WhatsApp Image 2024-03-15 at 4.13.41 PM

ನಾಮಫಲಕದಲ್ಲಿ ಶೇ. 60% ಕನ್ನಡ ಬರಹ ಕಡ್ಡಾಯ : ಶಂಶೇ ಆಲಂ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,15- ತಾಲೂಕಿನಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳು ಸರ್ಕಾರಿ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ನಾಮಫಲಕಗಳಲ್ಲಿ ಒಂದು ವಾರದೊಳಗೆ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಶೇ. 60 ಪ್ರದರ್ಶಿಸಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಆದೇಶದ ಪ್ರಕಾರ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು ಟ್ರಸ್ಟ್ ಗಳು ಸಮಾಲೋಚನಾ ಕೇಂದ್ರಗಳು ಆಸ್ಪತ್ರೆಗಳು ಪ್ರಯೋಗಾಲಯಗಳು ಮನೋರಂಜನ ಕೇಂದ್ರಗಳು ಹೋಟೆಲ್ ಗಳು ಹಾಗೂ ಬ್ಯಾಂಕುಗಳು ಮುಂತಾದ ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಶೇಕಡ 60 ಕನ್ನಡ ನಾಮಫಲಕ ಅಳವಡಿಸಬೇಕು ಎಂದು ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಶಂಶೇ ಆಲಂ ಅವರು ತಿಳಿಸಿದರು.

ಸರ್ಕಾರಿ ಸ್ಥಳೀಯ ಪ್ರಾಧಿಕಾರ ಅನುದಾನಿತ ಅಥವಾ ಅನುದಾನ ರಹಿತ ಸಂಸ್ಥೆ ನಡೆಸುವ ಶಾಲಾ ಕಾರ್ಯಕ್ರಮಗಳಲ್ಲಿ ಬಳಸುವ ಕರಪತ್ರ ಬ್ಯಾನರ್ ಫ್ಲೆಕ್ಸ್ ಎಲೆಕ್ಟ್ರಾನಿಕ್ ಪ್ರದರ್ಶನ ಫಲಕಗಳು ಮಾಹಿತಿಗಳು ಸೂಚನಾ ಪತ್ರಗಳು ಕಡ್ಡಾಯವಾಗಿ ಕನ್ನಡದಲ್ಲಿರುವಂತೆ ಕ್ರಮ ವಹಿಸಬೇಕು ಯಾವುದೇ ಯೋಜನೆ ಸಂಬಂಧಿಸಿದ ಫಲಕ ಜಾಹೀರಾತು ರಶೀದಿ ಸೂಚನಾ ಪತ್ರಗಳು ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕು ಇಲ್ಲವಾದಲ್ಲಿ ಕ್ರಮ ಜರುಗಿಸ ಲಾಗುವುದು ಜಿಲ್ಲಾಧಿಕಾರಿ ಪ್ರಕಟಿಸಿದ್ದಾರೆ ಎಂದು ತಹಸಿಲ್ದಾರ್ ಶಂಶೇ ಆಲಂ ಅವರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!