ಸಹ ಸಂಪೂರ್ಣ ಅಧಿಕಾರ ಅವಧಿಯಲ್ಲಿ ಸಿ. ಎಂ ಸಿದ್ದರಾಮಯ್ಯನವರು ಮತ್ತು ನಿಮ್ಮ ಶಾಸಕ ಬಸವರಾಜ ರಾಯರಡ್ಡಿ ಅವರನ್ನು ನೋಡಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೂಡಿ ಸಮಗ್ರ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ, ಬ್ಲಾಕ್ ಕಾಂಗ್ರೆಸ್ ತಾಲೂಕ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚೆಂಡೂರ, ಮುಖಂಡ ಯಂಕಣ್ಣ ಯರಾಶಿ, ವೀರನಗೌಡ ಪೋ. ಪಾಟೀಲ, ಬಿ.ಎಂ ಶಿರೂರ, ರಾಘವೇಂದ್ರ ಜೋಶಿ, ಅಡಿವಪ್ಪ ಭಾವಿಮನಿ, ಡಾ.ಶಿವನಗೌಡ ದಾನರಡ್ಡಿ, ಸುಧೀರ ಕೊಲ೯ಹಳ್ಳಿ, ಮಹೇಶ್ ಹಳ್ಳಿ, ಮಲ್ಲು ಜಕ್ಕಲಿ, ಶರಣಪ್ಪ ಗಾಂಜಿ, ರುದ್ರಪ್ಪ ಮರಕಟ್ಟು, ಹುಲಗಪ್ಪ ಬಂಡಿವಡ್ಡರ್, ಪ್ರಕಾಶ ಮಾಲಿ, ಗ್ರಾ. ಪಂಚಾಯಿತಿ ಸವ೯ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಮತ್ತು ಇತರರು ಭಾಗವಹಿಸಿದ್ದರು.
