WhatsApp Image 2024-06-05 at 5.58.23 PM

ನೀರು, ಗಾಳಿ ಮಲೀನವಾಗದಂತೆ ಎಚ್ಚರಿಕೆ ವಹಿಸಿ : ಎಂ.ಎಸ್.ದಿವಾಕರ

ಕರುನಾಡ ಬೆಳಗು ಸಸುದ್ದಿ

ಬಳ್ಳಾರಿ, 5- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸದಾಶಿವ ಪ್ರಭು ಬಿ ಅವರು ಮಾತನಾಡಿ, ಗಿಡಮರ ಸಂರಕ್ಷಣೆ ಮಾಡುವುದು ಬರೀ ಇಲಾಖೆಗಳ ಕಾರ್ಯವಲ್ಲ; ಸಾರ್ವಜನಿಕರು ಸಹ ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪರಿಸರ ಉಳಿವಿಗೆ ಕೈಜೋಡಿಸಬೇಕು. ವಿಜಯನಗರ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ವಾತಾವರಣವಿದ್ದು, ಗಿಡ ಮರಗಳನ್ನು ಬೆಳಸಲು ಇಲ್ಲಿ ಹೆಚ್ಚಿನ ಅವಕಾಶವಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ ಅವರು ಮಾತನಾಡಿ, ನೀರು ಗಾಳಿ ಇಲ್ಲದೇ ಯಾರಿಗೂ ಸಹ ಬದುಕಲಾಗದು. ಶ್ರೀಮಂತ, ಬಡವ ಎನ್ನದೇ ಎಲ್ಲರಿಗೂ ಗಾಳಿ ನೀರು ಬೇಕಾಗುತ್ತದೆ. ಈ ಭೂಮಿಯಲ್ಲಿ ಎಲ್ಲರೂ ಒಂದೇ. ಪರಿಸರ ಸಂರಕ್ಷಣೆಯ ಕಾರ್ಯ ಎಂಬುದು ಸಂಘಟನಾತ್ಮಕವಾದ, ಸಮೂಹದಿಂದ ಆಗಬೇಕಾದ ಕಾರ್ಯವಾಗಿದೆ. ಇದು ಅವರ ಕಾರ್ಯ, ಅದು ನಮ್ಮ ಕಾರ್ಯ ಎನ್ನುವ ಯಾವುದೇ ಬೇಧ ಭಾವ ಮಾಡದೇ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಭಾಗಿಯಾಗಬೇಕು. ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ತಿಳಿಸಿದರು.

ವಿಜಯನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಜಿಲ್ಲಾಧಿಕಾರಿಗಳ ಕಚೇರಿ, ಅರಣ್ಯ ಇಲಾಖೆಯ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

error: Content is protected !!