WhatsApp Image 2024-07-12 at 5.25.57 PM

ನೂತನ ಎಸ್ಡಿಎಂಸಿ ಅಧ್ಯಕ್ಷರಾಗಿ ವರುಣ್ ಕುಮಾರ್ ನಿಟ್ಟಾಲಿ ಆಯ್ಕೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 12- ತಾಲೂಕಿನ ಹಲಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂತನ ಎಸ್ ಡಿಎಂಸಿ ಅಧ್ಯಕ್ಷರಾಗಿ ವರುಣ್ ಕುಮಾರ್ ನಿಟ್ಟಾಲಿ ಅವರನ್ನು ಶುಕ್ರವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

2024-25ನೇ ಸಾಲಿನ ನೂತನ ಎಸ್ಡಿಎಂಸಿ ಅಧ್ಯಕ್ಷರಾಗಿ ವರುಣ್ ಕುಮಾರ್ ನಿಟ್ಟಾಲಿ, ಉಪಾಧ್ಯಕ್ಷರಾಗಿ ಮಂಜುಳಾ ದೇವಪ್ಪ ಮಡಿವಾಳರ, ಸದಸ್ಯರಾಗಿ ಭೀಮಣ್ಣ ಖಂಡ್ರಿ, ಮುತ್ತಣ್ಣ ಸಂಗಟಿ ವದ್ನಾಳ, ಕೊಟ್ರೇಶ ಮೋರಗೇರಿ, ದೇವಣ್ಣ ಹಳೇಮನಿ, ಮಂಜುಳಾ ದೇವಣ್ಣ ಪೀಟರ್, ಪ್ರಭವ್ವ ಶರಣಪ್ಪ ಹುಡೇದ್ ಅವರನ್ನು ಸರ್ವಾನುಮತದಿಂದ
ಆಯ್ಕೆ ಮಾಡಲಾಯಿತು.

ನಂತರ ನೂತನ ಅಧ್ಯಕ್ಷ ವರುಣ್ ಕುಮಾರ್ ನಿಟ್ಟಾಲಿ ಮಾತನಾಡಿ, ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಂದಿನ ಶಿಕ್ಷಣ ವ್ಯವಸ್ಥೆಗೆ ಅಮೂಲಾಗ್ರ ಬದಲಾವಣೆ ಅವಶ್ಯವಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರಾಗಿ ನೇಮಕಗೊಳಿಸಿದ ಎಲ್ಲರಿಗೂ ಆಭಾರಿಯಾಗಿರುವೆ. ಶಾಲೆಗೆ ಅವಶ್ಯವಿರುವ ಮೂಲಭೂತ ಸೌಕರ್ಯ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುವೆ. ಬರುವ ದಿನಗಳಲ್ಲಿ ಹಲಗೇರಿ ಪ್ರೌಢಶಾಲೆಯನ್ನು ಮಾದರಿ ಶಾಲೆಯನ್ನಾಗಿಸಲು ಶ್ರಮಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶರಣಪ್ಪ ಬಿನ್ನಾಳ, ಮಂಜುನಾಥ ಮ್ಯಾಗಳಮನಿ, ಹನುಮಂತ ಹಳ್ಳಿಕೇರಿ, ಗ್ರಾಪಂ ಸದಸ್ಯರಾದ ನಾಗರಾಜ ಪಾಲಂಕಾರ್, ಕಳಕನಗೌಡ ಹಳೇಮನಿ, ಜಗದೀಶ ಓಜನಹಳ್ಳಿ, ಮಲ್ಲಿಕಾರ್ಜುನ ದಿವಟರ್, ಗ್ರಾಮಸ್ಥರಾದ ಭೀಮಣ್ಣ ಗುಡ್ಲಾನೂರು ದ್ಯಾಮಣ್ಣ ದಮ್ಮೂರು, ಉಮೇಶ ಮಡಿವಾಳರ, ಮುಖ್ಯೋಪಾಧ್ಯಾಯ ಮನೋಹರ ವೇದಪಾಠಕ್, ಶಿಕ್ಷಕರಾದ ಗಂಗಾಧರ ಪತ್ತಾರ, ವೀರಭದ್ರಪ್ಪ ಹಲಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!