WhatsApp Image 2024-04-11 at 5.57.54 PM

ನರೇಗಾ ಕರ್ತವ್ಯ ನಿರ್ವಹಣೆಗೆ ಕಾನೂನು ಬೆಂಬಲ ನೀಡಲು ಮನವಿ

ಕರುನಾಡ ಬೆಳಗು ಸುದ್ದಿ

ಹೊಸಪೇಟೆ, 11- ನರೇಗಾ ಕಾಮಗಾರಿ ಒಂದು ರಾಷ್ಟ್ರೀಯ ಯೋಜನೆ, ಇದನ್ನು ಅನುಷ್ಠಾನಗೊಳಿಸ ಬೇಕಾದ್ದು ಸರ್ಕಾರಿ ಉದ್ಯೋಗಸ್ಥರ ಮತ್ತು ಚುನಾಯಿತ ಪ್ರತಿನಿಧಿಗಳ ಒಂದು ಕರ್ತವ್ಯ ಆದರೆ ಕೆಲವು ಬಾರಿ ಇವರ ಕರ್ತವ್ಯಕ್ಕೆ ವಿಳಂಬಗಳು ಆಗುತ್ತಾ ಇರುತ್ತವೆ. ಇವರ ಮೇಲೆ ಇಲ್ಲಸಲ್ಲದ ಕೇಸುಗಳು ಹಾಕುವುದು ಕರ್ತವ್ಯಕ್ಕೆ ಅಡ್ಡಿಪಡಿಸುವುದು ಘಟನೆಗಳು ನಡೆದಾಗ ಸರ್ಕಾರ ಇವರ ಪರ ನಿಲ್ಲಬೇಕಾಗುತ್ತದೆ.

ನರೇಗಾ ಕಾಮಗಾರಿಯ ಅನುಷ್ಠಾನಗೊಳಿಸುತ್ತಿರುವ ತಮ್ಮ ಮೇಲೆ ಹಾಕಿದ ಸುಳ್ಳು ಕೇಸನ್ನು ರದ್ದುಪಡಿಸಲು ಮೇಲಾಧಿಕಾರಿಗಳು ಕ್ರಮ ವಹಿಸಲು ಮುಂದಾಗದಿದ್ದರೆ ರಾಜ್ಯಮಟ್ಟದಲ್ಲಿ ಧರಣಿ ನಡೆಸಲಾಗುವುದು ಎಂದು ಅವರ ಪರವಾಗಿ, ವಿಜಯನಗರ ಜಿಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಸಣ್ಣಕ್ಕಿ ಲಕ್ಷ್ಮಣ್, ಕೂಡ್ಲಿಗಿ ಹಾಗೂ ಹೂವಿನಹಡಗಲಿ ತಾಲೂಕದ ಪದಾಧಿಕಾರಿಗಳಾದ ಮುರಳಿ ರಾಜ್, ಕರಿಯಪ್ಪ, ನಾಗರಾಜ್, ಲೋಕೇಶ್, ಶಿವಮೂರ್ತಿ ಆಮೇಲೆ ವಿಜಯನಗರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ, ವಿಜಯನಗರ ಜಿಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸಣ್ಣಕ್ಕಿ,ಲಕ್ಷ್ಮಣ್ ಮಾತನಾಡುತ್ತಾ, ಹಗರಿಬೊಮ್ಮನಹಳ್ಳಿ ತಾಲೂಕ ಮೋರಿಗೇರಿ ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿ ಸರ್ವೆ ನಂಬರ್ 654 / ಎ ರಲ್ಲಿ ಗೋಮಾಳದ ಸುತ್ತಲೂ ಫ್ರೆಂಚ್ ನಿರ್ಮಾಣ ಕಾಮಗಾರಿ ನಡೆಸಲು ಮುಂದಾದಾಗ ಮೈಲಮ್ಮ ದಿದ್ಗಿ ಅವರು ಈ ಜಮೀನು ನಮ್ಮದೆಂದು ಕಾಮಗಾರಿಗೆ ಅಡ್ಡಿಪಡಿಸುತ್ತಿರುವ ಅವರಿಗೆ ತಿಳುವಳಿಕೆ ಹೇಳಿ ಕಳಿಸಿದರೂ ಸಹ ಇದೇ ತಿಂಗಳು 5 ನೇ ತಾರೀಕು ವಿಷ ಸೇವಿಸಿ ಮೃತಪಟ್ಟಿರುತ್ತಾರೆ.ಇದಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉದಯಕುಮಾರ್, ಪಂಚಾಯಿತಿ ಪಿಡಿಒ ಗಳಾದ ಖಾಜಾಬನ್ನಿ, ಡಿ ಇ ಓ ಗಳಾದ ಬಸವರಾಜ, ಪ್ರಕಾಶ, ಜಿ ಕೆ ಎಂ ಶೈಲಜಾ, ಬಿ ಎಫ್ ಡಿ ಕೊಟ್ರೇಶ್, ಬಿಲ್ ಕಲೆಕ್ಟರ್ ಶಿವಕುಮಾರ್, ತಾಂತ್ರಿಕ ಸಹಾಯಕರು ರಾಘವೇಂದ್ರ ಅಂಬುವ ಎಂಟು ಬಂದಿ ನೌಕರರ ಮೇಲೆ ಅನಾವಶ್ಯಕವಾಗಿ ಸುಳ್ಳು ಕೇಸು ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಭಾಗದಲ್ಲಿ ತೀವ್ರ ಬರಗಾಲ ಇರುವುದರಿಂದ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ನರೇಗಾ ಕಾಮಗಾರಿ ಅನುಷ್ಠಾನಗೊಳಿಸುತ್ತಿರುವ ಸಿಬ್ಬಂದಿ ಮೇಲೆ ಕೇಸು ದಾಖಲಿಸುವುದರಿಂದ ಗ್ರಾಮ ಪಂಚಾಯತಿಯಲ್ಲಿ ಒಂದು ಭಯಾನಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಸಣ್ಣಕ್ಕಿ ಲಕ್ಷ್ಮಣ್ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ಕೂಡಲೇ ಈ ವಿಷಯದ ಮೇಲೆ ವಿಚಾರಣೆ ನಡೆಸಿ ಸುಳ್ಳು ಕೇಸು ದಾಖಲಿಸಿದ ಅವರ ಮೇಲೆ ಕ್ರಮವಹಿಸಿ ಸರ್ಕಾರಿ ಉದ್ಯೋಗಸ್ಥರಿಗೆ ಭದ್ರತೆ ನೀಡುವುದರ ಜೊತೆಗೆ ಆತ್ಮಸ್ಥೈರ್ಯ ತುಂಬಬೇಕೆಂದು ಕೇಳಿಕೊಂಡರು. ರಾಜ್ಯ ಸರ್ಕಾರ ಕ್ರಮ ವಹಿಸಲು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಉಗ್ರ ಹೋರಾಟವನ್ನು ನಡೆಸಲು ನಾವು ಸಿದ್ದರಿದ್ದೇವೆ ಎಂದು ಈ ಸಂದರ್ಭದಲ್ಲಿ ಅವರು ಸ್ಪಷ್ಟನೇ ಮಾಡಿದರು.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಹಲವಾರು ಮಂದಿ ಸದಸ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!