WhatsApp Image 2024-05-07 at 5.11.43 PM

ನಮ್ಮ ನಾಯಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ : ಶ್ರೀರಾಮುಲು

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 7- ಲೋಕಸಭಾ ಚುನಾವಣೆ, ಅಂಗವಾಗಿ ಇಂದು ನಡೆದ ಮತದಾನ ಕಾರ್ಯಕ್ರಮದಲ್ಲಿ ಬಿರುಸಿನಿಂದ ಮತದಾನ ನಡೆಯಿತು. ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳ ಜೊತೆಗೆ ಇತರ ಪಕ್ಷದ ನಾಯಕರು ತಮ್ಮ ಮತ ಹಕ್ಕುವನ್ನು ಚಲಾಯಿಸಿದರು.

ಲೋಕಸಭಾ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ ಶ್ರೀರಾಮುಲು ಅವರು ಎಸ್ಪಿ ಸರ್ಕಲ್ ಬಳಿ ಇರುವ ಮಕ್ಕಳ ಮತ್ತು ಮಹಿಳಾ ಸಂಕ್ಷೇಮ ಕಾರ್ಯಾಲಯದಲ್ಲಿ ವ್ಯವಸ್ಥೆ ಮಾಡಿದ ಮತಗಟ್ಟೆಯಲ್ಲಿ ಮತ ಹಕ್ಕನ್ನು ಚಲಾಯಿಸಿದರು.

ಕುಟುಂಬ ಸಮೇತ ಬಂದ ಶ್ರೀರಾಮುಲು ಅವರು ಮತ ಹಕ್ಕನ್ನು ಚಲಾಯಿಸಿ ನಂತರ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳು, ನಮ್ಮ ನಾಯಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು, ಜನರು ಉತ್ಸಾಹದಿಂದ ಮತದಾನ ಮಾಡುತ್ತಿದ್ದು, ಬಳ್ಳಾರಿಯಲ್ಲಿ ತಮ್ಮ ವಿಜಯ ಖಚಿತ ಎಂದು ವಿಶ್ವಾಸ ವ್ಯಕ್ತ ಮಾಡಿದರು.

ಗಾಂಧಿನಗರದಲ್ಲಿರುವ ಮತಗಟ್ಟೆಗೆ ಭೇಟಿ ನೀಡಿ ಸಚಿವ ಬಿ ನಾಗೇಂದ್ರ ತಮ್ಮ ಮತ ಹಕ್ಕನ್ನು ಚಲಾಯಿಸಿದರು. ಅದೇ ರೀತಿಯಾಗಿ ಶಾಸಕ ನಾರಾಭರತ್ ರೆಡ್ಡಿ, ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ವೋಟು ಹಾಕಲು ಬಳಸಿದರು.

ಬಳ್ಳಾರಿಯಲಿ ಬೆಳ್ಳಂಬೆಳಗ್ಗೆನೇ ಸುಡುಬಿಸಲಿದ್ದರೂ ಮತದಾರ ಲೆಕ್ಕ ಮಾಡಿದೆ ಸಾಲಲ್ಲಿ ನಿಂತು ತಮ್ಮ ತಮ್ಮ ಮತಗಳನ್ನು ಚಲಾಯಿಸಿದರು.

ಇನ್ನೂ ಕಾಂಗ್ರೆಸ್ ಅಭ್ಯರ್ಥಿ, ಈ ತುಕಾರಾಮ್ ಅವರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಸಂಡೂರು ಪಟ್ಟಣದಲ್ಲಿ ತಮ್ಮ ಮತ ಹಕ್ಕನ್ನು ವಿನಿಯೋಗಿಸಿದರು. ವಿಕಲಾಂಗರು ಮತ್ತು ಶತಾಯುಷಿಗಳು ಮತಗಟ್ಟಗಳಿಗೆ ತರಲಿ ಮತ ಚಲಾಯಿಸಲು ಮುಂದಾಗಿರುವ ದೃಶ್ಯಗಳು ಕಂಡುಬಂದವು.

ಪ್ರಶಾಂತವಾದ ವಾತಾವರಣದಲ್ಲಿ ಮತದಾರರು ಬಿಸಿಲಲ್ಲಿ ಸಹಿತ ಲೆಕ್ಕ ಮಾಡದೆ ಮತ ಚಲಾಯಿಸಲು ಮುಂದಾದರು. ಸಂಜೆ 5:00 ಹೊತ್ತಿಗೆ ಸುಮಾರು 50% ಹೆಚ್ಚು ಮತದಾನವಾಗಿತ್ತು.

Leave a Reply

Your email address will not be published. Required fields are marked *

error: Content is protected !!