WhatsApp Image 2024-04-15 at 5.17.58 PM

ನಾಗನಾಥೇಶ್ವರ ಜಾತ್ರಾ ಪ್ರಯುಕ್ತ ಉಚಿತ ಚಿಕಿತ್ಸಾ ಸೌಲಭ್ಯ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 15- ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಸಿರಿಗೇರಿ ವ್ಯಾಪ್ತಿಯ ನಾಗನಾಥೇಶ್ವರ ಜಾತ್ರಾ ಪ್ರಯುಕ್ತ ತಾಲೂಕ ಆರೋಗ್ಯ ಅಧಿಕಾರಿಗಳ ಆದೇಶದಂತೆ ತಾತ್ಕಾಲಿಕ ಕ್ಲಿನಿಕ್ ಅನ್ನು ತೆಗೆಯಲಾಗಿದ್ದು ಬಂದಂತಹ ಜನರಿಗೆ ಉಚಿತ ಚಿಕಿತ್ಸಾ ಸೌಲಭ್ಯ ಮತ್ತು ಬಿಸಿಲಿನ ಜಳಕ್ಕೆ ಹೈರಾಣದ ಜನರಿಗೆ ಓ ಆರ್ ಎಸ್ ಮಿಸ್ರಿತ ದ್ರಾವಣ ನೀಡಲಾಯಿತು.

ಈ ಸಂದರ್ಭದಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳು ಡಾಕ್ಟರ್ ಬಿ ಈರಣ್ಣ ಭೇಟಿ ನೀಡಿ ತಾತ್ಕಾಲಿಕ ಕ್ಲಿನಿಕ್ ಅನ್ನು ಪರೀಕ್ಷಿಸಿ ನಂತರ ಜಾತ್ರೆಯಲ್ಲಿ ತೆರೆದಿಟ್ಟ ಹಣ್ಣುಗಳ ಆಹಾರ ಪದಾರ್ಥಗಳ ಬಂಡಿಗಳಲ್ಲಿ, ವಿಚಕ್ಷಣೆ, ಆರೋಗ್ಯ ಶಿಕ್ಷಣ ಮತ್ತು ಜಾತ್ರ ಮಂಡಳಿಯು ನೀಡುತ್ತಿರುವ ಆಹಾರಗಳ ಪರೀಕ್ಷೆ ಕುಡಿಯುವ ನೀರಿನ ಪರೀಕ್ಷೆ ಮಾಡಲಾಯಿತು

ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿದಿನ ಕ್ಲೋರಿನೇಷನ್ ಮಾಡಿದ ನೀರನ್ನೆ ಬಿಡುವಂತೆ ತಿಳಿಸಲಾಯಿತು ತಾತ್ಕಾಲಿಕ ಕ್ಲಿನಿಕ್ ನಲ್ಲಿ ಬಂದಂತಹ ಜನರಿಗೆ ಬೇಸಿಗೆಕಾಲದ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಅಧಿಕ ರಕ್ತದ ಒತ್ತಡ ಪರೀಕ್ಷಿಸಿ ಓ ಆರ್ ಎಸ್ ಮಿಸಿರತ ದ್ರಾವಣ ನೀಡಲಾಯಿತು.

ವೈದ್ಯಾಧಿಕಾರಿ ಡಾ ತಿಪ್ಪೇಸ್ವಾಮಿ ರೆಡ್ಡಿ ಡಾ ನಾಗರಾಜ್ ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ಚಿದಾನಂದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಬಿ ಪಿ ಎಂ ಪ್ರಹ್ಲಾದ್ ಎಚ್ ಐ ಓ ಸತೀಶ್ ಸಿ ಎಚ್ ಓ ನಾಗೇಶ್ ಕಿರಣ್ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!