ಬಿಸಿಲಿನ ತಾಪಕ್ಕೆ ತಂಪೆರೆದ ಮಳೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 12- ಈ ಬಾರಿ ಮಳೆ ಬಾರದಿದ್ದರಿಂದ ರಾಜ್ಯದಲ್ಲಿ ಬರಗಾಲದ ಛಾಯೇಮೂಡಿತ್ತು. ವಿಜಯನಗರ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 40 ಡಿಗ್ರಿ ಸೆಸಿ ಮೀರಿ ಜನರು ಮಧ್ಯಾಹ್ನ ಸಮಯದಲ್ಲಿ ಹೊರಗಡೆ ಬಾರದೇ ಪರಿತಪಿಸುತಿದ್ದರು.
ಇಂದು ಮಧ್ಯಾಹ್ನ 1:00ಗಂಟೆ ಸುಮಾರಿಗೆ ಏಕಾಎಕಿ 20ನಿಮಿಷಗಳ ಕಾಲ ಮಳೆ ಸುರಿದು ವಾತಾವರಣ ತಂಪಾಗಿದ್ದರಿಂದ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ, ನಿಟ್ಟುಸಿರು ಬಿಟ್ಟರು. ಇನ್ನುಮುಂದೆಯಾದರೂ ಸರಿಯಾದ ಸಮಯಕ್ಕೆ ಮಳೆ ಬರಲಿ, ಬರಗಾಲ ತೊಲಗಲಿ ಎಂದು ದಾರಿಹೊಕರು ಜಿನುಗುಡುತ್ತಾ ಸಾಗಿದರು.
